'ಅನ್ನಭಾಗ್ಯ' ಅಕ್ಕಿಚೀಲ ಜಪ್ತಿ

0
256

 
ಗದಗ ಪ್ರತಿನಿಧಿ ವರದಿ
ಅಕ್ರಮವಾಗಿ ಸಾಗುಸುತ್ತಿದ್ದ ‘ಅನ್ನಭಾಗ್ಯ’ ಅಕ್ಕಿಚೀಲಗಳನ್ನು ಜಪ್ತಿ ಮಾಡಲಾಗಿದೆ. ಗದಗ ಜಿಲ್ಲೆಯ ರೋಣ ತಾಲೂಕಿನ ಗಜೇಂದ್ರಗಢ ಬಸ್ ನಿಲ್ದಾಣದ ಬಳಿ ಅಕ್ಕಿ ಚೀಲಗಳನ್ನು ಜಪ್ತಿ ಮಾಡಲಾಗಿದೆ.
 
ಆಹಾರ ಇಲಾಖೆ ಅಧಿಕಾರಿಗಳು ಅನ್ನಭಾಗ್ಯ ಅಕ್ಕಿಯನ್ನು ಜಪ್ತಿ ಮಾಡಿದ್ದು, ತಲಾ 50 ಕೆ.ಜಿ.ಯ 410 ಬ್ಯಾಗ್ ಅನ್ನಭಾಗ್ಯ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ.
 
 
ಬ್ಯಾಗ್ ಬದಲಾಯಿಸಿ ಅಕ್ಕಿಯನ್ನು ಸಾಗಾಟ ಮಾಡಲಾಗುತ್ತಿತ್ತು. ಕರ್ನೂಲ್ ರೈಸ್ ಹೆಸರಿನ ಬ್ಯಾಗ್ ನಲ್ಲಿ ತುಂಬಿ ಬಳ್ಳಾರಿ ಜಿಲ್ಲೆ ಸಿರಗುಪ್ಪದಿಂದ ಮಂಗಳೂರಿಗೆ ಸಾಗಾಟ ಮಾಡಲಾಗುತ್ತಿತ್ತು.
 
 
ಚಕ್ರಪಾಣಿ ಟ್ರೇಡಿಂಗ್ ಕಂಪನಿಯಿಂದ ಶಾಜ್ ಟ್ರೇಡಿಂಗ್ ಕಂಪನಿಗೆ ಅಕ್ರಮ ಸಾಗಾಟ ಮಾಡಲಾಗಿತ್ತು. ತನಿಖೆ ನಡೆಸಿದ ಅಧಿಕಾರಿಗಳು ಲಾರಿ ಸಮೇತ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here