ದೇಶಪ್ರಮುಖ ಸುದ್ದಿರಾಜ್ಯವಾರ್ತೆ

ಅನುಮಾನಾಸ್ಪದ ವಿಮಾನ ಹಾರಾಟ update news

ವಿಜಯಪುರ ಪ್ರತಿನಿಧಿ ವರದಿ
 
ಆತಂಕ ಪಡುವ ಅಗತ್ಯವಿಲ್ಲ
ವಿಜಯಪುರ ಆಲಮಟ್ಟಿ ಡ್ಯಾಂ ಮೇಲೆ ಅನುಮಾನಾಸ್ಪದವಾಗಿ ವಿಮಾನ ಹಾರಾಟ ಪ್ರಕರಣಕ್ಕೆ ತೆರೆ ಬಿದ್ದಿದೆ. ನಿಗೂಢವಾಗಿ ಹಾರಾಡುತ್ತಿದ್ದ ಸಣ್ಣ ವಿಮಾನ ಬೀದರ್ ನ ಎರ್ ಫೋರ್ಸ್ ಟ್ರೈನಿಂಗ್ ಸೆಂಟರ್ ಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಬೀದರ್ ನ ಎರ್ ಫೋರ್ಸ್ ಟ್ರೈನಿಂಗ್ ಸೆಂಟರ್ ಜತೆ ಮಾತುಕತೆ ನಡೆಸಲಾಗಿದೆ. ಇದರಿಂದ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಮಾಧ್ಯಮಕ್ಕೆ ವಿಜಯಪುರ ಎಸ್ ಪಿ ಸಿದ್ದರಾಮಪ್ಪ ತಿಳಿಸಿದ್ದಾರೆ.
 
 
ವಿಜಯಪುರ ಆಲಮಟ್ಟಿ ಡ್ಯಾಂ ಮೇಲೆ ನಿಗೂಢವಾಗಿ ವಿಮಾನ ಹಾರಾಟ ನಡೆಯುತ್ತಿದೆ. ನಿಷೇಧಿತ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ವಿಮಾನ ಹಾರಾಟ ನಡೆಸುತ್ತಿದೆ. ಕಳೆದ ಒಂದು ವಾರದಿಂದ ಈ ವಿಮಾನ ಜಲಾಶಯದ ಮೇಲೆ ಹಾರಾಡುತ್ತಿದೆ.
ಅತಿ ಕೆಳಮಟ್ಟದಲ್ಲಿ ವಿಮಾನ ಹಾರಾಟ ನಡೆಸಿದ್ದರಿಂದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮಾರ್ಚ್ 15, 16, 17ರಂದು ಸತತ 3 ದಿನ ಹಾರಾಟ ನಡೆಸಿದ ವಿಮಾನ ಮತ್ತೆ ಇಂದು ಬೆಳಗ್ಗೆ 9.40ರ ಸುಮಾರಿಗೆ ಮತ್ತೆ ನಿಗೂಢ ವಿಮಾನ ಕಾಣಿಸಿಕೊಂಡಿದೆ.
 
 
 
ಈ ಬಗ್ಗೆ ಏರ್ ಟ್ರಾಫಿಕ್ ಕಂಟ್ರೋಲ್ ಕಚೇರಿಗೆ ಸಂಪರ್ಕಿಸಿದ್ದೇನೆ. ಸಾಂಬ್ರಾ, ಹುಬ್ಬಳ್ಳಿ, ಚೆನ್ನೈ ನಿಲ್ದಾಣದಿಂದ ಯಾವುದೇ ಮಾಹಿತಿ ಇಲ್ಲ. KSISF ಪಡೆ ಆಲಮಟ್ಟಿ ಡ್ಯಾಂ ಸುರಕ್ಷತೆಗಾಗಿ ನಿಯೋಜನೆಗೊಂಡಿದೆ. ಈ ಬಗ್ಗೆ KSISF ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಎಂದು ಮಾಧ್ಯಮಕ್ಕೆ ವಿಜಯಪುರ ಎಸ್ ಪಿ ಸಿದ್ದರಾಮಪ್ಪ ತಿಳಿಸಿದ್ದಾರೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here