ಅರ್ಜಿ ಆಹ್ವಾನ

0
519

 
ಮ0ಗಳೂರು ಪ್ರತಿನಿಧಿ ವರದಿ
2016-17ನೇ ಸಾಲಿಗೆ ಮೆಟ್ರಿಕ್ಪೂರ್ವ ವಿದ್ಯಾರ್ಥಿವೇತನ ಮಂಜೂರಾತಿಗಾಗಿ ಪ.ಜಾತಿ/ಪ.ವರ್ಗದ 1ನೇ ತರಗತಿಗೆ ಪ್ರವೇಶ ಪಡೆದ ಹಾಗೂ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿವೇತನಕ್ಕೆ ಅರ್ಜಿಗಳನ್ನು Online ಮುಖಾಂತರ ನೋಂದಣಿ ಮಾಡದಿರುವ ವಿದ್ಯಾರ್ಥಿಗಳು ಮಾತ್ರ ಈ ವರ್ಷ ಇಲಾಖಾ ವೆಬ್ ಸೈಟ್ www.sw.kar.nic.in ಮುಖಾಂತರ ಅರ್ಜಿ ಸಲ್ಲಿಸಬೇಕು. ಹಾಗೂ ಬೇರೆ ಶಾಲೆಯಿಂದ ವರ್ಗಾವಣೆಗೊಂಡು ದಾಖಲಾಗಿರುವ ವಿದ್ಯಾರ್ಥಿಗಳ ವಿವರವನ್ನು ನಿಗದಿತ ನಮೂನೆಯನ್ನು ಈ ಕಚೇರಿಯಿಂದ ಪಡೆದು ಭರ್ತಿ ಮಾಡಿ ಮುಖ್ಯೋಪಾಧ್ಯಾಯರು ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ,ಅಂಬೇಡ್ಕರ್ ಭವನ, ಕೊಡಿಯಾಲಬೈಲ್, ಮಂಗಳೂರು ಈ ಕಚೇರಿಗೆ ನೀಡಬೇಕಾಗಿ ತಿಳಿಸಿದೆ.
 
 
 
ಅರ್ಜಿ ಸಲ್ಲಿಸಲು ಪ.ಜಾತಿ/ಪ.ವರ್ಗಕ್ಕೆ ಸೇರಿದವರಾಗಿರಬೇಕು, ಪೋಷಕರ ವಾರ್ಷಿಕ ಆದಾಯ ಮಿತಿ 2 ಲಕ್ಷದ ಒಳಗಿರಬೇಕು, (ಸರಕಾರಿ/ಖಾಸತಿ ನೌಕರರಾಗಿದ್ದಲ್ಲಿ ಇತ್ತೀಚಿನ ವೇತನ ದೃಢಪತ್ರ ನೀಡಬೇಕಾಗಿರುತ್ತದೆ), ಕರ್ನಾಟಕ ರಾಜ್ಯದವರಾಗಿರಬೇಕು, ಕಡ್ಡಾಯವಾಗಿ ವಿದ್ಯಾರ್ಥಿಗಳು ಅವರ ಹೆಸರಿನಲ್ಲಿಯೇ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಖಾತೆ ಹೊಂದಿರಬೇಕು ಮತ್ತು ಬ್ಯಾಂಕ್ ಅಕೌಂಟ್ ಚಾಲ್ತಿಯಲ್ಲಿರತಕ್ಕದ್ದು, ವಿದ್ಯಾರ್ಥಿಯು ಯಾವುದೇ ವಿದ್ಯಾರ್ಥಿನಿಲಯದಲ್ಲಿ ವಾಸ್ತವ್ಯವಿರಬಾರದು, ಆಧಾರ್ ಕಾರ್ಡ್ ಹೊಂದಿರಬೇಕು.
 
ವೆಬ್ ಸೈಟ್ ನಲ್ಲಿ ವಿದ್ಯಾರ್ಥಿ/ಪೋಷಕರಿಗೆ ಹಾಗೂ ಮುಖ್ಯೋಪಾದ್ಯಾಯರುಗಳಿಗೆ ಸೂಚನೆಗಳಿದ್ದು ಇದನ್ನು ಪರಿಶೀಲಿಸಿ ಅರ್ಜಿ ಸಲ್ಲಿಸುವುದು.
Online ಮುಂಖಾತರ ಅರ್ಜಿ ಸಲ್ಲಿಸಲು ಕೊನೆಯ ದಿನ ಆಗಸ್ಟ್ 15. ಅರ್ಜಿ ಸಲ್ಲಿಸುವಾಗ ತೊಂದರೆಯಾದಲ್ಲಿ ಇಲಾಖೆಯ ಟೋಲ್ ಫ್ರೀ ದೂರವಾಣಿ ಸಂಖ್ಯೆ:180042521111 ಗೆ ಕರೆಮಾಡಿ ಅಥವಾ ಸಹಾಯಕ ನಿರ್ದೇಶಕರು,ಸಮಾಜಕಲ್ಯಾಣ ಇಲಾಖೆ, ಅಂಬೇಡ್ಕರ್ ಭವನ, ಕೊಡಿಯಾಲಬೈಲ್, ಮಂಗಳೂರು,ಈ ಕಚೇರಿಯನ್ನು (ದೂರವಾಣಿ ಸಂಖ್ಯೆ:2441269/2423619) ಸಂಪರ್ಕಿಸಲು ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಇವರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here