ಅಮ್ಮಾನಿಗೆ 28 ದಿನಗಳ ಜಾತ್ರೆ ಸಂಭ್ರಮ

0
427

ನಮ್ಮ ಪ್ರತಿನಿಧಿ ವರದಿ
ದಕ್ಷಿಣ ಕನ್ನಡದ ಇತಿಹಾಸ ಪ್ರಸಿದ್ಧಿ ದೇವಾಲಗಳಲ್ಲಿ ಒಂದಾದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಳದ ಜಾತ್ರಾ ಮಹೋತ್ಸವವು ನಿನ್ನೆಯಿಂದ ಶುರುವಾಗಿದೆ. ಮಾರ್ಚ್ 14ರಂದು ದ್ವಜಾರೋಹಣಗೊಂಡಿದೆ.
 
polali jatre1
ಈ ಬಾರಿ ಪೊಳಲಿಯಲ್ಲಿ 28 ದಿನದ ಜಾತ್ರೆ ನಡೆಯಲಿದೆ. ಮಾರ್ಚ್ 14ರಿಂದ ಎಪ್ರಿಲ್1 ರವರೆಗೆ ನಿತ್ಯಬಲಿ ನಡೆಯಲಿದೆ. ಏಪ್ರಿಲ್ 5ರಿಂದ ಚೆಂಡಿನ ಜಾತ್ರೆ ಶುರುವಾಗಲಿದೆ.
ಚೆಂಡಿನ ವಿವರ:
ಎಪ್ರಿಲ್ 5ರಂದು ಮೊದಲ ಚೆಂಡಿನ ವಿಶೇಷ ಬಲಿ ಉತ್ಸವ ನಡೆಯಲಿದ್ದು, ಅಂದು ಕುಮಾರ ತೇರು ಇರುತ್ತದೆ.
6ರಂದು ನಡೆಯುವ ಎರಡನೇ ಚೆಂಡಿನಂದು ಹೂವಿನ ತೇರು ಇರಲಿದೆ.
7ರಂದು ಮೂರನೇ ಚೆಂಡಿನ ಪ್ರಯುಕ್ತ ಸೂರ್ಯ ಮಂಡಲ ತೇರು
8ರಂದು ನಾಲ್ಕನೇ ಚೆಂಡಿನ ಅಂಗವಾಗಿ ಚಂದ್ರಮಂಡಲ
ಏಪ್ರಿಲ್ 9ರಂದು ಕೊನೆಯ ಚೆಂಡಿನಂದು ಬೊಂಬೆ ತೇರಿನ ಪಲ್ಲಕ್ಕಿಯಲ್ಲಿ ದೇವರ ಉತ್ಸವ ನಡೆಯುತ್ತದೆ.
ಏಪ್ರಿಲ್ 10 ರಥೋತ್ಸವ
ಏಪ್ರಿಲ್ 11ರಂದು ‘ಆರಢ’ (ದೇವರ ಅವಭೃತ) ನಡೆಯಲಿದೆ.
ಕಡೆ ಚೆಂಡು ಎಪ್ರಿಲ್ 9ಕ್ಕೆ 10ಕ್ಕೆ ರಥೋತ್ಷವ

LEAVE A REPLY

Please enter your comment!
Please enter your name here