ಅನುದಾನಿತ ಖಾಸಗಿ ಪದವಿ ಕಾಲೇಜುಗಳ ಪ್ರಾಂಶುಪಾಲರ ಸಭೆ

0
351

ಮ0ಗಳೂರು ಪ್ರತಿನಿಧಿ ವರದಿ
ಕಾಲೇಜು ಮಂಗಳೂರು ವಯಲದ ಪ್ರಾದೇಶಿಕ ಜಂಟಿನಿರ್ದೇಶಕರ ಕಛೇರಿಯ ವ್ಯಾಪ್ತಿಯ ಅನುದಾನಿತ ಖಾಸಗಿ ಪದವಿ ಕಾಲೇಜುಗಳ ಪ್ರಾಂಶುಪಾಲರ ಮುಖಾಮುಖಿ ಸಭೆ ಇತ್ತೀಚೆಗೆ ಲೀಡ್ ಕಾಲೇಜಾದ ಸರಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, ಮಂಗಳೂರು ಇಲ್ಲಿ ನಡೆಯಿತು.
 
ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ವಲಯದ ಪ್ರಾದೇಶಿಕ ಜಂಟಿ ನಿರ್ದೇಶಕರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಉಪಯುಕ್ತ ಸಲಹೆ ಸೂಚನೆ ಮಾರ್ಗದರ್ಶನಗಳನ್ನು ನೀಡಿ ಈ ಭಾಗದ ಯುವಸಮುದಾಯಕ್ಕೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಖಾಸಗಿ ಕಾಲೇಜುಗಳ ಪಾತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ರಾಜಶೇಖರ ಹೆಬ್ಬಾರ್ ಸಿ. ಅವರು ಸ್ವಾಗತಿಸಿ ಕಾರ್ಯಕ್ರಮದ ಯಶಸ್ವಿ ನಿರ್ವಹಣೆಗೆ ಕಾರಣರಾದರು.
 
 
 
ಖಾಸಗಿ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಬ್ರಹ್ಮಾವರದ ಕ್ರಾಸ್‍ಲ್ಯಾಂಡ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸ್ಯಾಮ್ಯುವೆಲ್ ಕೆ. ಸ್ಯಾಮ್ಯುವೆಲ್ ಅವರು ಉಪಸ್ಥಿತರಿದ್ದು, ಸಭೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಸಭೆಯಲ್ಲಿ ಜಂಟಿ ನಿರ್ದೇಶಕರ ಕಛೇರಿಯ ಸಹಾಯಕ ನಿರ್ದೇಶಕರಾದ ಪಾಲ್‍ಸಾಮಿ, ಲೆಕ್ಕ ಪತ್ರ ವಿಭಾಗದ ಅಧೀಕ್ಷಕರಾದ ಗಣೇಶ್ ನಾಯಕ್ ಇವರುಗಳು ಉಪಯುಕ್ತ ಮಾಹಿತಿ ನೀಡಿದರು ಹಾಗೂ ಅಧಿಕಾರಿಗಳಾದ ಸುಮುಖ ಆರ್ಯ, ನವೀನ್‍ಚಂದ್ರ ಅವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here