ಅಮರನಾಥ ಯಾತ್ರೆಗೆ ಚಾಲನೆ

0
362

 
ವರದಿ: ಲೇಖಾ
48 ದಿನಗಳ ಪ್ರಸಿದ್ಧ ಅಮರನಾಥ ಯಾತ್ರೆ ಬಿಗಿ ಭದ್ರತೆಯಲ್ಲಿ ಶುಕ್ರವಾರ ಪ್ರಾರಂಭಗೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ 1282 ಯಾತ್ರಿಗಳ ಮೊದಲ ತಂಡದ ಪ್ರಯಾಣಕ್ಕೆ ಚಾಲನೆ ನೀಡಿದ್ದಾರೆ.
 
 
 
ಇಂದು ಬೆಳೆಗ್ಗೆ 900 ಪುರುಷರು, 225 ಮಹಿಳೆಯರು, 13 ಮಕ್ಕಳು ಮತ್ತು 144 ಸಾಧುಗಳನ್ನು ಹೊತ್ತ 33 ವಾಹನಗಳು ಸಿಆರ್​ಪಿಎಫ್ ಬಿಗಿ ಭದ್ರತೆಯಲ್ಲಿ ಅಮರನಾಥ ಪ್ರಯಾಣ ಆರಂಭಿಸಿವೆ.
 
 
 
ಉಗ್ರರ ದಾಳಿಯ ಭೀತಿ ಹಿನ್ನಲೆಯಲ್ಲಿ ಅಮರನಾಥ ಯಾತ್ರೆಗೆ ಈ ಬಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಇದೇ ಮೊದಲ ಬಾರಿಗೆ ಡ್ರೋಣ್​ಗಳನ್ನು ಬಳಸಿಕೊಂಡು ಭದ್ರತೆ ನೀಡಲಾಗುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ರಾಜ್ಯ ಸರ್ಕಾರ ಮತ್ತು ಭದ್ರತಾ ಪಡೆಗಳು ಸಿದ್ಧತೆ ನಡೆಸಿವೆ.
 
 
 
ಜಮ್ಮು ನಗರದ ಬಳಿಯ ಭಗವತಿ ನಗರದಲ್ಲಿ ಅಮರನಾಥ ಯಾತ್ರೆಯ ಬೇಸ್ ಕ್ಯಾಂಪ್ ಸ್ಥಾಪಿಸಲಾಗಿದ್ದು, 2 ದಾರಿಗಳಲ್ಲಿ ಅಮರನಾಥ ಯಾತ್ರಾರ್ಥಿಗಳು ಸಾಗಲಿದ್ದಾರೆ.
 
 
 
12,500 ಕೇಂದ್ರೀಯ ಭದ್ರತಾ ಪಡೆಯ ಯೋಧರು ಮತ್ತು 8,000 ರಾಜ್ಯ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಪಹಲ್​ಗಾಮ್ ಮತ್ತು ಸೋನಮಾರ್ಗ್ ಎರಡೂ ಹಾದಿಯಲ್ಲೂ ಬಿಗಿ ಭದ್ರತೆ ಒದಗಿಸಲಾಗಿದೆ.

LEAVE A REPLY

Please enter your comment!
Please enter your name here