ಅರಣ್ಯ ಕೈಗಾರಿಕಾ ಘಟಕಕ್ಕೆ ಸಚಿವ ಎಚ್.ಕೆ. ಪಾಟೀಲ್ ಭೇಟಿ

0
263

ಮ0ಗಳೂರು ಪ್ರತಿನಿಧಿ ವರದಿ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಅವರು ಶನಿವಾರ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಮಂಗಳೂರು ಘಟಕದ ಕಛೇರಿಗೆ ಭೇಟಿ ನೀಡಿದರು.
 
 
 
ಈ ಸಂದರ್ಭದಲ್ಲಿ ಸಚಿವರು ಮಾತನಾಡಿ, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮವು ನನ್ನ ತಂದೆಯವರಾದ ಮಾಜಿ ಸಚಿವ ದಿ. ಕೆ.ಹೆಚ್. ಪಾಟೀಲ್ ಅವರು ರಾಜ್ಯದ ಅರಣ್ಯ ಸಚಿವರಾಗಿದ್ದಾಗ ಪ್ರಾರಂಭಿಸಿದ್ದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈಗ ಅದೇ ರೀತಿಯಲ್ಲಿ ನಿಗಮವು ಉಳಿಯಬೇಕು ಕ್ರಿಯಾಶೀಲವಾಗಬೇಕು ಹಾಗೂ ಅರಣ್ಯ ಕಿರು ಉತ್ಪನ್ನಗಳನ್ನು ಉಪಯೋಗಿಸಿ ಸಣ್ಣ ಉದ್ಯಮ ಪ್ರಾರಂಭಿಸುವ ಮೂಲಕ ಉದ್ಯೋಗ ಸೃಷ್ಟಿಯಾಗುವಂತೆ ಯೋಜನೆ ನಿರೂಪಿಸಬೇಕೆಂದು ತಿಳಿಸಿದರು.
 
 
ನಿಗಮದ ಕಚೇರಿ ಇರುವ ಸ್ಥಳವನ್ನು ವೀಕ್ಷಿಸಿದ ಸಚಿವರು, ಪ್ರಾಕೃತಿಕ ಸೌಂದರ್ಯದಿಂದ ಕೂಡಿರುವ ಈ ಪ್ರದೇಶವನ್ನು ಹೀಗೆಯೇ ಉಳಿಸಿ ಬೆಳೆಸಿದ್ದಲ್ಲಿ ಮಂಗಳೂರಿನ ನಾಗರೀಕರಿಗೆ ಪ್ರಯೋಜನವಾಗುವುದೆಂದು ತಿಳಿಸಿದರು. ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ನಿಗಮದ ಅಧ್ಯಕ್ಷರಾದ ಎಸ್.ಈ.ಸುಧೀಂದ್ರರವರು ಮಾತನಾಡಿ ನಿಗಮವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ತ್ವರಿತವಾಗಿ ಕಾರ್ಯೋನ್ಮುಖರಾಗುವುದಾಗಿ ಸಚಿವರಿಗೆ ಭರವಸೆ ನೀಡಿದರು.
 
 
 
ಮಾಜಿ ಸಚಿವ ಬಿ.ಕೆ. ಚಂದ್ರಶೇಖರ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ವೇಳೆ ನಿಗಮದ ಪ್ರಾದೇಶಿಕ ವ್ಯವಸ್ಥಾಪಕರಾದ ಎಂ.ಜಿ.ಅಲೆಗ್ಸಾಂಡರ್ ಹಾಗೂ ಪಂಚಾಯತ್ ರಾಜ್ ಹಾಗೂ ಇತರ ಇಲಾಖಾ ಅಧಿಕಾರಿಗಳು ಸಚಿವರೊಂದಿಗೆ ಹಾಜರಿದ್ದರು.

LEAVE A REPLY

Please enter your comment!
Please enter your name here