ಅರ್ಜಿ ಆಹ್ವಾನ

0
399

ಉಡುಪಿ ಪ್ರತಿನಿಧಿ ವರದಿ
ವಾಜಪೇಯಿ ನಗರ ವಸತಿ ಯೋಜನೆಯಡಿ 2015-16ನೇ ಸಾಲಿಗೆ ಉಡುಪಿ ನಗರಸಭೆಗೆ 200 ಗುರಿಯನ್ನು ನಿಗಧಿಪಡಿಸಲಾಗಿದ್ದು, ಪ್ರತೀ ಮನೆಯ ಘಟಕ ವೆಚ್ಚ ರೂ.2,00,000/- ಗಳಾಗಿದ್ದು, ಸದರಿ ಮೊತ್ತದಲ್ಲಿ ರೂ1,20,000 ಸರ್ಕಾರದ ಸಹಾಯಧನ ರೂ.30,000/- ಫಲಾನುಭವಿಗಳ ವಂತಿಕೆ ಮತ್ತು ರೂ.50000/- ಬ್ಯಾಂಕಿನಿಂದ ಸಾಲ ಅಥವಾ ಹೆಚ್ಚುವರಿ ಫಲಾನುಭವಿಗಳ ವಂತಿಕೆಯನ್ನು ಒಳಗೊಂಡಿರುತ್ತದೆ.
 
ಪ್ರಸ್ತುತ ಶ್ರೇಣಿ ಅಂದರೆ 2015-16 ರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ರೂ.30000 ಗಳ ಫಲಾನುಭವಿಯ ವಂತಿಗೆಯನ್ನು ಸರ್ಕಾರದ ವತಿಯಿಂದ ಭರಿಸಲಾಗುವುದು. ಉಳಿದ ರೂ.50000 ಬ್ಯಾಂಕ್ ಸಾಲ/ ಫಲಾನುಭವಿಯ ವಂತಿಕೆಯ ರೂಪದಲ್ಲಿರುತ್ತದೆ. ಆದುದರಿಂದ ಎಲ್ಲಾ ಜಾತಿಯ/ ವರ್ಗದ ಸ್ವಂತ ನಿವೇಶನ ಹೊಂದಿರುವ ಅರ್ಹ ಫಲಾನುಭವಿಗಳು ಸೂಕ್ತ ದಾಖಲೆಗಳೊಂದಿಗೆ ವಸತಿ ಸೌಲಭ್ಯವನ್ನು ಪಡೆಯಲು ಏಪ್ರಿಲ್ 15 ರ ಒಳಗೆ ಅರ್ಜಿ ಸಲ್ಲಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ನಗರಸಭೆ ಪೌರಾಯುಕ್ತರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here