ಅರ್ಜಿ ಆಹ್ವಾನ

0
625

 
ವರದಿ: ಸುನೀಲ್ ಬೇಕಲ್
ರುಡ್ಸೆಟ್ ಸಂಸ್ಥೆ, ಉಜಿರೆಯಲ್ಲಿ ಪ್ರಧಾನಮಂತ್ರಿ ಕಛೇರಿ ಆಝಶಯದಂತೆ ನಡೆಯಲಿರುವ ಉಚಿತ ಲಘು ವಾಹನ ಚಾಲನಾ (ಕಾರು ಚಾಲನೆ) ಕುರಿತಾದ 15 ದಿನಗಳ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
 
 
 
ಊಟ ವಸತಿ ಮತ್ತು ತರಬೇತಿ ಸಂಪೂರ್ಣ ಉಚಿತ. ವಾಹನ ಚಾಲನಾ ಕ್ಷೇತ್ರದಲ್ಲಿ ಸ್ವ ಉದ್ಯೋಗ/ವೇತನ ಉದ್ಯೋಗ ಕೈಗೊಂಡು ಸ್ವಾವನಂಬಿ ಬದುಕು ಕಂಡುಕೊಳ್ಳಲು ನೆರವಾಗಬಲ್ಲ ತರಬೇತಿಯಲ್ಲಿ ಕ್ಷೇತ್ರದ ಕುರಿತಾದ ಎಲ್ಲಾ ಮಗ್ಗುಲಗಳ ಬಗ್ಗೆ ವಿವರ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ನೀಡಲಾಗುವುದು. ಉದ್ಯಮಶೀಲತೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿ ಮಾಹಿತಿ ನೀಡಲಾಗುವುದು.
 
 
 
ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ತರಬೇತಿಗಳಿಗೆ ಬರಲು 18 ರಿಂದ 45 ವರ್ಷಗಳ ವಯೋಮಿತಿಯ, ಎಂಟನೇ ತರಗತಿಯಲ್ಲಿ ತೇರ್ಗಡೆಯಾದ ಯುವಕ/ಯುವತಿಯರು ಅರ್ಜಿಯನ್ನು ಬಿಳಿ ಹಾಳೆಯಲ್ಲಿ ಅಥವಾ ಸಂಸ್ಥೆಯ ವೆಬ್ ಸೈಟ್ ನಿಂದ (www.rudsetitraining.org) ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ : ನಿರ್ದೇಶಕರು, ರುಡ್ ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ – 574 240, ಬೆಳ್ತಂಗಡಿ ತಾಲೂಕು, ದ.ಕ. ಇವರಿಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08256-236404ಗೆ ಸಂಪರ್ಕಿಸಬಹುದು. ಆಸಕ್ತಿಯುಳ್ಳ ಯುವಕರು ಕೂಡಲೇ ಅರ್ಜಿ ಸಲ್ಲಿಸಬಹುದು.

LEAVE A REPLY

Please enter your comment!
Please enter your name here