ಅಮೆರಿಕ ವಿಮಾನಗಳಲ್ಲಿ ಎಲೆಕ್ಟ್ರಿಕ್ ವಸ್ತುಗಳು ನಿಷೇಧ!

0
2341

 
ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ 8 ಮುಸ್ಲಿಂ ರಾಷ್ಟ್ರಗಳ ಪ್ರಯಾಣಿಕರು ವಿಮಾನಗಳಲ್ಲಿ ಎಲೆಕ್ಟ್ರಿಕ್ ವಸ್ತುಗಳನ್ನು ತರದಂತೆ ನಿಷೇಧ ಹೇರಿದೆ.
 
 
ಅಮೆರಿಕ ದೇಶ ವಿಮಾನಗಳಲ್ಲಿ ಲ್ಯಾಪ್ ಟಾಪ್, ಐಪಾಡ್ ಗೆ ನಿಷೇಧ ಮಾಡಿದೆ. ಮದ್ಯಪ್ರಾಚ್ಯ ದೇಶಗಳಿಂದ ಬರುವ ವಿಮಾನದಲ್ಲಿ ನಿಷೇಧಿಸಲಾಗಿದೆ. ಅಮೆರಿಕದ ಪ್ರಮುಖ 12 ವಿಮಾನಯಾನ ಸಂಸ್ಥೆಗಳಿಗೆ ಈ ಬಗ್ಗೆ ಸೂಚನೆ ರವಾನಿಸಿದೆ.
 
 
ಮದ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದ ಒಟ್ಟು 8 ರಾಷ್ಟ್ರಗಳ ವಿಮಾನ ಪ್ರಯಾಣಿಕರಿಗೆ ಈ ಹೊಸ ನಿಷೇಧ ಅನ್ವಯಿಸಲಿದ್ದು, ಈ ದೇಶದ ಪ್ರಯಾಣಿಕರು ಮೊಬೈಲ್ ಗಿಂತ ದೊಡ್ಡದಾದ ಯಾವುದೇ ರೀತಿಯ ಎಲೆಕ್ಟ್ರಿಕ್ ವಸ್ತುಗಳನ್ನು ವಿಮಾನದಲ್ಲಿ ತರುವಂತಿಲ್ಲ ಎಂದು ಅಮೆರಿಕ ಸರ್ಕಾರ ಹೇಳಿದೆ.
 
 
 
ಜೋರ್ಡಾನ್, ಈಜಿಪ್ಟ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ರಾಷ್ಟ್ರಗಳು ಕೂಡ ಈ 8 ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿದೆ ಎಂದು ಹೇಳಲಾಗುತ್ತಿದ್ದು, ಈ ದೇಶಗಳ ಪ್ರಯಾಣಿಕರಿಗೆ ಎಫೆಕ್ಟ್ ಆಗಲಿದೆ.

LEAVE A REPLY

Please enter your comment!
Please enter your name here