ಅಮೂಲ್ಯಗೆ ಕೂಡಿಬಂತು ಕಂಕಣ ಭಾಗ್ಯ

0
547

ಸಿನಿ ಪ್ರತಿನಿಧಿ ವರದಿ
ಕನ್ನಡ ಚಿತ್ರರಂಗಕ್ಕೆ ಬಾಲನಟಿ ಆಗಿ ಎಂಟ್ರಿಕೊಟ್ಟು… ‘ಚೆಲುವಿನ ಚಿತ್ತಾರ’ದ ಖ್ಯಾತಿಯ ನಟಿ ಅಮೂಲ್ಯಗೆ ಕಂಕಣ ಭಾಗ್ಯ ಕೂಡಿಬಂದಿದೆ.
 
 
 
ಶ್ರಾವಣಿ ಸುಬ್ರಮಣ್ಯ’, ‘ಗಜಕೇಸರಿ’, ‘ಖುಷಿ ಖುಷಿಯಾಗಿ’, ‘ಮಳೆ’ ಅಂತಹ ಸಿನಿಮಾಗಳಲ್ಲಿ ಅಭಿನಯಿಸಿದ ನಟಿ ಅಮೂಲ್ಯ ಶೀಘ್ರವೇ ಹಸೆಮಣೆಏರಲಿದ್ದಾರೆ.
ಆರ್.ಆರ್ ನಗರದ ಮಾಜಿ ಕಾರ್ಪೊರೇಟರ್ ರಾಮಚಂದ್ರ ಅವರು ಪುತ್ರ ಜಗದೀಶ್ ಜತೆ ಮದುವೆಗೆ ಮಾತುಕತೆಗಳು ನಡೆದಿವೆ. ಗೋಲ್ಡನ್ ಸ್ಟಾರ್ ಗಣೇಶ್ ಮನೆಯಲ್ಲಿ ಅಮೂಲ್ಯ ಮತ್ತು ಜಗದೀಶ್ ವಿವಾಹದ ಮಾತುಕತೆ ನಡೆಸಲಾಗಿದ್ದು ಎರಡು ಕುಟಂಬಗಳ ಪರಸ್ಪರ ಸಮ್ಮತಿಯೊಂದಿಗೆ ಮಾರ್ಚ್ 6 ರಂದು ನಿಶ್ಚಿತಾರ್ಥ ನಡೆಯಲಿದೆ.
 
 
 
ಇನ್ನು ಜಗದೀಶ್ ಲಂಡನ್ ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ ಎಂದು ಕುಟಂಬದ ಮೂಲಗಳು ತಿಳಿಸಿವೆ. ಜಗದೀಶ್ ಮತ್ತು ತಂದೆ ರಾಮಚಂದ್ರ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪತ್ನಿ ಶಿಲ್ಪಾ ಗಣೇಶ್ ರವರಿಗೆ ಆಪ್ತರು. ಗಣೇಶ್ ಕುಟುಂಬದ ಕಾರ್ಯಕ್ರಮಗಳಲ್ಲಿ ಜಗದೀಶ್ ಕೂಡ ಭಾಗವಹಿಸುತ್ತಿದ್ದರು.

LEAVE A REPLY

Please enter your comment!
Please enter your name here