ಅಮಟೆಕಾಯಿ ಪಚ್ಚಡಿ

0
351

 
ವಾರ್ತೆ ರೆಸಿಪಿ
ಬೇಕಾಗುವ ಸಾಮಾಗ್ರಿಗಳು:
ತುರಿದ 6 ಎಳೆಯ ಅಮಟೆಕಾಯಿ, ಅರ್ಧ ಕಪ್ ಕಾಯಿತುರಿ, 10 ಕರಿಬೇವು ಎಲೆಗಳು, 2 ಟಿ.ಚ. ಕಡಲೇಬೇಳೆ, 4 ಟಿ.ಚ. ಕಡಲೇಕಾಯಿಬೀಜ, 4 ಹಸಿಮೆಣಸು, ಇಂಗು ಸ್ವಲ್ಪ, 1 ಚ.ಎಣ್ಣೆ, ಅರ್ಧ ಟಿ.ಚ. ಸಾಸಿವೆ-ಜೀರಿಗೆ, ರುಚಿಗೆ ಉಪ್ಪು.
 
 
ತಯಾರಿಸುವ ವಿಧಾನ:
ಅಮಟೆಕಾಯಿಯನ್ನು ತೊಳೆದು ತುರಿದುಕೊಳ್ಳಿ. ಕಡಲೆಬೇಳೆ ಮತ್ತು ಕಡಲೆಕಾಯಿ ಬೀಜವನ್ನು ಕೆಂಪಗೆ ಹುರಿದುಕೊಂಡು ತಣಿಸಿ. ಅಮಟೆಕಾಯಿಯ ತುರಿ, ಕಾಯಿತುರಿ, ಹಸಿಮೆಣಸು, ಕರಿಬೇವು, ಇಂಗನ್ನು ಹಾಕಿ ಸ್ವಲ್ಪ ಬಾಡಿಸಿ. ತಣಿದ ಬಳಿಕ ಹುರಿದುಕೊಂಡ ವಸ್ತುಗಳನ್ನು ಸೇರಿಸಿ, ಉಪ್ಪು ಹಾಕಿ, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ. ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಸಾಸಿವೆ-ಜೀರಿಗೆ ಸಿಡಿಸಿ,ರುಬ್ಬಿಕೊಂಡ ಮಿಶ್ರಣಕ್ಕೆ ಸೇರಿಸಿ. ತಯಾರಾದ ಪಚ್ಚಡಿಯನ್ನು ಅನ್ನ, ದೋಸೆ, ಚಪಾತಿಯೊಂದಿಗೆ ಸವಿಯಲು ಚೆನ್ನಾಗಿರುತ್ತದೆ.

LEAVE A REPLY

Please enter your comment!
Please enter your name here