ಅಪ್ರಾಮಾಣಿಕ ಪ್ರಾಮಾಣಿಕನಾದ ಕಥೆಯಿದು…!

0
2799


ನಿತ್ಯ ಅಂಕಣ:೭೧-ತಾರಾನಾಥ್‌ ಮೇಸ್ತ,ಶಿರೂರು.
ಎರಡನೇ ಜಾಗತಿಕ ಯುದ್ದದ 1939- 1945 ರ ಸಮಯ ಅದು. ಆ ಸಮಯದಲ್ಲಿ ಹಣ ಸಂಗ್ರಹಣಾ ಅಧಿಕಾರಿಯಾಗಿ ಶ್ರೀ ಸದಾನಂದ ಅವರನ್ನು ಬ್ರಿಟಿಷ್ ಸರಕಾರವು ನೇಮಿಸುತ್ತದೆ. ಆಗ ಅವರು ಚನ್ನೈನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಪ್ರತಿ ದಿನವು ಸಂಗ್ರಹಿಸಿದ ಹಣವನ್ನು ಅವರ ಬ್ಯಾಂಕಿಗೆ ಜಮಾವಣೆ ಮಾಡಬೇಕಿತ್ತು. ಆದರೆ ಅವರು ಕರ್ತವ್ಯದಲ್ಲಿ ಅಪ್ರಮಾಣಿಕತನ ತೋರುತ್ತಾರೆ. ಹಣವನ್ನು ಕಟ್ಟದೆ, ತಮ್ಮ ಖರ್ಚುಗಳಿಗೆ ಉಪಯೋಗಿಸುತ್ತಾರೆ.

ಸದಾನಂದರಿಗೆ ಕುದುರೆ ರೇಸಿನಲ್ಲಿ ಜೂಜು ಕಟ್ಟುವ ಚಟವಿತ್ತು. ಸರಕಾರದ ಖಜಾನೆಗೆ ಜಮಾವಣೆ ಮಾಡಬೇಕಾದ ಹಣವನ್ನು ಅವರು ಜೂಜಾಟ ಆಡಲು ವಿನಿಯೋಗಿಸುತ್ತಾರೆ. ಜೂಜಿನಲ್ಲಿ ಎಲ್ಲಾ ಹಣವನ್ನು ಕಳೆದುಕೊಳ್ಳುತ್ತಾರೆ. ತಾವು ಮಾಡಿರುವ ಅಪರಾಧ ಕೃತ್ಯಕ್ಕೆ ಜೈಲು ಶಿಕ್ಷೆ ಅನುಭವಿಸ ಬೇಕಾಗುವ, ಹಾಗೂ ನೌಕರಿಯನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿಯು ಅವರಿಗೆ ಬರುತ್ತದೆ. ಅವರಿಗೂ ತಾವು ಮಾಡಿರುವ ತಪ್ಪಿನಿಂದ ಅಪರಾಧ ಭಾವನೆಯು ಕಾಡುತ್ತದೆ. ತಾನು ಮಾಡಿರುವ ಅಪರಾಧ ಕೃತ್ಯದ ವಿಚಾರವನ್ನು ತಮ್ಮ ಮಡದಿಯಲ್ಲಿ ಹೇಳಿಕೊಳ್ಳುತ್ತಾರೆ. ಆವಾಗ ಸದ್ಗಗೃಹಿಣಿಯಾದ ಮಡದಿ ಯಾಕೇ ರೀ.. ಅಂತಹ ಕೆಲಸ ಮಾಡಲು ಹೋದಿರಿ. ಅಷ್ಟೊಂದು ಹಣ ಕಟ್ಟಲು ನಮ್ಮಲ್ಲಿ ಏಲ್ಲಿದೆ ಹಣ..? ಎದುರಾಗಿರುವ ಸಮಸ್ಯೆಯಿಂದ ಪಾರಾಗಲು ಗಣೇಶಪುರಿ ನಿತ್ಯಾನಂದ ಬಾಬಾರಲ್ಲಿ ಶರಣಾಗುವುದು..! ಈ ದಾರಿ ಬಿಟ್ಟರೆ ಬೇರೆ ದಾರಿ ಇಲ್ಲ ಎಂದು, ಚಿಂತಾಕ್ರಾಂತಳಾಗಿ ಗಂಡನಿಗೆ ಸಲಹೆ ನೀಡುತ್ತಾಳೆ.

ಮಡದಿ ನೀಡಿದ ಸಲಹೆಯಂತೆ ಸದಾನಂದರು ನಿತ್ಯಾನಂದರ ಬಳಿಗೆ ತೆರಳುತ್ತಾರೆ. ಹತ್ತಿರ ಬರುತ್ತಿರುವಾಗಲೇ, ಒಳಗಿನಿಂದ ನಿತ್ಯಾನಂದರು ಎರುಸ್ವರದಲ್ಲಿ “ನೀನು ಅಪ್ರಮಾಣಿಕವಾಗಿ ಸರಕಾರದ ಹಣವನ್ನು ಬಳಸಿಕೊಂಡು ಜೂಜು ಆಡಿದೆ, ಇವಾಗ ದಿವಾಳಿಯಾಗಿ ಬಂದಿದೆಯಾ, ನನ್ನ ಬಳಿ ಬರಬೇಡ” ಎಂದು ನುಡಿದು ಒಳನಡೆಯುತ್ತಾರೆ. ಗುರುದೇವರಲ್ಲಿ ತನ್ನ ತಪ್ಪು ಹೇಳಿಕೊಂಡು ಶರಣಾಗುವುದು. ಎದುರಾಗಿರುವ ಸಂಕಷ್ಟದಿಂದ ರಕ್ಷಿಸು ಗುರುದೇವವೆಂದು, ಕೇಳಲು ನಾನು ಬಂದವನು. ಆದರೆ ನನ್ನ ಎಲ್ಲಾ ಅಪರಾಧ ಕೃತ್ಯಗಳು ಗರುದೇವರಿಗೆ ತಿಳಿದುದಾಗಿದೆ. ಎಂದು ಸದಾನಂದರು ದಿಗ್ಭ್ರಮೆಗೊಳ್ಳುತ್ತಾರೆ. ಗುರುದೇವರು ತನ್ನ ಮೇಲೆ ಸಿಟ್ಟಾಗಿರುವುದನ್ನು ಕಂಡು, ಧೈರ್ಯ ಕಳೆದುಕೊಂಡು ಮುಂದೆ ಹೆಜ್ಜೆಗಳಿಡದೆ ಸದಾನಂದರು ಅಲ್ಲೆ ನಿಂತುಬಿಡುತ್ತಾರೆ.

ಸದಾನಂದರ ಮೇಲೆ ಗರುದೇವರಿಗೆ ಕರುಣೆ ಬರುತ್ತದೆ. ಆಶ್ರಮದಲ್ಲಿ ಉಳಿಯು ವ್ಯವಸ್ಥೆ, ಊಟೋಪಚಾರದ ವ್ಯವಸ್ಥೆಯನ್ನು ಸೇವಾಕರ್ತರ ಮೂಲಕ ಮಾಡಿಸುತ್ತಾರೆ. ಗುರುದೇವರ ದರ್ಶನ ಪಡೆಯಲೆಂದು, ಸದಾನಂದರು ಮೂರು ದಿನಗಳನ್ನು ಹಠ ಹಿಡಿದು ಸಾನಿಧ್ಯದಲ್ಲಿಯೇ ಕಳೆಯುತ್ತಾರೆ. ನಾಲ್ಕನೇ ದಿನದಂದು ಗುರುದೇವರಿಂದ ಆಹ್ವಾನವು ಸದಾನಂದರಿಗೆ ಸಿಗುತ್ತದೆ. “ಇವತ್ತಿನಿಂದ ನೀನು ಪಾಠ ಕಲಿಯಬೇಕು. ಈ ಮುಚ್ಚಿದ ಲಕೋಟೆಯನ್ನು ತೆಗೆದುಕೋ ಅದನ್ನು ಬಿಡಿಸಬೇಡ, ಹೋಗಿ ನಿನ್ನ ಮನೆಯಲ್ಲಿ ಹೆಂಡತಿಗೆ ಕೊಟ್ಟು, ನಂತರ ನೀವಿಬ್ಬರೂ ಸೇರಿಕೊಂಡು ತೆಗೆದು ನೋಡಿ” ಎಂದು ಗುರುದೇವರು ನುಡಿಯುತ್ತಾರೆ. ಖಾಲಿಯಾಗಿರುವ ಕವರನ್ನು ಅಂಟಿಸಿ ಕೊಟ್ಟಿದ್ದಾರೆ ನನಗ್ಯಾಕೆ ಇದು..!! ಎಂದು ಸದಾನಂದರು ಅಚ್ಚರಿ ಪಡುತ್ತಾರೆ. ಅದರ ಜೊತೆಯಲ್ಲಿ ರೈಲಿನಲ್ಲಿ ಚೆನೈಗೆ ತೆರಳಲು ಲಂಗೋಟಿಯಿಂದ ತೆಗೆದು ಟಿಕೇಟು ಹಣವನ್ನು ನೀಡುತ್ತಾರೆ.

ಸದಾನಂದರು ಚೆನೈಗೆ ಮರಳುತ್ತಾರೆ. ನಿತ್ಯಾನಂದ ಸ್ವಾಮೀಜಿಗಳು ನೀಡಿದ ಕವರನ್ನು ಮೊದಲು ತನ್ನ ಮಡದಿಗೆ ಕೊಡುತ್ತಾರೆ. ಇರ್ವರು ಒಟ್ಟಿಗೆ ಲಕೋಟೆ ಒಡೆದು ನೋಡುತ್ತಾರೆ. ಖಾಲಿ ಲಕೋಟೆ ಎಂದು ಸದಾನಂದರು ಭಾವಿಸಿರುವ ಲಕೋಟೆಯೊಳಗೆ ಹಣ ಇರುತ್ತದೆ. ಅದು ಎಣಿಸಿದಾಗ ಸದಾನಂದರು ಬ್ಯಾಂಕಿಗೆ ಜಮಾವಣೆ ಮಾಡಬೇಕಾಗಿರುವ ಮೊತ್ತವಷ್ಟೇ ಇರುತ್ತದೆ. ಅದನ್ನು ಹಾಗೆಯೇ ಸದಾನಂದರು ಬ್ಯಾಂಕಿಗೆ ಕಟ್ಟುತ್ತಾರೆ. ಗುರುದೇವರ ಕೃಪೆಯಿಂದಾಗಿ ಜೈಲುವಾಸ ಮತ್ತು ಕೆಲಸದಿಂದ ಅಮಾನತು ಆಗುವ ಸಂಕಷ್ಟಗಳಿಂದ ಪಾರಾಗುತ್ತಾರೆ. ಮುಂದೆ ಜೀವನದ ಪಥವನ್ನು ಸರಿದಾರಿಗೆ ಬದಲಿಸಿಕೊಂಡು ಪ್ರಾಮಾಣಿಕ ಅಧಿಕಾರಿ ಆಗುತ್ತಾರೆ.

Advertisement

LEAVE A REPLY

Please enter your comment!
Please enter your name here