ಅನುದಾನ

0
463

ಮಂಗಳೂರು ಪ್ರತಿನಿಧಿ ವರದಿ
ಸಂಸದ ನಳಿನ್ ಕುಮಾರ್ ಕಟೀಲ್ ಅವರ ಪ್ರಸ್ತಾವನೆ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಕೇಂದ್ರೀಯ ರಸ್ತೆ ನಿಧಿ (ಸಿಆರ್ ಎಫ್)ಯಿಂದ 122.90 ಕೋಟಿ ರೂ. ಅನುದಾನ ಮಂಜೂರಾಗಿದೆ. ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಜಿಲ್ಲೆಯ ಪ್ರಸ್ತಾವನೆಯನ್ನು ಅಂಗೀಕರಿಸಿ ಹೆಚ್ಚಿನ ಅನುದಾನ ಒದಗಿಸಿದ್ದಾರೆ ಎಂದು ಸಂಸದರು ಪ್ರಕಣೆಯಲ್ಲಿ ತಿಳಿಸಿದ್ದಾರೆ.
 
 
ಬಂಟ್ವಾಳ ತಾಲೂಕಿನ ಕೊಲ್ನಾಡು ಗ್ರಾಮದ ನೆಕ್ಕರೆಕಾಡು (ಅಗರಿ-ಕುಲಾಲು )ಸೇತುವೆ ಕಾಮಗಾರಿಗೆ 5 ಕೋಟಿ ರೂ., ಗೋಳ್ತಮಜಲು -ಮಂಚಿ ರಸ್ತೆ ಅಭಿವೃದ್ಧಿಗೆ 2 ಕೋಟಿ ರೂ., ವಗ್ಗ -ಕಾರಿಂಜೇಶ್ವರ ದೇವಸ್ಥಾನ ರಸ್ತೆ ಅಭಿವೃದ್ಧಿ ಮತ್ತು ಮಣಿನಾಲ್ಕೂರು -ಉಳಿ ರಸ್ತೆ ಅಭಿವೃದ್ಧಿಗೆ 4 ಕೋಟಿ ರೂ., ಬಿ.ಸಿ.ರೋಡ್ ಜಂಕ್ಷನ್- ಪಾಣೆಮಂಗಳೂರು ವಯಾ ಗೂಡಿನಬಳಿ ರಸ್ತೆ ಅಭಿವೃದ್ಧಿಗೆ 3.50 ಕೋಟಿ ರೂ., ವಗ್ಗ – ವಾಮದಪದವು ರಸ್ತೆ ಅಭಿವೃದ್ಧಿಗೆ 2.50 ಕೋಟಿ ರೂ., ರಾಯಿ- ಮೂರ್ಜಿ ರಸ್ತೆ ಅಭಿವೃದ್ಧಿಗೆ 1.80 ಕೋಟಿ ರೂ.,
 
ಮೂಡುಬಿದಿರೆ – ಬಂಟ್ವಾಳ ರಸ್ತೆ ಅಭಿವೃದ್ಧಿಗೆ 4 ಕೋಟಿ ರೂ., ಅನ್ನಲಿಕೆ- ಕರಿಮಲೆ ರಸ್ತೆ ಅಭಿವೃದ್ಧಿಗೆ 4 ಕೋಟಿ ರೂ., ಮಂಗಳೂರು ತಾಲೂಕಿನ ಗಂಜಿಮಠ -ನಿಡ್ಡೋಡಿ ರಸ್ತೆ ಅಭಿವೃದ್ಧಿಗೆ 10 ಕೋಟಿ ರೂ., ಶಿರ್ತಾಡಿ ಮಾರೂರು ಹೊಸಂಗಡಿ ಸೇತುವೆ ಕಾಮಗಾರಿಗೆ 5 ಕೋಟಿ ರೂ., ತಾಕೋಡೆ ಚರ್ಚ್-ಪುಚ್ಚೆಮೊಗೆರು ರಸ್ತೆ ಅಭಿವೃದ್ಧಿಗೆ – 2 ಕೋಟಿ ರೂ., ಕೊನ್ಯಪದವು – ಪೂಪಾಡಿಕಲ್ಲು ರಸ್ತೆ ಅಭಿವೃದ್ಧಿಗೆ 3 ಕೋಟಿ ರೂ., ಮಂಗಳೂರು -ಚೆರ್ವತ್ತೂರು ರಸ್ತೆ ಅಭಿವೃದ್ಧಿಗೆ 5 ಕೋಟಿ ರೂ., ಪೆರ್ಮನ್ನೂರು -ಪಾವೂರು- ಹರೇಕಳ ರಸ್ತೆ ಅಭಿವೃದ್ಧಿಗೆ 3.60 ಕೋಟಿ ರೂ., ನಂದಿಕೂರು -ಶಿರ್ವ ರಸ್ತೆ ಕಾಂಕ್ರೀಟ್ ಕಾಮಗಾರಿಗೆ 2 ಕೋಟಿ ರೂ., ಮಂಗಳೂರು ನಗರದ ಜಪ್ಪಿನಮೊಗರು ಎನ್.ಹೆಚ್.66 ಮತ್ತು ಎನ್.ಹೆಚ್.75 ಕಣ್ಣೂರುವರೆಗೆ ರಸ್ತೆ ಅಭಿವೃದ್ಧಿಗೆ 3 ಕೋಟಿ ರೂ., ಕುಲಶೇಖರ ಕನ್ನಗುಡ್ಡೆ ರಸ್ತೆ ಅಭಿವೃದ್ಧಿಗೆ 5 ಕೋಟಿ ರೂ.,
 
 
ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ನೆರಿಯ ಪುದುವೆಟ್ಟು ರಸ್ತೆ ಮತ್ತು ಉಜಿರೆ ಬೆಳಾಲು ಗ್ರಾಮದ ಕುಪ್ಪೆಟ್ಟಿ ರಸ್ತೆ ಅಭಿವೃದ್ಧಿಗೆ 18 ಕೋಟಿ ರೂ.,
ಮುಂಡಾಜೆ – ಧರ್ಮಸ್ಥಳ ರಸ್ತೆ ಅಭಿವೃದ್ಧಿಗೆ 7 ಕೋಟಿ ರೂ., ಪುತ್ತೂರು ತಾಲೂಕು ಅಮ್ಚಿನಡ್ಕ -ನೆಟ್ಟಾರ್ ಮತ್ತು ಹಾಗೂ ಚಾರ್ವಕ -ದೋಳ್ಪಾಡಿ- ಎಡಮಂಗಲ ರಸ್ತೆ ಅಭಿವೃದ್ಧಿಗೆ- 10 ಕೋಟಿ ರೂ. ಅಯ್ಯನ ಕಟ್ಟೆ -ಬೇಗಮಂಗಲ ರಸ್ತೆ ಮತ್ತು ಅರಂತೋಡು ರಸ್ತೆ ಅಭಿವೃದ್ಧಿಗೆ 8.50 ಕೋಟಿ ರೂ., ಕನಕಮಜಲು – ಅಜ್ಜಾವರ ಮತ್ತು ಉಬರಡ್ಕ -ಕಂದಡ್ಕ ರಸ್ತೆ ಅಭಿವೃದ್ಧಿಗೆ 8 ಕೋಟಿ ರೂ., ಪುತ್ತೂರು ತಾಲೂಕು ಬಲ್ಯ- ನೆಲ್ಯಾಡಿ ರಸ್ತೆ ಅಭಿವೃದ್ಧಿಗೆ 6 ಕೋಟಿ ರೂ.ಬಿಡುಗಡೆಯಾಗಿದೆ.

LEAVE A REPLY

Please enter your comment!
Please enter your name here