ಅಯ್ಯಪ್ಪನ ಸನ್ನಿಧಿಯಲ್ಲಿ ಕಾಲ್ತುಳಿತ

0
332

ರಾಷ್ಟ್ರೀಯ ಪ್ರತಿನಿಧಿ ವರದಿ
ಪವಿತ್ರ ಕ್ಷೇತ್ರ ಕೇರಳದ ಶಬರಿಮಲೆಯಲ್ಲಿ ದೇವಸ್ಥಾನದಲ್ಲಿ ಭಾರೀ ಕಾಲ್ತುಳಿತ ಸಂಭವಿಸಿದೆ. ಭಾನುವಾರ ದೇವಸ್ಥಾನದಲ್ಲಿ ಭಾರೀ ಜನಸ್ತೋಮ ಹಿನ್ನೆಲೆಯಲ್ಲಿ ನೂಕುನುಗ್ಗಲು ಉಂಟಾಗಿತ್ತು.
 
 
 
ಭಾರೀ ಕಾಲ್ತುಳಿತ ಪರಿಣಾಮ 40ಕ್ಕೂ ಹೆಚ್ಚು ಭಕ್ತರಿಗೆ ಗಾಯಗಳಾಗಿದ್ದು, ಇವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳಿಗೆ ಕೊಟ್ಟಾಯಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಕೆಲ ಭಕ್ತರಿಗೆ ಸನ್ನಿಧಾನದಲ್ಲೇ ಚಿಕಿತ್ಸೆ ನೀಡಲಾಗಿದೆ.
 
 
 
ಮಕರ ಪೂಜೆ ನಿಮಿತ್ತ ಸ್ವಾಮಿ ಅಯ್ಯಪ್ಪ ಸ್ವಾಮಿಗೆ ಭಾನುವಾರ ಸಂಜೆ “ತಂಗ ಅಂಗಿ” ಎಂಬ ವಿಶೇಷ ಪೂಜೆ ಮತ್ತು ಮೆರವಣಿಗೆ ಮಾಡುವ ಸಂದರ್ಭದಲ್ಲಿ ದೇವರ ದರ್ಶನ ಪಡೆಯಲು ಭಕ್ತರು ಮುಂದಾಗಿದ್ದರಿಂದ ನೂಕು ನುಗ್ಗಲು ಸಂಭವಿಸಿ ಕಾಲ್ತುಳಿತವಾಗಿದೆ ಎಂದು ತಿಳಿದುಬಂದಿದೆ.
 
 
 
2011ರಲ್ಲಿ ಮಕರ ಜ್ಯೋತಿ ವೀಕ್ಷಿಣೆ ವೇಳೆ ಸಂಭವಿಸಿದ್ದ ಭೀಕರ ಕಾಲ್ತುಳಿತದ ವೇಳೆ 106 ಭಕ್ತರು ಸಾವನ್ನಪ್ಪಿ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

LEAVE A REPLY

Please enter your comment!
Please enter your name here