ಅಮಟೆ ಮೊಸರು ಗೊಜ್ಜು

0
406

 
ವಾರ್ತೆ ರೆಸಿಪಿ
ಬೇಕಾಗುವ ಸಾಮಾಗ್ರಿಗಳು:
8 ಅಮಟೆಕಾಯಿ, ಅರ್ಧ ಕಪ್ ಕಾಯಿತುರಿ, 6 ಕರಿಮೆಣಸು, ತಪಾ 1 ಟಿ.ಚ. ಜೀರಿಗೆ, ಸಾಸಿವೆ, 1 ಕಪ್ ಮೊಸರು, 15 ಎಲೆ ಕರಿಬೇವು, 2 ಟಿ.ಚ.ತುಪ್ಪ, ರುಚಿಗೆ ಉಪ್ಪು.
 
ತಯಾರಿಸುವ ವಿಧಾನ:
ಅಮಟೆಕಾಯಿಯನ್ನು ತೊಳೆದು ತುರಿಯಿರಿ. ಬಾಣಲೆಯಲ್ಲಿ ಒಂದು ಚಮಚ ತುಪ್ಪ ಕಾಯಿಸಿ ಜೀರಿಗೆ ಸಿಡಿಸಿ. ನಂತರ ಮೆಣದು, ಕಾಯಿತುರಿ, ಅಮಟೆತುರಿ ಹಾಗೂ ಕರಿಬೇವನ್ನು ಚೆನ್ನಾಗಿ ಬಾಡಿಸಿ. ನಂತರ ಈ ಮಿಶ್ರಣವನ್ನು ತರತರಿಯಾಗಿ ರುಬ್ಬಿ. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಸಾಸಿವೆ ಸಿಡಿಸಿ. ರುಬ್ಬಿದ ಮಿಶ್ರಣವನ್ನು ಹಾಕಿ ಬಾಡಿಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ತಣ್ಣಗಾಗಲು ಬಿಡಿ. ತಣಿದ ಬಳಿಕ ಮೊಸರನ್ನು ಸೇರಿಸಿ ಚೆನ್ನಾಗಿ ಬೆರಿಸಿ. ಈ ಗೊಜ್ಜನ್ನು ಅನ್ನ ಮತ್ತು ಫಲಾವ್ ನೊಂದಿಗೆ ಸವಿಯಲು ಚೆನ್ನಾಗಿರುತ್ತದೆ.

LEAVE A REPLY

Please enter your comment!
Please enter your name here