ಅಪ್​ ನಿಧಿಗೆ ಪ್ಯಾಕೇಜ್‌ ನೀಡಲು ಕೇಂದ್ರ ಸಂಪುಟ ಸಮ್ಮತಿ

0
229

ವರದಿ: ಲೇಖಾ
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೆಲ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
 
 
ಸ್ಟಾರ್ಟ್ ಅಪ್​ಗಳ ನಿಧಿಗೆ 10,000 ಕೋಟಿ ರೂಪಾಯಿಗಳನ್ನು ನೀಡಲು ಕೇಂದ್ರ ಸಚಿವ ಸಂಪುಟ ಸಮ್ಮತಿ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.
 
 
 
ಅಂತೆಯೇ 5.66 ಲಕ್ಷ ಕೋಟಿ ರೂ. ಮೊತ್ತದಲ್ಲಿ 4ಜಿ ಸ್ಪೆಕ್ಟ್ರಂ ಹರಾಜು ಹಾಕುವ ತೀರ್ಮಾನವನ್ನು ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಡಿಸ್ಕಾಮ್ ಅಶ್ಯೂರೆನ್ಸ್ ಯೋಜನೆಗೆ (ಯುಡಿಎವೈ ಯೋಜನೆ) ಸೇರ್ಪಡೆಯಾಗಲು ರಾಜ್ಯಗಳಿಗೆ ನೀಡಲಾದ ಗಡುವನ್ನು ಸಚಿವ ಸಂಪುಟವು ವಿಸ್ತರಿಸಿದೆ ಎಂದು ತಿಳಿಸಿದ್ದಾರೆ.
 
 
 
ಜವಳಿ ಉದ್ಯಮಕ್ಕೆ ಉತ್ತೇಜನ ನೀಡಲು 6,000 ಕೋಟಿ ರೂ. ಪ್ಯಾಕೇಜ್‌ ಹಾಗೂ ಜವಳಿ ಮತ್ತು ಉಡುಪು ಉದ್ಯಮದಲ್ಲಿ 3 ವರ್ಷಗಳ ಒಳಗಾಗಿ 1 ಕೋಟಿ ಉದ್ಯೋಗ ಸೃಷ್ಟಿಸಲು ಅನುಮೋದನೆ ನೀಡಿದೆ.
 
 
 
ಇನ್ನು ಯುಪಿಎ ಸರ್ಕಾರದ ಔಷಧ ವಿಧೇಯಕ 2013 ಹಿಂಪಡೆದು ಹೊಸ ಮಸೂದೆಗೆ ತೀರ್ಮಾನಿಸಲಾಗಿದೆ ಎಂದು ಜೇಟ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here