ಅಮರನಾಥ್ ಯಾತ್ರೆ ಮತ್ತೆ ಸ್ಥಗಿತ

0
261

 
ವರದಿ: ಲೇಖಾ
ಕಾಶ್ಮೀರದಲ್ಲಿ ಉಗ್ರ ಬುರ್ಹಾನ್ ವಾನಿ ಹತ್ಯೆಯಿಂದಾಗಿ ಉಂಟಾಗಿರುವ ಗಲಭೆ ವಾತಾವರಣ ಇನ್ನೂ ಅಮರನಾಥ್ ಯಾತ್ರೆ ಮತ್ತೊಮ್ಮೆ ಸ್ಥಗಿತಗೊಂಡಿದೆ.
 
 
ಅನಂತ್ ನಾಗ್ ಜಿಲ್ಲೆಯಲ್ಲಿ ಹೊಸದೊಂದು ಗಲಭೆ ನಡೆದಿರುವ ಬಗ್ಗೆ ವರದಿಯಾಗಿದ್ದು, ಎರಡನೇ ಬಾರಿ ಅಮರನಾಥ್ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
 
 
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಬುರ್ಹಾನ್ ಮುಜಾಫರ್ ವಾನಿಯ ಹತ್ಯೆಯ ಬಳಿಕ ಉಂಟಾದ ಹಿಂಸಾಚಾರದಿಂದಾಗಿ ಮೂರು ದಿನಗಳ ಕಾಲ ಅಮರನಾಥ್ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕ ಸೋಮವಾರದಂದು ಯಾತ್ರೆಯನ್ನು ಪುನರಾರಂಭ ಮಾಡಿರುವುದನ್ನು ಸ್ಥಳೀಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದರು. ಇತ್ತೀಚಿನ ವರದಿಯ ಪ್ರಕಾರ ಅಮರನಾಥ್ ಯಾತ್ರೆ ನಡೆಯುವ ಅನಂತ್ ನಾಗ್ ಜಿಲ್ಲೆಯಲ್ಲಿ ಹೊಸ ಗಲಭೆ ನಡೆದಿರುವುದರ ಬಗ್ಗೆ ಮಾಹಿತಿ ದೊರೆತಿದ್ದು ತಾತ್ಕಾಲಿಕವಾಗಿ ಅಮರಾನಾಥ್ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.
 
 
ಇನ್ನು ಎರಡು ದಿನಗಳ ಕಾಲ ಪ್ರತಿಭಟನೆ ನಡೆಸಲು ಕಾಶ್ಮೀರ ಪ್ರತ್ಯೇಕತಾವಾದಿಗಳು ಕರೆ ನೀಡಿದ್ದಾರೆ. ಈ ನಡುವೆ ಕಾಶ್ಮೀರದಲ್ಲಿ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದ್ದು, ಕರ್ಫ್ಯೂ ಮುಂದುವರೆಸಲಾಗಿದೆ.

LEAVE A REPLY

Please enter your comment!
Please enter your name here