'ಅಮ್ಮಾ' ಅಸ್ವಸ್ಥ

0
237

ಚೆನ್ನೈ ಪ್ರತಿನಿಧಿ ವರದಿ
ತಮಿಳುನಾಡು ಸಿ ಎಂ ಜೆ. ಜಯಲಲಿತ ಅವರು ಅನಾರೋಗ್ಯ ತೊಂದರೆಯಿಂದಾಗಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ಗುರುವಾರ ರಾತ್ರಿ 11.30ಕ್ಕೆ ದಾಖಲಾಗಿದ್ದಾರೆ.
 
 
ಸಿಎಂ ಜಯಲಲಿತ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದು, ಅವರು ಜ್ವರ ಮತ್ತು ಡಿಹೈಡ್ರೇಶನ್‌‌( ನಿರ್ಜಲಿಕರಣ) ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಅಪೋಲೋ ಆಸ್ಪತ್ರೆ ಮೂಲಗಳು ತಿಳಿಸಿದೆ.
 
 
 
ಜಯಲಲಿತ ಅವರನ್ನು ತೀವ್ರನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಪೋಲೊ ಹಾಸ್ಪಿಟಲ್‌‌ನ ಮುಖ್ಯ ನಿರ್ವಹಣಾ ಅಧಿಕಾರಿ ಸುಬ್ಬಯ್ಯ ವಿಶ್ವನಾಥನ್‌ ತಿಳಿಸಿದ್ದಾರೆ.
ಅಮ್ಮ ಅಭಿಮಾನಿಗಳು ಆಸ್ಪತ್ರೆ ಮುಂದೆ ಜಮಾಯಿಸಿದ್ದಾರೆ.

LEAVE A REPLY

Please enter your comment!
Please enter your name here