ಅಮ್ಮಾ ಎದ್ಧೇಳಮ್ಮ…

0
271

 
ವಿಶೇಷ ವರದಿ
ಸಾವನ್ನಪ್ಪಿದ ತಾಯಿ ಆನೆಯನ್ನು ಎಬ್ಬಿಸಲು ಮರಿಯಾನೆ ಸತತ 24 ಗಂಟೆಗಳ ಕಾಲ ಹರಸಾಹಸಪಟ್ಟ ಮನಕಲಕುವ ಘಟನೆ ತಮಿಳುನಾಡಿನ ಕೊಯಂಬತ್ತೂರಿನ ನರಸೀಪುರಮ್ ಗ್ರಾಮದ ಬಳಿ ನಡೆದಿದೆ.
 
25 ವರ್ಷದ ಆನೆ ಹಳ್ಳದಲ್ಲಿ ಬಿದ್ದು ಸಾವನ್ನಪ್ಪಿದ್ದು, ಅದನ್ನು ತಿಳಿಯದ ಮರಿ ಬೇರೆ ಎಲ್ಲಿಯೂ ಹೋಗದೆ ಸಂಪೂರ್ಣ ಒಂದು ದಿನ ಸತ್ತ ತಾಯಿಯ ಪಕ್ಕದಲ್ಲೇ ಕೂತು ಎದ್ದೇಳು ಅಮ್ಮ… ಎಂದು ಎಬ್ಬಿಸಲು ಪ್ರಯತ್ನಿಸುತ್ತಿತ್ತು. ತಾಯಿಯ ಸುತ್ತ ಸುತ್ತುತ್ತ, ಮೇಮೇಲೆ ಏರುತ್ತ ಏಳುವಂತೆ ಕಾಡುತ್ತಿರುವ ಕಂದನ ಕರುಣಾಜನಕ ದೃಶ್ಯ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಈ ಹೃದಯವಿದ್ರಾವಕ ಚಿತ್ರ ಪ್ರಾಣಿಗಳು ಭಾವನೆಗಳನ್ನು ವ್ಯಕ್ತ ಪಡಿಸುತ್ತವೆ ಎಂಬುದನ್ನು ಸಾಬೀತು ಪಡಿಸುವಂತಿದೆ.
 
 
ಆಹಾರ ಕೊಟ್ಟರೂ ತಿನ್ನದ ಮರಿಯಾನೆ ಅಮ್ಮನ ಕಿವಿ ಏಳೆದು ಏಳು ಎಂದು ಅಳುತ್ತಿದ್ದು, ತಾಯಿಯಿಂದ ಬೇರ್ಪಡಿಸಲು ಅರಣ್ಯ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಕೊನೆಗೂ ಅರಣ್ಯ ಸಿಬ್ಬಂದಿ ಮರಿಯಾನೆಗೆ ತೊಂದರೆಯಾಗದಂತೆ ಬೇರೆ ಕಡೆ ಸಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
 
 
ಹೃದಯ ಕಲಕುವ ಈ ಮರಿಯಾನೆಯ ಶೋಕಾಚರಣೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿವೆ. ತಾಯಿ ಆನೆ ಅನಾರೋಗ್ಯದಿಂದ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ. ಕಳೆದ 15 ದಿನಗಳಲ್ಲಿ ರಾಜ್ಯದಲ್ಲಿ 5 ಆನೆಗಳು ಸಾವನ್ನಪ್ಪಿವೆ.

LEAVE A REPLY

Please enter your comment!
Please enter your name here