ಅಯ್ಯಯ್ಯೋ …ಅಯ್ಯಯ್ಯೋ ಪ್ಲೀಸ್…ʻವಾರ್ತೆ ವರದಿಗೆ ಫಲಶ್ರುತಿ!ʼ

0
802

ಲಾಕ್‌ ಡೌನ್…ಲಾಕ್‌ ಡೌನ್…‌ ವಾರ್ತೆ ವರದಿಗೆ ಫಲಶ್ರುತಿ

ಮೂಡುಬಿದಿರೆ: ತುರ್ತು ಸಂದರ್ಭದಲ್ಲಿ ಏನ್‌ ಮಾಡೋದು ಸ್ವಾಮೀ..? ಈ ಪ್ರಶ್ನೆಗೆ ಉತ್ತರ ಯಾರ್‌ ಕೊಡ್ತಾರೆ…??? ಎಂಬ ವಾರ್ತೆ.ಕಾಂ ವರದಿಗೆ ಫಲಶ್ರುತಿ ಸಿಕ್ಕಿದೆ.
ಕೊರೊನಾ ಮಾರಿಯಿಂದ ಅನೇಕಾನೇಕ ಸಮಸ್ಯೆಗಳು ಉದ್ಭವಿಸುತ್ತಿದೆ. ಕೊರೊನಾ ರೋಗಭೀತಿ ಒಂದೆಡೆಯಾದರೆ ಅದಕ್ಕಿಂತಲೂ ಮುಖ್ಯವಾಗಿ ಕೊರೊನಾ ನಿಯಂತ್ರಣಕ್ಕಾಗಿ ʻರಸ್ತೆʼಮುಚ್ಚುವ ಕಾರ್ಯ ಮಾಡಲಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂತಾವರ ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ‌ ಬೆಳುವಾಯಿ ಸಂಪರ್ಕಿಸುವ ಅಂಬಲಪದವು ರಸ್ತೆಯ ಗಡಿಭಾಗವನ್ನು ಕೋರಾನ ನಿಯಂತ್ರಣಕ್ಕಾಗಿ ಮುಚ್ಚಿದ್ದಾರೆ. ಆದೇಶ ಪಾಲನೆ ನಿಜಕ್ಕೂ ಮೆಚ್ಚತಕ್ಕಂತಹುದು. ಆದರೆ ಇದರಿಂದಾಗುವ ಸಮಸ್ಯೆಯ ಬಗ್ಗೆ ಮುಂದಾಲೋಚನೆ ಮಾಡಿದಂತೆ ಕಂಡು ಬಂದಿಲ್ಲ.

ವಾರ್ತೆ.ಕಾಂ ವರದಿ ಗಮನ ಸೆಳೆಯಿತು…

ಈ ರಸ್ತೆಗೆ ಜೆ.ಸಿ.ಬಿ ಬಳಸಿ ಮಣ್ಣು ಹಾಕಿ ಮುಚ್ಚಲಾಗಿದೆ. ಇದರಿಂದ ಉಡುಪಿ ಜಿಲ್ಲೆಯ ಕಾಂತಾವರ ಗ್ರಾಮದ ನಾಗರೀಕರಿಗೆ ತೊಂದರೆಯಾಗುತ್ತಿದೆ ಎಂಬ ಅಂಶವನ್ನು ಮುಂದಿಟ್ಟು ವಾರ್ತೆ.ಕಾಂ ವಿಶೇಷ ವರದಿ ಪ್ರಸಾರ ಮಾಡಿತ್ತು. ಸಂಬಂಧಪಟ್ಟವರ ಗಮನಕ್ಕೆ ತರುವ ಪ್ರಯತ್ನ ಮಾಡಿತ್ತು. ಇದೀಗ ವಾರ್ತೆ ವರದಿಗೆ ಫಲಶ್ರುತಿ ಲಭಿಸಿದೆ. ರಸ್ತೆಗೆ ಹಾಕಿದ್ದ ಮಣ್ಣು ತೆರವುಗೊಳಿಸುವ ಕಾರ್ಯವಾಗಿದೆ. ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ವಾರ್ತೆ ವರದಿಗೆ ಸರ್ವತ್ರ ಶ್ಲಾಘನೆ ಲಭಿಸುವಂತಾಗಿದೆ.

LEAVE A REPLY

Please enter your comment!
Please enter your name here