ಅರ್ಜಿ ಆಹ್ವಾನ

0
316

 
ವರದಿ: ಸುನೀಲ್ ಬೇಕಲ್
ನಿರುದ್ಯೋಗಿ ಯುವಕ ಯುವತಿಯರಿಗೆ, ಉದ್ಯೋಗವನ್ನು ಅರಸುತ್ತಿರುವವರಿಗೆ ಹಾಗೂ ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ಆಶಾ ಕಿರಣವಾಗಿರುವ ಮತ್ತು ಕೇಂದ್ರ ಸರಕಾರದಿಂದ ಸ್ವ ಉದ್ಯೋಗಕ್ಕಾಗಿ ಅನುಕರಣೀಯ ಮಾದರಿ ಎಂದು ಗುರಿತಿಸಲ್ಪಟ್ಟು ದೇಶದ ಪ್ರತಿ ಜಿಲ್ಲೆಯಲ್ಲೂ ಬೇರೆ ಬೇರೆ ಬ್ಯಾಂಕುಗಳಿಂದ ರುಡ್ ಸೆಟ್ ಮಾದರಿ ಸಂಸ್ಥೆಗಳನ್ನು ಸ್ಥಾಪಿಸಿ ಇಂದು ಅನೇಕ ಯುವ ಜನರಿಗೆ ಸ್ವ ಉದ್ಯೋಗ/ಉದ್ಯೋಗಳನ್ನು ಕಲ್ಪಿಸಿರುವ ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ತರಬೇತಿಯ ವಿವರಗಳು:
 
 
ಬೇಸಿಕ್ ಫೋಟೋಗ್ರಫಿ ಮತ್ತು ವೀಡಿಯೋಗ್ರಪಿ(21 ದಿನಗಳು) – 01.06.16 ರಿಂದ 21.06.16 ರವರೆಗೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ಅಲ್ಲದೇ ಮುಂದಿನ ತಿಂಗಳುಗಳಲ್ಲಿ ಗ್ರಾಮೀಣ ಉದ್ಯಮಶೀಲತಾ ತರಬೇತಿ (12 ದಿನಗಳು), ಸಿಸಿ ಕ್ಯಾಮರ ಅಳವಡಿಕೆ ಸ್ಮಾರ್ಟ್ ಪೋನ್ ರಿಪೇರಿ(15 ದಿನಗಳು), ರಬ್ಬರ್ ಟ್ಯಾಪಿಂಗ್, ಗೃಹ ಬಳಕೆಯ ವಿದ್ಯತ್ ಉಪಕರಣಗಳ ರಿಪೇರಿ (ಫ್ಯಾನ್, ಮಿಕ್ಸಿ, ಎಲೆಕ್ಟ್ರಿಕಲ್ ರಿಪೇರಿ), ಟಿವಿ (ಎಲ್ಇಡಿ) ಮತ್ತು ಎಲೆಕ್ಟ್ರೋನಿಕ್ಸ್ ಗಳ ರಿಪೇರಿ, ದ್ವಿ ಚಕ್ರ ವಾಹನ ರಿಪೇರಿ, ಮಹಿಳೆಯರ ವಸ್ತ್ರ ವಿನ್ಯಾಸ (21 ದಿನಗಳು), ಫ್ಯಾಷನ್ ಡಿಸೈನಿಂಗ್, ಬ್ಯೂಟಿ ಪಾರ್ಲರ್ ಮೇನೇಜ್ಮೆಂಟ್, ಮೆನ್ಸ್ ಪಾರ್ಲರ್ ಮೇನೇಜ್ಮೆಂಟ್, ಕಂಪ್ಯೂಟರ್ ಡಾಟಾ ಎಂಟ್ರಿ ಅಪರೇಷನ್, ಕಂಪ್ಯೂಟರ್ ಹಾರ್ಡ್ ವೇರ್ ಮತ್ತು ನೆಟ್ ವರ್ಕಿಂಗ್, ಕಂಪ್ಯೂಟರ್ ಟ್ಯಾಲಿ (30 ದಿನಗಳು), ಕಂಪ್ಯೂಟರ್ ಡಿ.ಟಿ.ಪಿ(45 ದಿನಗಳು), ಆಹಾರ ಉತ್ಪನ್ನಗಳ ತಯಾರಿಕೆ ಮತ್ತು ಸಂಸ್ಕರಣೆ (15 ದಿನಗಳು) ಅಲ್ಲದೇ ಈ ವರ್ಷದ ಹೊಸ ತರಬೇತಿಯಾಗಿ ಫ್ಲಂಬಿಂಗ್ ವರ್ಕ್ಸ್ (15 ದಿನಗಳು) ಮುಂತಾದ ತರಬೇತಿಗಳನ್ನು ಕೂಡ ಹಮ್ಮಿಕೊಳ್ಳಲಾಗಿದೆ.
 
 
 
ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ತರಬೇತಿಯಲ್ಲಿ ಕೌಶಲ್ಯದ ಜೊತೆಗೆ ವ್ಯಾಪಾರ ವಹಿವಾಟು, ಸೇವಾ ಕ್ಷೇತ್ರ, ಕೈಗಾರಿಕೆ ಹಾಗೂ ಇನ್ನಿತರ ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆ, ಸರಕಾರದ ಸಬ್ಸಿಡಿ ಯೋಜನೆಗಳು, ಬ್ಯಾಂಕ್ ಸಾಲ ಪಡೆಯುವ ವಿಧಾನ ಹಾಗೂ ಇನ್ನಿತರ ಮಹತ್ವದ ಉದ್ಯಮಶೀಲತಾ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಲಾಗುವುದು. ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ತರಬೇತಿಗಳಿಗೆ ಬರಲು 18 ರಿಂದ 45 ವರ್ಷಗಳ ವಯೋಮಿತಿಯ ಕನ್ನಡ ಓದು ಬರಹ ಬಲ್ಲ ಯುವಕ/ಯುವತಿಯರು ಅರ್ಜಿಯನ್ನು ಬಿಳಿ ಹಾಳೆಯಲ್ಲಿ ಅಥವಾ ಸಂಸ್ಥೆಯ ವೆಬ್ ಸೈಟ್ ನಿಂದ (www.rudsetitraining.org) ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ : ನಿರ್ದೇಶಕರು, ರುಡ್ ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ – 574 240, ಬೆಳ್ತಂಗಡಿ ತಾಲೂಕು, ದ.ಕ. ಇವರಿಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08256-236404ಗೆ ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here