ಅಬ್ದುಲ್ ಬಸಿತ್ ಗೆ ಸಮನ್ಸ್ ಜಾರಿ

0
317

ರಾಷ್ಟ್ರೀಯ ಪ್ರತಿನಿಧಿ ವರದಿ
ದೇಶದ ರಕ್ಷಣಾ ಇಲಾಖೆ ಕಾಗದಪತ್ರಗಳನ್ನು ಹೊಂದಿದ್ದ ಹಿನ್ನೆಲೆಯಲ್ಲಿ ಪಾಕಿಸ್ತಾನ ರಾಯಭಾರಿ ಕಚೇರಿ ಸಿಬ್ಬಂದಿಯನ್ನು ಬಂಧಿಸಲಾಗಿದೆ.
pak-worker_arrest
ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನರ್ ಕಚೇರಿಯ ಅಧಿಕಾರಿ ಮೊಹಮ್ಮದ್ ಅಖ್ತರ್ ನನ್ನು ಅರೆಸ್ಟ್ ಮಾಡಲಾಗಿದೆ. ದೆಹಲಿ ಪೊಲೀಸರು ಅಧಿಕಾರಿ ಸೇರಿ ಇತರೆ ನಾಲ್ವರನ್ನು ಬಂಧಿಸಿದ್ದಾರೆ.
 
 
ಪಾಕಿಸ್ತಾನ ಹೈಕಮಿಷನರ್ ಅಬ್ದುಲ್ ಬಸಿತ್ ಕಚೇರಿಯ ಸಿಬ್ಬಂದಿಗಳನ್ನು ಬಂಧಿಸಲಾಗಿದೆ. ಈ ಸಂಬಂಧ ಪಾಕ್ ಹೈಕಮಿಷನರ್ ಅಬ್ದುಲ್ ಬಸಿತ್ ಗೆ ಸಮನ್ಸ್ ಜಾರಿಯಾಗಿದೆ. ವಿದೇಶಾಂಗ ಇಲಾಖೆಯಿಂದ ಬಸಿತ್ ಗೆ ಸಮನ್ಸ್ ಜಾರಿಯಾಗಿದೆ.
 
 
ಈ ಬಗ್ಗೆ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಗೂ ಮಾಹಿತಿ ನೀಡಲಾಗಿದೆ.
 
ದೆಹಲಿ ಪೊಲೀಸರು ಪಾಕಿಸ್ತಾನದ ಬೇಹುಗಾರಿಕೆಯನ್ನು ಛೇದಿಸಿದ್ದಾರೆ. ಪಾಕ್ ಹೈಕಮಿಷನರ್ ಕಚೇರಿ ಸಿಬ್ಬಂದಿ ಬಂಧನ ಮಾಡಿ ಬಿಡುಗಡೆ ಮಾಡಿದ್ದಾರೆ. 48 ಗಂಟೆಯೊಳಗೆ ಭಾರತ ಬಿಟ್ಟು ಹೋಗುವಂತೆ ಸೂಚನೆ ನೀಡಲಾಗಿದೆ. ಒಂದೂವರೆ ವರ್ಷದಿಂದ ಬೇಹುಗಾರಿಕೆ ನಡೆಸಿದ್ದ ಶಂಕೆ ಇದೆ. ವಿದೇಶಾಂಗ ವ್ಯವಹಾರಗಳ ಇಲಾಖೆ ಕಟ್ಟಪ್ಪಣೆ ಮಾಡಿದ್ದಾರೆ.
ಭಾರತ ಸರ್ಕಾರ ಪಾಕಿಸ್ತಾನ ಸರ್ಕಾರಕ್ಕೆ ಬಿಸಿ ಮುಟ್ಟಿಸಿದೆ. ಪಾಕ್ ರಾಯಭಾರ ಕಚೇರಿ ಸಿಬ್ಬಂದಿಗೂ ಬಿಸಿ ತಟ್ಟಿದ್ದಾರೆ. ಮೆಹಮೂದ್ ಅಖ್ತರ್ ಪಾಕ್ ರಾಯಭಾರಿ ಅಬ್ದುಲ್ ಬಸಿತ್ ಗೆ ಪರಮಾಪ್ತನಾಗಿದ್ದ ಎನ್ನಲಾಗಿದೆ.

LEAVE A REPLY

Please enter your comment!
Please enter your name here