ಅಪರಾಧಿ ಯಾರು?

0
295

ಮಸೂರ ಅಂಕಣ: ಆರ್ ಎಂ ಶರ್ಮಾ
ಪರಾತ್ಪರ ಸೃಷ್ಟಿ ಕತಾ೯.
ಅವನ ಅಧೀನ ಸಕಲ ವಿಶ್ವ.
ಪರಮಾತ್ಮನ ದೇಣಿಗೆಗಳಲ್ಲಿ ಒಂದಂಶ ಮಾನವಕುಲ.
ಇದಕ್ಕೆ ಇಲ್ಲದ-ಸಲ್ಲದ ಬಿಂಕ ಬಿನ್ನಾಣ.
ಅದರ ಹಮ್ಮು ಬಿಮ್ಮು ಅದಕಿಲ್ಲ ಸೀಮೆ.
ಮೇರೆಯಿಲ್ಲದ-ಮೇರೆ ತಿಳಿಯದ ಮನುಕುಲ ತಾನೇಸವ೯ಸ್ವ ಎಂಬ ಬೆಡಗಿನಲ್ಲಿ-ಬೆಳಕಿನಲ್ಲಿಯೂ-ಬೆಳಗಿನಲ್ಲಿಯೂ ಕತ್ತಲೆಯಲ್ಲಿಯೇ ಸಾಗಿ-ಮಾಗಲಿಲ್ಲ-ಮುಗಿಯಲಿಲ್ಲ-ಮುಗಿಲಿಗೆ ಲಗ್ಗೆ ಕೊನೆಗೆ ಮುಗ್ಗರಿಸಿದ್ದೇ ಪ್ರಾಪ್ತಿ.
ಇದು ಶಾಸ್ತಿಯೇ-ಭ್ರಾಂತಿಯೇ ಪರೀಕ್ಷಿಸಿಯೇ ತಿಳಿಯಬೇಕು.
ಅದು ಹಾಗಿರಲಿ ಸಕಾಲದಲ್ಲಿ ತಿಳಿಯೋಣ.
ಅಧಿಕಾರ,ಪ್ರಮಾಣವಚನ,ಗೋಪ್ಯತಾ ನಿಷ್ಟೆ ಇವಕ್ಕೆ ನಾಂದಿ ಆಮೇಲೆ ಹಾದಿ ಬಿಟ್ಟು ರಾಡಿ-ರಂಪ ಇಲ್ಲೆಲ್ಲಾ ಅಸೀಮ ಯ್ಪ್ರತಾಪ.
ನಂತರ ತಾಪ-ಕೋಪ-ಕೂಪ ಇದೇ ನಿಜರೂಪ-ದಿವ್ಯ ಸ್ವರೂಪ.
ಅಲ್ಲಿಗೆಮುಂದಿನ ಕಥೆಗೆ ಅಡಿಪಾಯ-ಅಪಾಯಕ್ಕೆ ಅಸ್ತಿಭಾರ-ಕಾರಣ ಅದೇ ಆಸ್ತಿ-ಆಸ್ಥೆ-ಚೇಷ್ಟೆ.
ಈ ಪಿಡುಗು-ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರ-ಯಾವ ವ್ಯತ್ಯವೂ ಇಲ್ಲದೇ.
ಈ ಚಾಳಿ-ಅವತಾರ-ಅವಾಂತರ ಎಲ್ಲಾ ಆಯಾಮ-ಆಶ್ರಮಗಳಿಗೂ ಬಡಿದು ತನ್ನ ಕಬಂಧ ಬಾಹುಗಳನ್ನೂ ಚಾಚಿ ಮೆರೆಯುವದೇ ಸತ್ಯವು.
ಆಕಾಶದಿಂದ ಭಾರಿಮಳೆ,
ಸಮುದ್ರದ ಭಾರಿ ಅಲೆಗಳು,
ಭೂಮಿಯಮೇಲೆ ಭಯಂಕರ ಸುಂಟರಗಾಳಿ,
ಕಾಡಿನಲ್ಲಿ ಭಾರಿ ಬೆಂಕಿಯ ಅವತಾರ,
ಬೇಸಿಗೆಯಲ್ಲಿ ಮಾರಕವಾದ ಬಿಸಿಲಿನ ಧಗೆ,
ಛಳಿಗಾಲದಲ್ಲಿ ಕೊಲ್ಲುವ ಕೊರೆತದ ಸನ್ನಿವೇಶ,
ಹೀಗೆ ಪಟ್ಟಿಮಾಡಬಹುದಾದ ಕಷ್ಟಗಳು.
ಆಗೆಲ್ಲಾ ಉತ್ತರಿಸುವ-ಮತಿವಂತರು ತಾವೇ ಮಡಿವಂತರು,ಬುದ್ಧಿವಂತರು,ಶ್ರೀಮಂತರು-
ಎಲ್ಲ ಅವಘಡಗಳಿಗೂ ದೇವರೇ ಕಾರಣ ಎಂತ ಗಟ್ಟಿಯಾಗಿ ಹೇಳುವುದೇ ರೀತಿ ರಿವಾಜು.
ದೇವರ ಕಟ್ಟಾಗ್ನ್~ಎ ಮೀರಿ ನಡೆದುಕೊಂಡ ಅವನಸೃಷ್ಟಿಯ ಮನುಷ್ಯ-ಮಾಡಬಾರದ್ದನ್ನು ಮಾಡಿದ್ದೇ ಮೂಲ.
ಅಪರಾಧಿ ತಾನು ಆದರೆ ದೇವರನ್ನೇ ಮೂದಲಿಸುವ ಮೂಢ ಮನುಜ.
ದೇವರಿಗೆ ತನ್ನ ಮಾತಿಗೆ ಜಾಗವಿಲ್ಲ-ಕಾರಣ ಅವ ಈಜಗದಲ್ಲಿ ಇಲ್ಲ-ಈ ಜಗದವನಲ್ಲ.
ರೆ-ಕಾರಣ ಒಡ್ಡುವಾದವಿಲ್ಲ-ರಡ್ಡುತನವಿಲ್ಲ-ಋತವೇ ಖಚಿತ.
ಮನುಷ್ಯನ ಹೆಡ್ಡತನ-ತನ್ನ ಹೊಲಸಿನ ಆಸ್ತಿಯನ್ನೆಲ್ಲಾ ಪರಮಾತ್ಮನಿಗೇ ನಿವೇದಿಸಿ ಕೈತೊಳೆದುಕೊಳ್ಳುವುದು.
ಒಳ್ಳೆಯದು ಇದ್ದರೆ ತನ್ನದೆಂದು ಬಾಚಿಕೊಳ್ಳುವುದು,
ಕೆಟ್ಟದನ್ನೆಲ್ಲಾ ಮೂಕನಾದ ಭಗವಂತನಿಗೇ ಮೀಸಲುಮಾಡಿ ಮೀಸೆತಿರುವುದು.
ಮೇಲೆ ಯಾರು-ಕೀಳುಯಾರು ಎಂದರೆ ನರಶ್ರೇಷ್ಟ,ನರಸಿಹ್ಮ ಕನಿಷ್ಟ.
ಯುಗಾಂತರದಲ್ಲಿ ದೇವರು ಲೆಕ್ಕಕ್ಕಿಲ್ಲ.
ಕಲಿಯುಗದಲ್ಲಿ-ಮನುಷ್ಯನೇ ಕಲಿ.
ಇದೇ ಜನದ ಬಳುವಳಿ ಭಗವಂತನಿಗೆ.
ಯಾವ ಮುಜಗರಕ್ಕೂ ದೈವವನ್ನೇ ಗುರಿಮಾಡಿ-
ಉದಾರವಾಗಿ-ಉದ್ಧಾರಕ್ಕಾಗಿ ಹೇಳುವುದು-ಎಂದೂ-ಹಿಂದೆಂದೂ ಇರದಿದ್ದ,ಆಗದಿದ್ದ,ಘಟಿಸದ ಘಟನೆಗಳು ಎಂತ ತಿಪ್ಪೆಸಾರಿಸಿ ಸಲೀಸಾಗಿ
ಐಷಾರಾಮದ ಜೀವನನಡೆಸುತ್ತಾ ಮಜ ಮೊಜಿನಲ್ಲಿ ತಲ್ಲೀನ.
ಇದೇ ಚಾರಿತ್ರ್ಯ-ಚರಿತ್ರ.
ಆಳುವ ಜನ ಬೆರಳೆಣಿಕೆಯ ದಾಮಾಶದವರು.
ದೇವರು ಏಕಮೇವಾದ್ವಿತೀಯ.
ಆಳಿಸಿಕೊಳ್ಳುವ,ಅಳುವ,ಅರಳದ,ಮೂಲೆಗುಂಪಿನ ಗಣ-ಜನಸಮುದಾಯ-ಆದಾಯವಿಲ್ಲ-ಅಧಾರವಿಲ್ಲ-ಎಲ್ಲಾಖಚಿ೯ನಬಾಬೇ.
ಇದೇ ಜನಸಕಾ೯ರ-ಪ್ರಜಾಸಕಾ೯ರದ ಮೆರಗು-ಬೆರಗು.
ಇದಕ್ಕೆ ಮರುಗುವರು ಜನಸಾಮಾನ್ಯರೇ.
ಇವರು ಆಗಲೇಇಲ್ಲ-ಮಾನ್ಯರು-ಸವ೯ಮಾನ್ಯರು-ಸಾಮಾನ್ಯರಾಗಿಯೇ ಜೀವನ್ಮುಕ್ತರಾಗುವುದೇ ಆವರ ಜಾಯಮಾನ.
ಯಜಮಾನ-ಯಾಜಮಾನ್ಯ-ದಿವ್ಯ.
ದಿವ್ಯ ಪುರುಷ-ಪರಮಾತ್ಮನೂ ಲೆಕ್ಕಕ್ಕಿಲ್ಲ,
ಅಗಾಧ ಗಾತ್ರದ ಜನಸಾಗರ-ಗರವಾಗಲಿಲ್ಲ,ಗುರುವಾಗಲಿಲ್ಲ-ಗೌಣವಾದ-ನಿಗು೯ಣವಾದ.
ದೇವರಿಗೆ ವಕಾಲತ್ತು ಮಾಡೋಣವೆಂದರೆ ಸಹಮತ ತಿಳಿಸಲು ದೇವರೇ ಸಿಗ.
ದೇವರಿಗೆಬೇಕೆ ವಕಾಲತ್ತು ಎಂದರೆ-ಭೂಮಿಯಲ್ಲಿ ಆಅತ್ತು ಬಂದರೆ ಶಿಷ್ಟಾಚಾರದಂತೆ ಭೂ ನ್ಯಾಯಲದಲ್ಲಿ ಭುವಿಜನರೇ ಅಲ್ಲವೇ ಸಾಧು-ಸಿಂಧು-ಸಾಧ್ಯ?
ಕಾನೂನಿತೊಡಕಿಗೆ ಒದಯದಿದ್ದರೆ-ತಿವಿಯದಿದ್ದರೆ ನ್ಯಾಯ ದಕ್ಕುವುದೇ?
ನ್ಯಾಯದ ಅಭಾವದಲ್ಲಿ ಪೂವ೯ನಿಧ೯ರಿತ ಅಪರಾಧಕ್ಕೆ ಎಲ್ಲಿದೆ ಶಾಸ್ತಿ?
ಶಾಸ್ತಿಯಿಲ್ಲದಾದಮೇಲೆ ಶಾಂತಿ ಎಲ್ಲಿ-ಯಾವಾಗ-ಯಾರಿಗೆ?
ಆರಾಧಿಯಾಗಿಯೇ ನಿಂತ ಪರಮಾತ್ಮ ಕಾಯದೇ ಗತ್ಯಂತರವಿಲ್ಲ.
“ಯಾರು ಹಿತವರು?
ಯಾರು ನಮ್ಮವರು?
ಯಾರು ಪರರು?
ಯಾರು ಪರಕೀಯರು?”
ನ್ಯಾಯಕ್ಕೆ ದೈವವಿಲ್ಲ.
ದೈವಕ್ಕೆ ನ್ಯಾಯವಿಲ್ಲ.
ಈಗ ಪರಮಾತ್ಮನಿಗೆ ತನ್ನ ಸೃಷ್ಟಿಯ ಬಗೆಗೆ ಹೇಸಿಗೆ ಎನಿಸಿ,
ರೋಸಿ ತಾನು ಏಕಾದರೂ ಸೃಷ್ಟಿಮಾಡಿದೆನೋ ಎಂತ ಪಶ್ಚಾತ್ತಾಪಾಡದೆ ಅನ್ಯ ಮಾಗ೯ವಿದೆಯೆ?
ಹಿಂದಿನ ಯುಗಗಳಲ್ಲಿ ಭಗವಂತನ ಮಾತು.
ಕಲಿಯುಗದಲ್ಲಿ ಭಗವಂತನೇ ಕಲಿಯಬೇಕು ತನ್ನ ಯಃ ಕಶ್ಚಿತ್ ಸೃಷ್ಟಿ ಮನುಷ್ಯನಿಂದ.
“ಅಳಬೇಕೆ-ನಗಬೇಕೆ?”
ಬನ್ನಿ ಕೇಳೋಣ ಭಗವಂತನನ್ನೇ ಆತ ಸಿಕ್ಕಿದರೆ-ಉತ್ತರಿಸಿದರೆ.
ಆರ್‍.ಎಂ.ಶಮ೯
[email protected]

LEAVE A REPLY

Please enter your comment!
Please enter your name here