ಅಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ

0
512

ಮ0ಗಳೂರು ಪ್ರತಿನಿಧಿ ವರದಿ
ಪರಿಶಿಷ್ಟ ವರ್ಗ ಸಮುದಾಯದ ನಿರುದ್ಯೋಗಿ ಯುವಕ /ಯುವತಿಯರಿಗೆ ಕೌಶಲ್ಯ ಅಭಿವೃದ್ಧಿ ಆಧಾರಿತ ವೃತ್ತಿಪರ ತರಬೇತಿ (ವಿವಿಧ 33 ಕೋರ್ಸುಗಳಿಗೆ)ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕೋರ್ಸುಗಳ ವಿವರ ಕೆಳಕಂಡಂತಿದೆ; ವಾಹನ ರಿಪೇರಿ – ದ್ವಿ ಚಕ್ರ ಮತ್ತು 3 ಚಕ್ರ ವಾಹನಗಳ ಮೂಲಭೂತ ಸೇವೆಗಳು,4 ಚಕ್ರ ವಾಹನಗಳ ಮೂಲಭೂತ ಸೇವೆಗಳು, ಚಾಲಕ ಹಾಗೂ ಮೆಕ್ಯಾನಿಕ್,ಆಟೋ ರಿಪೇರಿ, ಡೆಂಟಿಂಗ್ ಮತ್ತು ಪೈಟಿಂಗ್, ಬ್ಯಾಂಕಿಂಗ್ ಮತ್ತು ಲೆಕ್ಕಪತ್ರ – ಲೆಕ್ಕಪತ್ರ. ಇಲೆಕ್ಟ್ರಿಕಲ್- ದೇಶೀಯ ಎಲೆಕ್ಟ್ರಿಷಿಯನ್, ಇಲೆಕ್ಟ್ರಿಕಲ್ ವೈಂಡರ್
ಫೆಬ್ರಿಕೇಷನ್ – ಗ್ಯಾಸ್ ವೆಲ್ಡರ್, ವೆಲ್ಡರ್, ವೆಲ್ಡರ್, ಉಡುಪು ತಯಾರಿಕೆ – ಕೈ ಕಸೂತಿ(ಎಂಬ್ರಾಯಿಡರ್), ಮೆಶಿನ್ ಕಸೂತಿ (ಎಂಬ್ರಾಯಿಡರ್), ಕೈಗಾರಿಕಾ ಹೊಲಿಗೆ ಯಂತ್ರ ತಂತ್ರಜ್ಙ, ಟೈಲರ್ (ಮೂಲ ಹೊಲಿಗೆ ಆಯೋಜಕರು),ಮಾಹಿತಿ ಮತ್ತು ಸಂವಹನ ತಂತ್ರಜ್ಙಾನ – ಎಕೌಂಟ್ಸ್ ಅಸಿಸ್ಟೆಂಟ್ ಯೂಸಿಂಗ್ ಟ್ಯಾಲಿ, ಕಂಪ್ಯೂಟರ್ ಹಾರ್ಡ್ ವೇರ್ ಅಸಿಸ್ಟೆಂಟ್,ಪ್ಲಾಸ್ಟಿಕ್ ಸಂಸ್ಕರಣೆ – ಬೇಸಿಕ್ ಫಿಟ್ಟಿಂಗ್ ಮತ್ತು ಅಳತೆ.
ಉತ್ಪಾದನೆ ಮತ್ತು ತಯಾರಿಕೆ – ಟರ್ನಿಂಗ್, ಮೈಲಿಂಗ್, ರೆಫ್ರಿಜರೆಶನ್ ಮತ್ತು ಏರ್ ಕಂಡಿಷನಿಂಗ್ – ಸೆಂಟ್ರಲ್ ಏರ್ ಕಂಡಿಷನಿಂಗ್ ಪ್ಲಾಂಟ್ನ ರಿಪೇರಿ ಮತ್ತು ನಿರ್ವಹಣೆ, ರೆಫ್ರಿಜರೇಟರ್ನ ರಿಪೇರಿ ಮತ್ತು ನಿರ್ವಹಣೆ, ಆಟೋ ಮೊಬೈಲ್ ಏರ್ ಕಂಡಿಷನಿಂಗ್ನ ರಿಪೇರಿ ಮತ್ತು ನಿರ್ವಹಣೆ, ಎ.ಸಿ. ರಿಪೇರಿ ಮತ್ತು ನಿರ್ವಹಣೆ. ಕನ್ಸ್ಟ್ರಕ್ಷನ್ – ಅಸಿಸ್ಟನ್ಸ್ ಪ್ಲಂಬರ್, ಪ್ಲಂಬರ್, ವಾಸ್ತು ಶಿಲ್ಪ ಮತ್ತು ಲೋಕೋಪಯೋಗಿ ಕರಡು ಮತ್ತು ಅಟೋಕ್ಯಾಡ್. ಮೃದು ಕೌಶಲ್ಯಗಳು – ಸೇವಾ ವಲಯದಲ್ಲಿ ಮೃದು ಕೌಶಲ್ಯ ತರಭೇತಿ, ಇಂಗ್ಲೀಷ್ ಮಾತನಾಡುವುದು ಮತ್ತು ಸಂವಹನ ಕೌಶಲ್ಯ , ಟೆಲಿಕಾಂ – ಟೆಲಿಕಾಂ ಡಿ.ಟಿ.ಎಚ್. ಅನುಸ್ಫಾಪನಾ ತಂತ್ರಜ್ಞ
ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಕೊಡಿಯಾಲ್ಬೈಲ್, ಮಂಗಳೂರು ಕಚೇರಿಯಿಂದ ಪಡೆದುಕೊಳ್ಳಬಹುದಾಗಿದೆ.
 
 
 
ವಿಕಲಚೇತನರಿಂದ ಅರ್ಜಿ ಆಹ್ವಾನ
2016-17ನೇ ಸಾಲಿಗೆ 9 ಮತ್ತು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಶೇ. 40ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿರುವ ವಿಕಲಚೇತನ ವಿದ್ಯಾರ್ಥಿಗಳಿಗೆ ಪ್ರಿ-ಮೆಟ್ರಿಕ್ ವಿದ್ಯಾರ್ಥಿ ವೇತನ ಯೋಜನೆಯನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ಭಾರತ ಸರ್ಕಾರ ಇವರು ನ್ಯಾಷನಲ್ ಸ್ಕಾಲರ್ ಶಿಪ್ ಪೋರ್ಟಲ್ ಮೂಲಕ ಅನುಷ್ಟಾನಗೊಳಿಸುತ್ತಿದೆ.
ವಿದ್ಯಾರ್ಥಿಗಳು ಬ್ಯಾಂಕ್ ಖಾತೆ ತೆರೆದು ತಮ್ಮ ಆಧಾರ್ ಸಂಖ್ಯೆಯನ್ನು ಖಾತೆಸಂಖ್ಯೆಯೊಂದಿಗೆ ಸೀಡ್ ಮಾಡಿಸಿ, ನಂತರ ಫೋಟೋ, ವಯಸ್ಸಿನ ದೃಢೀಕರಣ ಪತ್ರ, ವೈಕಲ್ಯ ಪ್ರಮಾಣ ಪತ್ರ ಮತ್ತು ಪೋಷಕರ ಆದಾಯ ಪ್ರಮಾಣ ಪತ್ರದ ಜೊತೆಗೆ ನಿಗದಿತ ನಮೂನೆಯಲ್ಲಿ ಇತರ ಮಾಹಿತಿಗಳನ್ನು www.scholarship.gov.in ನಲ್ಲಿ ಆನ್ ಲೈನ್ ನಲ್ಲಿ ಅಪ್ಲೋಡ್ ಮಾಡಬಹುದು. ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಸೆಪ್ಟಂಬರ್ 30 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ www.disabilityaffairs.gov.in ನಲ್ಲಿ ಪಡೆಯಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.
 
 
 
ಯುವ ಕ್ರೀಡಾ ಸಂಜೀವಿನಿ ವಿಮಾ ಯೋಜನೆಗೆ ಅರ್ಜಿ ಆಹ್ವಾನ
ಯುವ ಕ್ರೀಡಾ ಸಂಜೀವಿನಿ ವಿಮಾ ಯೋಜನೆಯಡಿ 2016-17ನೇ ಸಾಲಿಗೆ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಉಚಿತ ವಿಮಾ ಸುರಕ್ಷೆ ಸೌಲಭ್ಯ ನೀಡಲಾಗುವುದು. ಅರ್ಹ ಅಭ್ಯರ್ಥಿಗಳು, ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಕಚೇರಿಯಿಂದ ಅರ್ಜಿ ಪಡೆದು ಭರ್ತಿ ಮಾಡಿ ದೃಢೀಕೃತ ದಾಖಲೆಗಳೊಂದಿಗೆ ಸೆಪ್ಟಂಬರ್ 14ರೊಳಗೆ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here