ಅಭಿಮಾನಿಗಳ ಅಮ್ಮ ಇನ್ನಿಲ್ಲ

0
350
ಜಯಲಲಿತಾ ಯುಗಾಂತ್ಯ : 1948- 2016

ನಮ್ಮ ಪ್ರತಿನಿಧಿ ವರದಿ
ಕಳೆದ ಒಂದು ತಿಂಗಳಿನಿಂದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಸಿಎಂ ಜೆ ಜಯಲಲಿತಾ ಮೃತಪಟ್ಟಿದ್ದಾರೆ.
ಡಿ.4 ರಂದು ಸಂಜೆ ವೇಳೆಗೆ ಹೃದಯಾಘಾತ ಸಂಭವಿಸಿತ್ತು. ಸೂಕ್ತ ಚಿಕಿತ್ಸೆ ನೀಡಿದರೂ ಅವರ ದೇಹ ಅದಕ್ಕೆ ಸ್ಪಂದಿಸಿಲ್ಲ.  ಚಿಕಿತ್ಸೆ ಫಲಕಾರಿಯಾಗದೆ ಜಯಲಲಿತಾ ಅಪೋಲೋ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ. ಜಯಲಲಿತಾ ಅವರ ಪಾರ್ಥಿವ ಶರೀರದ ಅಂತಿಮ ದರುಶನಕ್ಕೆ ಜನಸಾಗರ ತಮಿಳುನಾಡಿನತ್ತ ಹರಿಯಲಾರಂಭಿಸಿದೆ. ತಮಿಳುನಾಡಿನಲ್ಲಿ ಸೂತಕದ ಛಾಯೆ ಆವರಿಸಿದೆ. ಅಘೋಷಿತ ಬಂದ್ ನಿರ್ಮಾಣವಾಗಿದೆ. ರಾಜಾಜಿಹಾಲ್ ನಲ್ಲಿ ಅಂತಿಮ ದರುಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಮ್ಮನ ನೆನೆದು ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ.

LEAVE A REPLY

Please enter your comment!
Please enter your name here