ಅರ್ಜಿ ಆಹ್ವಾನ

0
355

 
ಉಡುಪಿ ಪ್ರತಿನಿಧಿ ವರದಿ
ತಾಲೂಕಿನಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಬನ್ನಂಜೆ ಬೆಳ್ಳಂಪಳ್ಳಿ ಪೆರ್ಡೂರು, ಗೋಳಿಯಂಗಡಿ ಮತ್ತು ಕುದಿ-ಕೊಡಿಬೆಟ್ಟು ಹಾಗೂ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಬ್ರಹ್ಮಾವರ ಮತ್ತು ಪಟ್ಲ ಈ ವಿದ್ಯಾರ್ಥಿ ನಿಲಯಗೆ 2016-17 ನೇ ಸಾಲಿನಲ್ಲಿ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
 
 
ಈ ವಿದ್ಯಾರ್ಥಿ ನಿಲಯಗಳಲ್ಲಿ 5 ರಿಂದ 10ನೇ ತರಗತಿಗಳಲ್ಲಿ ವರ್ಗ-1 2ಎ, 2ಬಿ, 3ಎ, 3ಬಿ ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳು ವ್ಯಾಸಂಗ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಪ್ರವೇಶಾವಕಶವಿದ್ದು ವರ್ಗ-2ಎ, 2ಬಿ, 3ಎ ಮತ್ತು 3ಬಿ ಗೆ ಸೇರಿದ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ44,500/- ರ ಒಳಗಿರಬೇಕು. ವರ್ಗ-1 ರ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ.1 ಲಕ್ಷದೊಳಗಿರಬೇಕು.
 
 
 
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಆದಾಯದ ಮಿತಿ ಇರುವುದಿಲ್ಲ. ಪ್ರವೇಶ ಬಯಸುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಜಾತಿ/ ಆದಾಯ ಪ್ರಮಾಣಪತ್ರ, 2015-16ನೇ ಸಾಲಿನ ವಾರ್ಷಿಕ ಪರೀಕ್ಷೆಯ ಅಂಕಪಟ್ಟಿ, ಪಡಿತರ ಚೀಟಿ ಪ್ರತಿ ಪ್ರವೇಶ ಕೋರಿರುವ ವಿದ್ಯಾರ್ಥಿ ನಿಲಯದಿಂದ ವಾಸಸ್ಥಳಕ್ಕೆ ಇರುವ ದೂರದ ಪ್ರಮಾಣಪತ್ರ ವರ್ಗಾವಣೆ ಪತ್ರದ ಪ್ರತಿ, ಎರಡು ಭಾವಚಿತ್ರಗಳೊಂದಿಗೆ ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿಯನ್ನು ಈ ಕಚೇರಿಗೆ ಅಥವಾ ಸಂಬಂಧಪಟ್ಟ ವಿದ್ಯಾರ್ಥಿ ನಿಲಯದ ನಿಲಯ ಮೇಲ್ವಿಚಾರಕರಿಗೆ ಮೇ 30 ರೊಳಗೆ ಸಲ್ಲಿಸಬಹುದಾಗಿದೆ.
 
 
ಅರ್ಜಿಗಳನ್ನು ವಿದ್ಯಾರ್ಥಿ ನಿಲಯಗಳಿಂದ ಅಥವಾ ಗ್ರಾಮ ಪಂಚಾಯತ್ಗಳಿಂದ ಪಡೆಯಬಹುದಾಗಿದೆ ಎಂದು ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here