ಅರಮನೆ ಪಂಚಾಂಗ ಅನುಸಾರ ಆಚರಣೆ

0
407

 
ಮೈಸೂರು ಪ್ರತಿನಿಧಿ ವರದಿ
ರಾಜಮನೆತನದಿಂದ 10ನೇ ದಿನವೇ ವಿಜಯದಶಮಿ ಆಚರಣೆ ನಡೆಯಲಿದೆ ಎಂದು ಯದುವಂಶದ ಮಹಾರಾಜ ಯದುವೀರ ಹೇಳಿದ್ದಾರೆ.
 
 
ಮೈಸೂರಲ್ಲಿ ಮಾತನಾಡಿದ ಮಹಾರಾಜರು, ಅರಮನೆ ಪಂಚಾಂಗಕ್ಕೆ ಅನುಸಾರವಾಗಿ ಆಚರಣೆ ನಡೆಯಲಿದೆ. ನಮಗೂ, ಸರ್ಕಾರಿ ಕಾರ್ಯಕ್ರಮಗಳಿಗೆ ಯಾವ ಸಂಬಂಧ ಇಲ್ಲ. ನಮ್ಮ ಪೂಜಾ ವಿಧಿವಿಧಾನಗಳು ನಿಗದಿಯಂತೆ ನಡೆಯುತ್ತದೆ. ಖಾಸಗಿ ದರ್ಬಾರ್ ಕುರಿತು ಧರ್ಮಾಧಿಕಾರಿಗಳು ನಿರ್ಧರಿಸಲಿದ್ದಾರೆ. ಅರಮನೆ ಪಂಚಾಂಗದ ಪ್ರಕಾರ ಸಮಯ ನಿಗದಿಯಾಗಲಿದೆ ಎಂದಿದ್ದಾರೆ.
 
 
ದಸರಾ ಆಚರಣೆಯ ಸಿದ್ಧತೆ ವಿವರ:
ವಿಶ್ವವಿಖ್ಯಾತ ಮೈಸೂರು ದಸರಾವನ್ನು ಅಕ್ಟೋಬರ್ 1 ರಿಂದ 11 ರ ವರೆಗೆ ಒಟ್ಟು ಹನ್ನೊಂದು ದಿನ ಅದ್ಧೂರಿಯಾಗಿ ನಡೆಯಲಿದೆ. ಆಗಸ್ಟ್ 21ರಂದು ಹುಣಸೂರಿನ ವೀರನಹೊಸಳ್ಳಿಯಿಂದ ಹೊರಡುವ ಗಜಪಯಣ ಅಶೋಕಪುರಂನಲ್ಲಿರುವ ಅರಣ್ಯಭವನಕ್ಕೆ ಆಗಮಿಸಲಿದೆ. ಆಗಸ್ಟ್ 26ರಂದು ಆನೆಗಳನ್ನು ಅರಮನೆಯಲ್ಲಿ ಸ್ವಾಗತಿಸಲಾಗುತ್ತದೆ.
ನಾಡೋಜ, ಕವಿ ಚೆನ್ನವೀರ ಕಣವಿ ಅವರು ದಸರಾ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಆಗಸ್ಟ್ 16ರಂದು ದಸರಾ ವೆಬ್‍ಸೈಟಿಗೆ ಚಾಲನೆ ನೀಡಲಾಗುವುದು. ಈ ಬಾರಿ ದಸರಾವನ್ನು ವಿಷಯಾಧಾರಿತವಾಗಿ ಆಚರಿಸಲು ಯೋಜಿಸಿದ್ದು, ಹಸಿರು ಹಾಗೂ ನೀರಿನ ಸಂರಕ್ಷಣೆ ಮುಖ್ಯ ವಿಷಯವಾಗಿರಲಿದೆ.

LEAVE A REPLY

Please enter your comment!
Please enter your name here