ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

0
299

 
ಉಡುಪಿ ಪ್ರತಿನಿಧಿ ವರದಿ
ಹಿಂದೂಸ್ತಾನ ಏರಾನಾಟಿಕ್ಸ್ ಲಿಮಿಟೆಡ್, ಬೆಂಗಳೂರು(H.A.L Bamgalore), ಇವರಿಂದ ಐಟಿಐ ತೇರ್ಗಡೆಯಾದ ಅರ್ಹ ಅಭ್ಯರ್ಥಿಗಳಿಂದ ಅಕ್ಟೋಬರ್ 2017ನೇ ತಂಡದ ಒಂದು ವರ್ಷದ ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
 
 
 
ಅರ್ಹ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ತೇರ್ಗಡೆ ಜೊತೆಗೆ ಫಿಟ್ಟರ್, ಟರ್ನರ್, ಇಲೆಕ್ಟ್ರಿಶಿಯನ್ ಮತ್ತು ಮಶಿನಿಸ್ಟ್, ಕೋಪಾ, ವೆಲ್ಡರ್ ಇತ್ಯಾದಿ ಟ್ರೇಡ್‍ಗಳಲ್ಲಿ ಐ.ಟಿ.ಐ ವಿದ್ಯಾರ್ಹತೆಯನ್ನು ತೇರ್ಗಡೆಯಾಧವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಪಾಸಾ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಸಲ್ಲಿಸಬಯಸುವವರು ಪಿಯುಸಿ ಮತ್ತು ಐಟಿಐ ಪರೀಕ್ಷೆಗಳನ್ನು ತೇರ್ಗಡೆಯಾಗಿರಬೇಕಾಗಿರುತ್ತದೆ.
 
 
ಉಡುಪಿ ಜಿಲ್ಲೆಯ ಆಸಕ್ತ ಅಭ್ಯರ್ಥಿಗಳು ತಮ್ಮ ಎಸ್‍ಎಸ್‍ಎಲ್‍ಸಿ ಮತ್ತು ಐ.ಟಿ.ಐ (ಎನ್‍ಸಿವಿಟಿ ಮಾತ್ರ) ಅಂಕಪಟ್ಟಿಗಳ ಮತ್ತು ಅನ್ವಯವಾಗುವ ಮೀಸಲಾತಿ ಪ್ರಮಾಣಪತ್ರಗಳ ಜೆರಾಕ್ಸ್ ಪ್ರತಿಗಳ ಸಹಿತವಾಗಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಉಡುಪಿ ಇವರನ್ನು ಸಂಪರ್ಕಿಸಿ ನಿಗದಿತವಾದ ಅರ್ಜಿ ನಮೂನೆಯನ್ನು ಪಡೆದು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
 
 
 
ಡಿಸೆಂಬರ್ 31 ಅರ್ಜಿ ಸಲ್ಲಿಸಲು ಕೊನೆಯದಿನಾಂಕವಾಗಿದ್ದು, ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಈ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಸಲ್ಲಿಸ ಬಯಸುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಪೂರ್ವದಲ್ಲಿ ಅಪ್ರೆಂಟೀಸ್ ಪೋರ್ಟಲ್ www.apprenticeship.gov.inಟಿ ನಲ್ಲಿ ಕಡ್ಡಾಯವಾಗಿ ತಮ್ಮ ಹೆಸರನ್ನು ರಿಜಿಸ್ಟ್ರೇಶನ್ ಮಾಡಿರತಕ್ಕದ್ದು ಹಾಗೂ ಅರ್ಜಿ ನಮೂನೆಯಲ್ಲಿ ಈ ರಿಜಿಸ್ಟ್ರೇಶನ್ ನಂಬರ್‍ನ್ನು ತಪ್ಪದೇ ನಮೂದಿಸಿರತಕ್ಕದ್ದು.
 
 
 
ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉಡುಪಿ ದೂರವಾಣಿ.0820-2574869 ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here