ಅಯೋ ಬ್ರೆಡ್ ತಿಂದ್ರೋ ಕ್ಯಾನ್ಸರ್…

0
363

ವಿಶೇಷ ಲೇಖನ
ಇಲ್ಲಿದೆ ಎಚ್ಚರಿಕೆಯ ಗಂಟೆ…!
ನೀವು ಬ್ರೆಡ್ , ಪಿಜ್ಜಾ, ಬರ್ಗರ್ ಪ್ರಿಯರೇ.. ತಿನ್ನೋಕೂ ಮುನ್ನ ಎಚ್ಚರ ವಹಿಸಿ… ಬ್ರೆಡ್ ನಲ್ಲಿ ವಿಷಕಾರಿ ಅಂಶವಿದ್ದು, ಬ್ರೆಡ್ ತಿಂದರೆ ಕ್ಯಾನ್ಸರ್ ಬರುತ್ತದೆಯಂತೆ… ಹೀಗಾಂತ ಸಂಶೋಧನೆಯೊಂದು ಹೇಳುತ್ತಿದೆ. ವಿಜ್ಞಾನ ಮತ್ತು ಪರಿಸರ ಸಂಸ್ಥೆ ನಡೆಸಿದ ಸಂಶೋಧನೆಯಿಂದ ಭಯಾನಕ ಸತ್ಯ ಬಯಲಾಗಿದೆ.
 
 
ದೆಹಲಿಯಲ್ಲಿ ಕೆಲವು ಕಡೆ ಮಾರಾಟವಾಗಿರುವ ಬ್ರೆಡ್ ನ್ನು ಪರೀಕ್ಷೆಗೊಳಪಡಿಸಿರುವ ವಿಜ್ಞಾನ ಮತ್ತು ಪರಿಸರ ಸಂಸ್ಥೆ(ಸಿಎಸ್ ಇ), ಸಾಮಾನ್ಯವಾಗಿ ಬಳಕೆಯಾಗುವ ಬ್ರೆಡ್ ಮಾದರಿಯಲ್ಲಿ ಪೊಟಾಷಿಯಂ ಬ್ರೊಮೇಟ್ ಹಾಗೂ ಐಯೋಡೇಟ್ ಅಂಶಗಳನ್ನು ಪತ್ತೆ ಹಚ್ಚಿದೆ.
 
 
 
ಬ್ರೆಡ್ ತಯಾರಿಸುವಾಗ ಭಾರತೀಯ ಬ್ರೆಡ್ ಉತ್ಪಾದಕರು ಹಿಟ್ಟನ್ನು ಹದಗೊಳಿಸಲು ಪೊಟಾಷಿಯಂ ಬ್ರೊಮೇಟ್ ಹಾಗೂ ಪೊಟಾಷಿಯಂ ಐಯೋಡೇಟ್ ಗಳನ್ನು ಬಳಸುವುದಾಗಿ ಸಿಎಸ್ ಇ ಯ ಪೊಲ್ಯುಶನ್ ಮಾನಿಟರಿಂಗ್ ಲ್ಯಾಬೊರೇಟರಿ ಹೇಳಿದೆ.
 
 
ಬ್ರೊಮೇಟ್ ಅನ್ನು ಬ್ರೊಮೈಡ್ ಆಗಿ ಪರಿವರ್ತಿಸಬೇಕು. ಬ್ರೊಮೈಡ್ ಆರೋಗ್ಯಕ್ಕೆ ಹಾನಿಕರ ಅಲ್ಲ. ಆದರೆ ಭಾರತದಲ್ಲಿ ಬ್ರೊಮೇಟ್ ಅನ್ನು ಬ್ರೊಮೈಡ್ ಆಗಿ ಪರಿವರ್ತಿಸಿಲ್ಲ. ಪರ್ಫೆಕ್ಟ್ ಬ್ರೆಡ್, ಹಾರ್ವೆಸ್ಟ್ ಗೋಲ್ಡ್ ಬ್ರೆಡ್, ಬ್ರಿಟಾನಿಯಾ ಬ್ರೆಡ್ ನಲ್ಲಿ ಪೊಟ್ಯಾಷಿಯಂ ಬ್ರೊಮೇಟ್ ಅಂಶ ಹೆಚ್ಚಿನ ಪ್ರಮಾಣದಲ್ಲಿದೆ ಎಂದು ವಿಜ್ಞಾನ ಮತ್ತು ಪರಿಸರ ಸಂಸ್ಥೆಯ ಪರೀಕ್ಷೆಯಿಂದ ಪತ್ತೆಯಾಗಿದೆ.
 
 
 
ಪರ್ಫೆಕ್ಟ್ ಬ್ರೆಡ್ ನ ಲೆಬಲ್ ಮೇಲೆ ಪೊಟ್ಯಾಷಿಯಂ ಬ್ರೊಮೇಟ್ ಅಂಶವಿದೆ. ಆದರೆ ಬ್ರಿಟಾನಿಯಾ ಕಂಪನಿ ಪೊಟ್ಯಾಷಿಯಂ ಬ್ರೊಮೇಟ್ ಬಳಕೆ ನಿರಾಕರಿಸಿದೆ ಎಂದು ತಿಳಿದುಬಂದಿದೆ.
 
 
 
ಪೊಟಾಷಿಯಂ ಬ್ರೊಮೇಟ್ ನ್ನು ಕ್ಯಾನ್ಸರ್ ಉಂಟುಮಾಡಬಹುದಾದ ರಾಸಾಯನಿಕ ವರ್ಗಕ್ಕೆ 1999 ಇಂಟರ್ ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್(ಐಆರ್ ಸಿ) ಸೇರಿಸಿತ್ತು. ಈ ರಾಸಾಯನಿಕ ಅಂಶಗಳು ಕಿಡ್ನಿ, ಥೈರಾಯಿಡ್ ಹಾಗೂ ಹೊಟ್ಟೆ ಕ್ಯಾನ್ಸರ್ ಗೆ ಕಾರಣವಾಗುತ್ತದೆ.
 
 
 
ಇದರಿಂದ ಯೂರೋಪಿಯನ್ ಯೂನಿಯನ್ ನಲ್ಲಿ ಪೊಟ್ಯಾಷಿಯಂ ಬ್ರೊಮೇಟ್ ನ್ನು ನಿಷೇಧಿಸಲಾಗಿದೆ. ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಚೀನಾ, ಶ್ರೀಲಂಕಾ, ಬ್ರೆಜಿಲ್ ನಲ್ಲೂ ಪೊಟ್ಯಾಷಿಯಂ ಬ್ರೊಮೇಟ್ ಅನ್ನು ನಿಷೇಧಿಸಲಾಗಿದೆ.

LEAVE A REPLY

Please enter your comment!
Please enter your name here