ಅಯನಾ ವಿ ರಮಣ್‌ ಗೆ ಮೆರಿಟ್ ಸ್ಕಾಲರ್ಶಿಪ್

0
412
ಅಯನಾ ವಿ ರಮಣ್‌ ಅವರಿಗೆ ಸ್ಕಾಲರ್‌ ಶಿಪ್‌ ದೊರೆತಿದೆ

ಮೂಡುಬಿದಿರೆ: ದ್ವಿತೀಯ ಪಿ.ಯು.ಸಿ.ಯಲ್ಲಿ ೯೫ಶೇಕಡಾ ಅಂಕಗಳಿಸಿದ ಹಿನ್ನಲೆಯಲ್ಲಿ ಮುಂದಿನ ಪದವಿ ವಿದ್ಯಾಭ್ಯಾಸಕ್ಕಾಗಿ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಸಚಿವಾಲಯ ಕೊಡಮಾಡುವ ಮೆರಿಟ್ ಸ್ಕಾಲರ್‌ಶಿಪ್‌ಗೆ ಅಯನಾ ವಿ ರಮಣ್ ಆಯ್ಕೆಯಾಗಿದ್ದಾರೆ. ಈಗಾಗಲೇ ಮೊದಲ ವರ್ಷದ ಸ್ಕಾಲರ್‌ಶಿಪ್ ಮೊತ್ತವಾಗಿರುವ ಹತ್ತು ಸಾವಿರ ರೂಪಾಯಿಗಳನ್ನು ಅಯನಾ ಸ್ವೀಕರಿಸಿದ್ದು ಮುಂದಿನ ಎರಡು ವರ್ಷಗಳ ಪದವಿ ವ್ಯಾಸಂಗಕ್ಕೂ ಇದೇ ಮೊತ್ತ ದೊರಕಲಿದೆ.

ಇಲ್ಲಿನ ಆಳ್ವಾಸ್ ಕಾಲೇಜಿನಲ್ಲಿ ಮೆರಿಟ್ ದತ್ತು ಸ್ವೀಕಾರದ ವಿದ್ಯಾರ್ಥಿಯಾಗಿ ಪ್ರಥಮ ಕಲಾ ಪದವಿ ಓದುತ್ತಿರುವ ಅಯನಾ ಕಳೆದ ಐದು ವರ್ಷಗಳಿಂದ ನಿರಂತರ ಸಾಂಸ್ಕೃತಿಕ ದತ್ತು ಸ್ವೀಕಾರದ ವಿದ್ಯಾರ್ಥಿಯಾಗಿ ಆಳ್ವಾಸ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.  ಬಹುಮುಖ ಪ್ರತಿಭೆಯ ಕಲಾವಿದೆಯಾಗಿರುವ ಅಯನಾ ಆಳ್ವಾಸ್ ಉಪನ್ಯಾಸಕಿ ಡಾ|ಮೂಕಾಂಬಿಕಾ ಜಿ.ಎಸ್, ಕಲಾವಿದ ಕೆ.ವಿ.ರಮಣ್ ದಂಪತಿಯ ಪುತ್ರಿ.

LEAVE A REPLY

Please enter your comment!
Please enter your name here