ಅರ್ಜಿ ಆಹ್ವಾನ

0
520

 
ಮ0ಗಳೂರು ಪ್ರತಿನಿಧಿ ವರದಿ
2015-16ನೇ ಸಾಲಿನಲ್ಲಿ ಕ್ರೀಡೆ, ಸಾಂಸ್ಕೃತಿ ಹಾಗೂ ಸಮುದಾಯ ಅಭಿವೃಧ್ಧಿ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಿರುವ ಯುವಜನರಿಗೆ ಹಾಗೂ ನೊಂದಾಯಿತ ಯುವಕ/ಯುವತಿ ಸಂಘಗಳಿಗೆ ರಾಜ್ಯ ಯುವ ಪ್ರಶಸ್ತಿಯನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
 
 
ಆಸಕ್ತ ಯುವಕ/ಯವತಿಯರು 15 ರಿಂದ 35 ವಯೋಮಿತಿಯೊಳಗಿದ್ದು(ದಿನಾಂಕ: 31-03-2016ಕ್ಕೆ 35 ವರ್ಷಗಳು ಮೀರಿರಬಾರದು) ವೈಯಕ್ತಿಕ ಮತ್ತು ಸಾಂಘಿಕ ಪ್ರಸ್ತಾವನೆಯನ್ನು ತಯಾರಿಸುವಾಗ 2015 ಏಪ್ರಿಲ್ 1 ರಿಂದ 2016 ಮಾರ್ಚ್ 31 ರವರೆಗೆ ಯುವಕ/ಯುವತಿ ಮಂಡಲ ಹಾಗೂ ಯುವಕ/ಯುವತಿಯರು ಕೈಗೊಂಡಿರುವ ಸಾಧನೆಗಳನ್ನು ಮಾತ್ರ ಪರಿಗಣಿಸಲಾಗುವುದು. ಈ ಅವಧಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಿದ ಅಥವಾ ಸಹಕರಿಸಿದ ಬಗ್ಗೆ ಕಾರ್ಯಕ್ರಮದ ದಿನಾಂಕ, ಭಾವಚಿತ್ರ, ಪತ್ರಿಕಾ ತುಣುಕುಗಳು, ಆಮಂತ್ರಣ ಪತ್ರಿಕೆ, ಇತ್ಯಾದಿಗಳ ಮೂಲ ಪ್ರತಿಗಳನ್ನು ಎ-4 ಅಳತೆಯಲ್ಲಿ ಸಲ್ಲಿಸಬೇಕು ಮತ್ತು ಸ್ಲೈಡ್ ಗಳನ್ನು ಹಾಗೂ ವಿಡಿಯೋಗಳ ದಾಖಲೆಗಳನ್ನು ಒದಗಿಸಬೇಕು.
 
 
 
 
ವೈಯಕ್ತಿಕ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಯುವಕ/ಯುವತಿಯರು ಯಾವುದೇ ಕ್ರಿಮಿನಲ್ ಮೊಕದ್ದಮೆಗಳಿಲ್ಲದಿರುವ ಬಗ್ಗೆ ಪೊಲೀಸ್ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ, ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಸಲ್ಲಿಸಬೇಕು. ಅರ್ಜಿದಾರರು/ಯುವ ಸಂಘಗಳು ಇಲಾಖೆಯು ಆಯ್ಕೆ ಮಾಡಿರುವ ಸಮುದಾಯ ಚಟುವಟಿಕೆಗಳಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿರತಕ್ಕದ್ದು. ರಾಜ್ಯ ಯುವ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಯುವಕ/ಯುವತಿಯರು ತಾಲೂಕು ಪಂಚಾಯತ್ನಲ್ಲಿರುವ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿಗಳು ಅಥವಾ ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳ ಕ್ರೀಡಾಂಗಣ, ಮಂಗಳೂರು ಇವರಿಂದ ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಯನ್ನು ಪಡೆಯಲು ತಿಳಿಸಿದೆ. ಭರ್ತಿ ಮಾಡಿದ ಅರ್ಜಿ ನಮೂನೆ ಹಾಗೂ ದಾಖಲೆಗಳನ್ನು ಜುಲೈ 20 ರೊಳಗೆ ಸಲ್ಲಿಸುವಂತೆ ಉಪನಿದರ್ೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here