ಅನ್ ಲೈನ್ ತರಗತಿಗಳು: ಸಾಧ್ಯತೆಗಳು ಮತ್ತು ಸವಾಲುಗಳು

0
272

“ಮನೆಯೇ ಪ್ರಥಮ ಪಾಠ ಶಾಲೆ, ಜನನಿ ತಾನೇ ಮೊದಲ ಗುರು ” ಎಂಬ ನಾಣ್ಣುಡಿಯನ್ನು ಕಾಲಕ್ಕೆ ತಕ್ಕಂತೆ “ಮೊಬೈಲೇ ಪ್ರಥಮ ಪಾಠ ಶಾಲೆ , ತಾಯಿಯೇ ಎರಡನೇ ಗುರು ” ಎಂದು ಬದಲಾಯಿಸ ಬೇಕಿದೆ. ಅತಿಯಾದ ಮೊಬೈಲ್ ಬಳಕೆ ಮಕ್ಕಳ ಆರೋಗ್ಯ ಮತ್ತು ಕ್ರಿಯಾಶೀಲತೆಗೆ ಹಾನಿಕಾರಕ ಎಂಬ ಮಾತುಗಳ ನಡುವೆಯು ಮಗುವಿನ ಬೆಳವಣಿಗೆಯಲ್ಲಿ ಪ್ರತೀ ಹಂತಗಳಲ್ಲಿ ಮೊಬೈಲ್ ಬಳಕೆ ಕಾಣುತ್ತಲೇ ಬಂದಿದ್ದೇವೆ. ಮೊಬೈಲ್ ಮುಟ್ಟಿದರೆ ಜೋಕೆ ಎನ್ನುತ್ತಿದ್ದ ಗುರುಗಳು ಅದರಲ್ಲೇ ಪಾಠವನ್ನು ನೋಡಿಕೊಳ್ಳಿ ಎನ್ನಬೇಕಿದೆ!. ಪೋಷಕರು ಅನಿವಾರ್ಯವಾಗಿ ಮಕ್ಕಳಿಗೆ ತಮ್ಮ ಮೊಬೈಲನ್ನು ಅಥವಾ ಮಿಗಿಲಾದ ಆಂಡ್ರಾಯ್ಡ್ ಮೊಬೈಲ್ ಫೋನ್ ನ್ನು ಹೆಚ್ಚಿನ ಇಂಟರ್ನೆಟ್ ಸೌಲಭ್ಯದೊಂದಿಗೆ ಕೊಡಿಸಬೇಕಿದೆ. ಅವಶ್ಯಕವಿಲ್ಲದಿದ್ದರೂ ಅಂತರ್ಜಲಾದಲ್ಲಿ ಬ್ರೋಸ್ ಮಾಡವುದನ್ನು, ಅಸಭ್ಯ ವೆಬ್ ಸೈಟ್ ಗಳಿಗೆ ಹೋಗವುದನ್ನು, ಯೂ ಟ್ಯೂಬ್, ಫೇಸ್ ಬುಕ್, ಇನ್ಸ್ಟೋಗ್ರಾಮ್, ಟ್ವೀಟ್ ರ್ ಮತ್ತು ಇತರೆಡೆಗಳಲ್ಲಿ ಮಕ್ಕಳು ಹೆಚ್ಚಿನ ಕಾಲಹರಣ ಮಾಡುವುದನ್ನು ತಡೆ ಹಿಡಿಯಬೇಕಿದೆ. ಇದು ಪೋಷಕರಿಗೆ ಒಂದು ಸವಾಲಾಗಿದೆ.
ಕೋವಿಡ್-19ನಿಂದಾಗಿ ಇಡೀ ಜಗತ್ತೇ ಸ್ತಬ್ದಗೊಂಡಿರುವಾಗ ಶಿಕ್ಷಣದ ನೀತಿಯನ್ನು ಪುನರ್ ಪರಿಶೀಲಿಸುವ ಅಗತ್ಯತೆ ಕುರಿತು ಚಿಂತಿಸಬೇಕಿದೆ. ವಿದ್ಯಾರ್ಥಿಗಳಿಗೆ ಬಾಕಿ ಇರುವ ಪಠ್ಯ ಮುಗಿಸಬೇಕು, ಪರೀಕ್ಷೆ ನಡೆಸಿ ಮೌಲ್ಯಮಾಪನ ಮಾಡಿ ಫಲಿತಾoಶ ಘೋಷಣೆ ಅಗಬೇಕು. ಈ ಎಲ್ಲಾ ಕಾರ್ಯಕ್ಕೆ ಪರ್ಯಾಯ ಮಾರ್ಗಗಳ ಅನ್ವೇಷಣೆಯಲ್ಲಿದ್ದಾಗ ತತ್ಕ್ಷಣಕ್ಕೆ ಕಂಡು ಬಂದ ಮಾರ್ಗವೇ ಅನ್ ಲೈನ್ ತರಗತಿಗಳು ಮತ್ತು ಅನ್ ಲೈನ್ ಪರೀಕ್ಷೆಗಳು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವ ವಿದ್ಯಾಲಯಗಳು ಹಾಗು ಸರ್ಕಾರವು ಸಹ, ತಪ್ಪು ಸರಿಗಳ ಚಿಂತನೆಗಿಂತಲೂ NEED OF THE HOUR ತತ್ವದಡಿಯಲ್ಲಿ ತಮ್ಮಅಸ್ತಿತ್ವಕ್ಕಾಗಿ ಶರವೇಗದಲ್ಲಿ ಅನ್ ಲೈನ್ ತರಗತಿಗಳನ್ನು ಆರಂಭಿಸಿ ಮತ್ತು ಅನ್ ಲೈನ್ ಮೂಲಕವೇ ಇಂಟರ್ನಲ್ಸ್ ಪರೀಕ್ಷೆ ಮಾಡುತ್ತೇವೆ ಎಂದು ಮೊಬೈಲ್ ಗೆ ಮೆಸೇಜ್ ಮಾಡಿ ವಿದ್ಯಾರ್ಥಿಗಳ ಆತಂಕ ಕಡಿಮೆ ಮಾಡಿರುವುದು ಒಂದಡೆಯಾದರೆ ವಿಶ್ವ ವಿದ್ಯಾಲಯಗಳು ಅನ್ ಲೈನ್ ಮೂಲಕ ಪರೀಕ್ಷೆ ನಡೆಸುವ ಬಗ್ಗೆ ಚಿಂತಿಸುತ್ತಿವೆ.

ಅನ್ ಲೈನ್ ತರಗತಿ ಸಾಧ್ಯತೆಗಳು: ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ ಉಚಿತ ಅಪ್ ಬಳಕೆ ಮೂಲಕ ವಿದ್ಯಾರ್ಥಿಗಳಿಗೆ ಅನ್ ಲೈನ್ ತರಗತಿಗಳು ಆರಂಭವಾಗಿವೆ. ಪೂರ್ವ ನಿಗದಿತ ಮೆಸೇಜ್ ಮಾಹಿತಿಯಂತೆ ವಿದ್ಯಾರ್ಥಿಗಳು ಲಾಗಿನ್ ಅಗಿ ಪಾಠ ಪ್ರವಚನಗಳನ್ನು ಆಲಿಸಿ ಕಲಿಯಬಹುದಾಗಿದೆ.

ಚಿತ್ರ ಕೃಪೆ: ಅಂತರ್ಜಾಲ.

ಉಚಿತ ಆಪ್ ಗಳು: ಏಕ ಕಾಲಕ್ಕೆ ಎಲ್ಲರೊಂದಿಗೆ ಚರ್ಚಿಸಲು/ಮಾತನಾಡಲು ಸಹಾಯವಾಗುವ ರೀತಿಯಲ್ಲಿ ಕಾರ್ಯ ನಿರ್ವಹಿಸುವ ಹತ್ತಾರು ಉಚಿತ ಆಪ್ ಗಳು ಅಂತರ್ಜಲಾದಲ್ಲಿ ಕಂಡು ಬರುತ್ತವೆ. ಈ ಅಪ್ ಗಳು ಆರಂಭದಲ್ಲಿ ವರ್ಕ್-ಫ್ರಓಂ-ಹೋಮ್ ನಲ್ಲಿರುವರೊಂದಿಗೆ ಕಾನ್ಫರೆನ್ಸಿoಗ್/ಮೀಟಿಂಗ್ ಗೆ ಬಳಕೆಯಾದರು ನಂತರದಲ್ಲಿ ಪಾಠ ಕಲಿಯಲು/ಮಾಡಲು ( ಲರ್ನ/ಟೀಚ್-ಫ್ರಓಂ-ಹೋಮ್) ಬಳಕೆಯಾಗತ್ತಿರುವುದು ಸರಿ. ಅವುಗಳಲ್ಲಿ ಜೂಮ್ (ಚೀನಾ), ಸಿಸ್ಕೋ ವೆಭೆಕ್ಸ (ಮೂಲ ಭಾರತ -ಪ್ರಸ್ತುತ ಅಮೇರಿಕಾ), ವೇದಾoತು (ಭಾರತ), ಜಿ-ಟೀಮ್, ಗೋ -ಟು, ಮೈಕ್ರೋ ಸಾಫ್ಟ್-ಮೀಟ್ ….. ಮುಂತಾದವಗಳು ಎಲ್ಲಡೆ ಹೆಚ್ಚು ಚರ್ಚೆಯಾಗುತ್ತಿವೆ.
ಕರೋನದಂತ ಮಹಾ ಮಾರಿ ಹಾಗು ಜೂಮ್ ಎಂಬ ಅಪ್ ನ ಜನಕ ದೇಶ ಚೀನಾ!. ಅಡಾಳಿತ್ಮಕ ನಿಲುವುಗಳು ಮತ್ತು ಸದಾ ವ್ಯವಹಾರಯುಕ್ತ ನಡುವಳಿಕೆಗಳಿಂದ ಜಗತ್ತಿನ ಕಣ್ಣಿನಲ್ಲಿ ನಿಗೂಡ ರಾಷ್ಟ್ರವೆಂಬ ಕುಖ್ಯಾತಿ ಪಡೆದಿರುವ ದೇಶವೆಂದರೆ ಚೀನಾ. ಈ ದೇಶದಿಂದ ಹಬ್ಬಿರುವ ಕರೋನ, ಜಗತ್ತಿನ ಸoಕಷ್ಟಕ್ಕೆ ಕಾರಣವಾಗಿದ್ದರೆ, ಜೂಮ್ ಅಪ್ ಹೆಚ್ಚು ಪ್ರಚಲಿತವಾಗಿ ಅದೇ ಸಮಯದಲ್ಲಿ ಉಚಿತವಾಗಿ ಬಳಕೆಗೆ ಬಂದಿರುವುದು ಕಾಕತಾಳಿಯವೇ? ಅಥವಾ ಅದು ಸಹಾ ಚೀನಾದ ಗೋಪ್ಯ ಉದ್ದೇಶದ ನಡೆಯೇ? ಈಗಾಗಲೆ ಸಿಂಗಪೂರ್ ಮತ್ತು ಜರ್ಮನಿ ದೇಶಗಳು ಸದರಿ ಅಪ್ ಬಳಕೆಗೆ ನಿಷೇಧ ಹೇರಿದ್ದು, ಕೇಂದ್ರ ಸರ್ಕಾರವು ಮುಖ್ಯ ಸಭೆಗಳಲ್ಲಿ, ಪ್ರಮುಖ ವ್ಯಾವಹಾರಿಕ ಸಂಬಂಧ ಸಭೆಗಳಲ್ಲಿ ಬಳಸುವ ಮುನ್ನ ಎಚ್ಚರ ವಹಿಸಲು ಆದೇಶಿಸಿದೆ. ಪರಿಸ್ಥಿತಿ ಬದಲಾಗದಿದ್ದಾರೆ, ಮನಸ್ಥಿತಿಯನ್ನೇ ಬದಲಾಯಿಸಿ ಕೊಳ್ಳಿ ಎಂಬಂತೆ ಸಿಸ್ಕೋ ವೆಭೆಕ್ಸ ಮತ್ತು ಇತರೆ ಅಪ್ ಗಳು ಸಹ ಜೂಮ್ ನಲ್ಲಿರುವ ಎಲ್ಲಾ ಸೌಲಭ್ಯಗಳನ್ನು ಹೊಂದಿರುವುದರಿಂದ ಸುರಕ್ಷಿತವಲ್ಲದ ಚೀನಾದ ಅಪ್ ಬಳಸುವ ಮುನ್ನ ಒಮ್ಮೆ ಆಲೋಚಿಸಿ.

ಪಾಸಿಟಿವ್ ಅಂಶಗಳು:
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಹಾಗು ಏಕಾಗ್ರತೆ ಇರುವವರಿಗೆ ಇದೊಂದು ವರದಾನ. ತಾಂತ್ರಿಕತೆಯ ಬಳಕೆ ಅವರಲ್ಲಿ ಹೊಸ ಚಿಂತನೆಗಳನ್ನು ಸೃಷ್ಟಿಸಿ ನವ-ನವೀನ ಆವಿಷ್ಕಾರಕ್ಕೆ ಪ್ರೇರೆಪಿಸುವುದು ಖಂಡಿತ. ಬೋರ್ಡ್ ವರ್ಕ್ ಇಲ್ಲದೆ ಪಿಪಿಟಿ ಮತ್ತು ವೀಶುಯಲ್ಸ್ ಮೂಲಕ ಪಠ್ಯ ಬೋಧನೆಗೆ ಅವಕಾಶವಿರುವುದರಿಂದ ಹೆಚ್ಚಿನ ವಿವರಣೆಗೆ ಸಮಯ ಮತ್ತು ಪರಿಣಾಮಕಾರಿ ಬೋಧನೆಗೆ ಅವಕಾಶ.

ಸಾಮಾನ್ಯ ಅಥವಾ ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಬಾಕಿಯಿರುವ ಪಠ್ಯವನ್ನು ಮುಗಿಸುತ್ತಾರೆoಬ ಭರವಸೆ ಸಿಕ್ಕಿತಾದರು ಹೊಸ ಸಮಸ್ಯೆಗಳ ಸರಮಾಲೆಗಳನ್ನೆ ಸೃಷ್ಟಿ ಮಾಡಿವೆ. ಈ ಅನ್ ಲೈನ್ ತರಗತಿಗಳು ಪರಿಣಾಮಕಾರಿಯೇ? ವಿದ್ಯಾರ್ಥಿಗಳನ್ನು ನಿಜವಾಗಿಯೂ ತಲುಪುತ್ತೀವೆಯೇ? ಎಂಬ ಪ್ರಶ್ನೆಗಳು ಎದುರಾಗಿವೆ.

Advertisement


ಹೊಸ ಸವಾಲುಗಳು:
1).ಅನ್ ಲೈನ್ ತರಗತಿಗಳಿಗೆ ಬೋಧಕ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಸ್ಮಾರ್ಟ್ ಫೋನ್ ಹೊಂದಿರಬೇಕು ಮತ್ತು ಉತ್ತಮ ನೆಟ್ ವರ್ಕ್ ವ್ಯಾಪ್ತಿ ಪ್ರದೇಶದಲ್ಲಿರಬೇಕು. ಹಾಗಾದರೆ ಬಡ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪಾಡೇನು? ನೆಟ್ ವರ್ಕ್ ಸಿಕ್ಕರೂ ಎಷ್ಟು ಸಮಯದವರಿಗೆ? ನೆಟ್ ವರ್ಕ್ ಗುಣ ಮಟ್ಟವಾದರೂ ಸರಿ ಇದೆಯಾ? ಹಾಗಾದರೆ ನಗರ ಪ್ರದೇಶದ ವಿದ್ಯಾರ್ಥಿಗಳ ಪಾಡೇನು?
2).ಅನ್ ಲೈನ್ ತರಗತಿಗಳಲ್ಲಿ ವಾಯ್ಸ್ /ವಿಡಿಯೋ /ವಾಯ್ಸ್-ವಿಡಿಯೋ ಗಳ ಮೂಲಕ ಬೋಧನೆ ಮಾಡ ಬಹುದಾದರು ಅಡಚಣೆಗಳು ಅಧಿಕ. ವಿಡಿಯೋ ಅಪ್ಲೋಡ್ ಆಗಲು ಹೆಚ್ಚಿನ ಸಮಯ ಹಾಗು ಅಧಿಕ ಡಾಟಾ ಬಳಕೆಯಾಗುತ್ತದೆ.
3). ಪಾರಂಪರಿಕ ತರಗತಿ ಐ-ಟು-ಐ ಶಿಕ್ಷಣ ಬಿಟ್ಟು ಏಕಾಂತದಲ್ಲಿ ತರಗತಿಗಳನ್ನು ಅಲಿಸಲು ಕಷ್ಟವಾಗಿರುವುದು.
4). ಅರ್ಥವಾಗದ ವಿಷಯ ಚರ್ಚಿಸಲು ವಾಯ್ಸ್/ವಿಡಿಯೋ ಕಾಲ್ ಮೂಲಕ ಅವಕಾಶವಿದೆಯಾದರೂ ನೆಟ್ ವರ್ಕ್ ಸಮಸ್ಯೆ ಕಾಡಲಿದೆ.
5) ಸಂಪೂರ್ಣ ಅವಧಿಯ ಪಾಠವನ್ನು ರೆಕಾರ್ಡ್ ಮಾಡಿಲಿಕ್ಕೆ ಅವಕಾಶವಿದೆ. ವಿದ್ಯಾರ್ಥಿಗಳು ಡೌನ್ ಲೋಡ್ ಮಾಡಿ ಕೊಳ್ಳಬಹುದು. ಹೆಚ್ಚಿನ ಡೇಟಾ ಸಮಸ್ಯೆ ಕಾಡಲಿದೆ.
6) ಬೋಧಕ ಸಿಬ್ಬಂದಿಗಳ ಹೆಚ್ಚಿನ ಸಮಯವು ವಾಯ್ಸ್ ಕೇಳಿಸುತ್ತಿದೆಯಾ? ಮತ್ತು ವಿಡಿಯೋ ನಿಮಗೆ ಕಾಣಿಸುತ್ತಿದೆಯಾ? ಎಂದು ಪದೇ ಪದೇ ಕೇಳುವುದರಲ್ಲಿ ವ್ಯಯವಾಗುತ್ತಿದೆ.
7) ಫೇಕ್ ಖಾತೆಗಳ ಮೂಲಕ ಚಾಟ್ಸ್ ಬಾಕ್ಸ್ ನಲ್ಲಿ ಅಸಭ್ಯ ಹಾಗೂ ಅವಹೇಳನಕಾರಿ ಚಾಟ್ಸ್ ಮಾಡುತ್ತಿರುವುದು ಮುಜುಗರದ ಸೃಷ್ಟಿಗೆ ಕಾರಣವಾಗಿದೆ.
8) ಅಸಭ್ಯ ಪೋಸ್ಟರ್ ಗಳನ್ನು ಪೋಸ್ಟ್ ಮಾಡಿ ತರಗತಿಗಳ ಸಭ್ಯತೆಗೆ ತಿಲಾಂಜಲಿ ಇಟ್ಟಿರುವುದು.
9) ವಿದ್ಯಾರ್ಥಿಗಳು ಲಾಗಿನ್ ಅಗಿ ಬೇರೇನೋ ಕೆಲಸದಲ್ಲಿ ತಲ್ಲಿನರಾಗುವುದು.
ಈ ಎಲ್ಲ ಕಾರಣಗಳಿಂದಾಗಿ ಲಕ್ಡೌ ನ್ ಮುಗಿದ ತಕ್ಷಣವೇ ಪರೀಕ್ಷೆಗಳು ಆರಂಭವಾದರೆ ಭವಿಷ್ಯದ ಕತೆ ಏನು ಎಂದು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮತ್ತೊಮ್ಮೆ ಆತಂಕಕ್ಕೆ ಒಳಗಾಗಿರುವುದು. ಖ್ಯಾತ ವಿಜ್ಞಾನಿ ಮತ್ತು ರಾಷ್ಟ್ರಪತಿಗಳಾಗಿದ್ದ ಎ ಪಿ ಜೆ ಅಬ್ದುಲ್ ಕಲಾಂ ರವರ ಆಣೀ ಮುತ್ತಿನಂತೆ ನಾವೆಲ್ಲರೂ ಸಮಾನ ಪ್ರತಿಭೆಯನ್ನು ಹೊಂದಿಲ್ಲ. ಅದರೆ ನಮ್ಮ ಎಲ್ಲ ಪ್ರತಿಭೆಗಳನ್ನು ಅಭಿವೃದ್ಧಿ ಪಡಿಸಲು ಸಮಾನ ಅವಕಾಶವಿದೆ. ಶಿಕ್ಷಣ ಸಂಸ್ಥೆಗಳು, ವಿಶ್ವ ವಿದ್ಯಾಲಯಗಳೂ ಹಾಗು ಶಿಕ್ಷಣ ಇಲಾಖೆ ಈ ಕುರಿತು ಅಗತ್ಯ ಕಾಳಜಿ ವಹಿಸಿ ಲಕ್ಡೌ ನ್ ಮುಗಿದ ತಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಕೆಲ ದಿನಗಳ ಕಾಲ REVISIONS ತರಗತಿ ಗಳ ಮೂಲಕ ಸoಕ್ಶಿಪ್ತವಾಗಿ ಪಠ್ಯವನ್ನು ಭೋಧಿಸಲು ಕ್ರಮ ಕೈಗೊಳ್ಳಬೇಕು.

ಸಂಸ್ಥೆಗಳ ನಡುವಿನ ಪೈಪೋಟಿ :
ಮೇ – ಟು-ಜುಲೈ ತಿಂಗಳುಗಳೆಂದರೆ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶಾತಿಗಳ ಪರ್ವ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಆಕರ್ಷಿಸಿ ಪ್ರವೇಶಾತಿ ಪ್ರಕ್ರಿಯೆ ಮುಗಿಸುವ ಧಾವಂತ. ಎಂದಿನ ಪರೀಕ್ಷೆಗಳ ಜೊತೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ ಸಿಕ್ಕರೆ ಮಕ್ಕಳಿಗೆ ಅನುಕೂಲ ಎಂಬುದೇ ಎಲ್ಲಾ ಪೋಷಕರ ಬಯಕೆ. ಅದರಲ್ಲೂ ಇಲಾಖೆ / ವಿಶ್ವ ವಿದ್ಯಾಲಯಗಳು ನಿಗದಿಪಡಿಸಿದ ಪಠ್ಯದ ಜೊತೆಗೆ ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಾದ TOEFL / CAT / GATE / JAM / NID /NIFT / CA / CS… ….JEE/NEET/CET/ COMED-K / KYPY / ….. ಮುಂತಾದ ಪರೀಕ್ಷೆಗಳ ತರಬೇತಿ ನೀಡುವ ಪ್ರಮುಖ ಸಂಸ್ಥೆಗಳಲ್ಲಿ ಮಕ್ಕಳಿಗೆ ಸೀಟು ಕೊಡಿಸಲು ಪೋಷಕರ ಹೋರಾಟ. ಇಂದಿನ ದಿನಗಳಲ್ಲಿ ಅನ್ ಲೈನ್ ತರಗತಿಗಳು ಮತ್ತು ಅನ್ ಲೈನ್ ಪರೀಕ್ಷೆ ಸೌಲಭ್ಯ ಹೊoದಿದ್ದೆವೆ ಎಂಬುದೇ ಪ್ರಮುಖ ಆಕರ್ಷಣೆ. ಈ ತರಬೇತಿ ನೀಡುವುದರಲ್ಲಿ ನಾವೇ ಮೊದಗಲಿಗರು ಎಂದು ಪ್ರಚುರ ಪಡಿಸುವುದಕ್ಕೆ ಮುಂದೊಂದು ದಿನಾ ಸಂಸ್ಥೆಗಳ ನಡುವೆ ಭಾರಿ ಪೈಪೋಟಿಗೆ ಕಾರಣವಾಗಲಿದೆಯಾ?

ಅನ್ ಲೈನ್ ತರಗತಿಗಳನ್ನು ಪೂರ್ತಿಯಾಗಿ ತಿರಸ್ಕರಿಸುವುದು ಈ ಲೇಖನದ ಅಥವಾ ಲೇಖಕನ ಘನ ಉದ್ದೇಶವಲ್ಲ. ಖ್ಯಾತ ವಿಜ್ಞಾನಿ ಥಾಮಸ್ ಎ ಎಡಿಸನ್ ರವರ ಆಣೀ ಮುತ್ತಿನಂತೆ THERE’S A WAY TO DO IT, BETTER – FIND IT ಎಂಬ ಮಾತು ಸುಳ್ಳಲ್ಲ. ಈ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲುವ ಅಪ್ ಗಳು ಮಾರುಕಟ್ಟೆಗೆ ಬರಲು ಹೆಚ್ಚಿನ ದಿನಗಳು ಬೇಕಿಲ್ಲ. ಆದರೆ ಈ ಬಗ್ಗೆ ಕೇಂದ್ರ /ರಾಜ್ಯ ಸರಕಾರಗಳು / ವಿಶ್ವ ವಿದ್ಯಾಲಯ/ ಶಿಕ್ಷಣ ಇಲಾಖೆ/ಶಿಕ್ಷಣ ಸಂಸ್ಥೆಗಳಲ್ಲಿ ದೂರದರ್ಶಿತ್ವ ಮತ್ತು ಬದ್ಧತೆ ಬೇಕಿದೆ.

ಸ್ವದೇಶಿ ಅಪ್:
ಐಟಿ-ಬಿಟಿ ಕ್ಷೇತ್ರಕ್ಕೆ ಮಹತ್ತರ ಕೊಡುಗೆಯನ್ನು ಭಾರತ ನೀಡಿದೆ. ಐಟಿ ಲೋಕಕ್ಕೆ ನಾರಾಯಣ ಮೂರ್ತಿ, ಆಜೀo ಪ್ರೇo ಮುಂತಾದ ಹಲವು ದಿಗ್ಗಜರು ನೀಡಿರುವ ಕಾಣಿಕೆ ಅಪ್ರತಿಮ. ಕರೋನದಿಂದ ಭಾರತಕ್ಕೆ ಆಗಿರುವ ಹಾನಿ ಸಂಧರ್ಭದಲ್ಲಿ ಇವರ ಸಂಸ್ಥೆಗಳು ನೀಡಿರುವ ಸಹಾಯ ಧನ ಮತ್ತು ತಮ್ಮ ಹಂತದಲ್ಲಿಯೇ ಮಾಡಿರುವ ಸೇವೆ ಶ್ಲಾಘನೀಯ. ಪ್ರಖ್ಯಾತ ಐಟಿ ಕಂಪನಿಗಳಲ್ಲಿನ CEO ಗಳು ನಮ್ಮ ಭಾರತೀಯರು ಎಂದು ವೇದಿಕೆಗಳಲ್ಲಿ ಅಭಿಮಾನದಿಂದ ಎದೆ ತಟ್ಟುತ್ತೇವೆ. ಐಟಿ -ಬಿಟಿಗಳ ಕೇಂದ್ರ ಸ್ಥಾನ ಬೆಂಗಳೂರು ಎಂದು ಬಡಾಯಿ ಕೊಚ್ಚಿ ಕೊಳ್ಳುತ್ತವೆ. ಲಕ್ಷಾಂತರ ಉತ್ತಮ ಸಾಫ್ಟವೇರ್ ಇಂಜಿನೀಯರ್ ಗಳನ್ನು ಜಗತ್ತಿಗೆ ನೀಡಿದ ಭಾರತದ ಇಂಜಿನೀಯರಿಂಗ್ ಕಾಲೇಜುಗಳು , ಅವಶ್ಯಕತೆ ಅನುಗುಣವಾಗಿ ಅನ್ ಲೈನ್ ತರಗತಿಗಳಿಗೆ ತನ್ನದೇ ಅಪ್ ನ್ನು ಹೊಂದುವಲ್ಲಿ ಏಕೆ ಆದ್ಯತೆ ನೀಡಲಿಲ್ಲವೆಂಬುದು ಯಕ್ಷ ಪ್ರಶ್ನೆ. Made in India ಎಂಬ ಘೋಷಣೆಯಲ್ಲಿ ಸ್ವಾಭಿಮಾನ ಭಾರತವನ್ನು ಕಟ್ಟಲು ಹೊರಟಿರುವ ನಾವೂ, ಅನ್-ಲೈನ್ ತರಗತಿಗಳನ್ನು ವಿದ್ಯಾರ್ಥಿ-ಪೋಷಕ-ಶಿಕ್ಷಕ-ಸ್ನೇಹಿಯಾಗಿ ಬದಲಾಯಿಸಬೇಕಿದೆ. ಈ ನಿಟ್ಟೀನಲಿ ಪ್ರಸ್ತುತ ಎದುರಿಸುತ್ತಿರುವ ಸವಾಲುಗಳಿಗೆ ಪರಿಣಾಮಕಾರಿಯಾದ ಸ್ವದೇಶಿ ಉಚಿತ ಅಪ್ ನ್ನು ಶೀಘ್ರವಾಗಿ ಕಂಡು ಹಿಡಿಯಲಿ ಎಂಬುದೇ ಆಶಯ ಮತ್ತು ಹಾರೈಕೆ. ಗುರುವಿನ ಉಪಸ್ತಿತಿಯಲ್ಲಿ ಇ-ಕಲಿಕೆಯನ್ನು ಪಾರಂಪರಿಕ ಶಿಕ್ಷಣದ ಜೊತೆ ಜೊತೆಗೆ ತೆಗೆದು ಕೊಂಡು ಹೋಗಬಲ್ಲ ವ್ಯವಸ್ತೆ ಮಾತ್ರ ಸಾoಸ್ಕೃತಿಕ ಹಿನ್ನಲೆಯ ಭವ್ಯ ಭಾರತಕ್ಕೇ ಸೂಕ್ತವಲ್ಲವೇ?

ಎ.ಇ. ರಾಜಶೇಕರ್
ಹಿರಿಯ ಉಪನ್ಯಾಸಕರು, ಗಣಿತ ಶಾಸ್ತ್ರ ವಿಭಾಗ, D V S ಪದವಿ ಪೂರ್ವ(ಸ್ವತಂತ್ರ) ಕಾಲೇಜು, ಶಿವಮೊಗ್ಗ.

LEAVE A REPLY

Please enter your comment!
Please enter your name here