ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭ

0
219

 
ವರದಿ-ಚಿತ್ರ: ಸುನೀಲ್ ಕುಮಾರ್
2011, 12, 13ರ ಸಾಲಿನ ಅರ್ಜಿದಾರರಿಗೆ ನ್ಯಾಯೋಚಿತವಾಗಿ ಸಲ್ಲಬೇಕಾದ ಸವಲತ್ತುಗಳು ವಿತರಣೆಯಾಗಿಲ್ಲ. (ವಿದ್ಯಾರ್ಥಿ ವೇತನ, ಮದುವೆ, ಅಪಘಾತ ಹಾಗೂ ಇತರ). ನವೀಕರಣದ ಸಂಬಂಧಿಸಿದ ಇಲಾಖೆಯ ನ್ಯೂನತೆ ಹಾಗೂ ಅವರಿಗೆ ನವೀಕರಣಕ್ಕಾಗಿ ಅವಕಾಶ ಪಡೆಯಲು, ಇಲಾಖೆಯಲ್ಲಿರುವ ಭ್ರಷ್ಟಾಚಾರದ ವಿರುದ್ಧ ದಿನಾಂಕ 27-06-2016ರಂದಿನಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದುಗಡೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭವಾಗಿದೆ.
 
 
ಧರಣಿ ಸತ್ಯಾಗ್ರಹವನ್ನು ಫೆಡರೇಶನ್ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿಯವರು ಉದ್ಘಾಟಿಸುತ್ತಾ ಈ ಬಾರಿಯ ಹೋರಾಟ ಹಿಂದಿನ ಹೋರಾಟದ ತರವಲ್ಲ. ಈ ಬಾರಿ ಫಲಿತಾಂಶ ಬರಲೇ ಬೇಕು. ಕಾರ್ಮಿಕರು ಹೋರಾಟ ಮಾಡಿ ಕಾನೂನು ತಂದರು. ಅವರು ನವೀಕರಣ ಮಾಡಿ ಕಲ್ಯಾಣ ಮಂಡಳಿಯಲ್ಲಿ ಹಣ ಸಂಗ್ರಹ ಆಯಿತು. ಸೆಸ್ ಸಂಗ್ರಹ ಕೂಡಾ ಕಾನೂನಿನ ಬೆಂಬಲದಿಂದಲೇ ಆಗಿರುವುದು. ಆದರೆ 11 ಬಗೆಯ ಸವಲತ್ತುಗಳು ಪಡೆಯಲು ಹಲವಾರು ತಡೆಗಳು ಬರುತ್ತಿವೆ. ಅರ್ಜಿ ಸಲ್ಲಿಸುವಾಗ ಇರುವ ಕೊರತೆಯನ್ನು ಸಮರ್ಪಕವಾಗಿ ನೀಗಿಸದೇ ಅನ್ಯಾಯ ಆಗಿದೆ.
 
 
 
ನವೀಕರಣದ ಸಮಸ್ಯೆ ಕಾರ್ಮಿಕ ಇಲಾಖೆಯಿಂದ ಆಗಿರುವುದಕ್ಕೆ ಕಾರ್ಮಿಕರಿಗೆ ಯಾಕೆ ಅನ್ಯಾಯ. ಇದನ್ನು ಒಪ್ಪಲು ಸಾಧ್ಯವಿಲ್ಲ. ಕಾರ್ಮಿಕರಿಗೆ ಬರಬೇಕಾದ ಹಣದಿಂದ ಲಂಚ ನೀಡಬೇಕೆಂದು ಒತ್ತಾಯಿಸುವ ಇಲಾಖೆಯ ನೌಕರರನ್ನು ಕಾರ್ಮಿಕ ಇಲಾಖೆಯಿಂದ ಎತ್ತಂಗಡಿ ಮಾಡಬೇಕು. ಇದು ಕಾರ್ಮಿಕರಿಗೆ ಸರಕಾರದಿಂದ ನೀಡಬೇಕಾದ ನ್ಯಾಯ. ಜಿಲ್ಲಾಧಿಕಾರಿಗಳು ಮಧ್ಯಪ್ರವೇಶ ಮಾಡಿ ಪರಿಹಾರ ನೀಡದಿದ್ದರೆ 30-6-2016ರಿಂದ ಉಪವಾಸ ಸತ್ಯಾಗ್ರಹವಾಗಿ ಪರಿವರ್ತಿಸಲಾಗುವುದೆಂದು ಹೇಳಿದರು.
 
 
 
ಜಿಲ್ಲಾಧ್ಯಕ್ಷರಾದ ಬಿ.ಎಂ.ಭಟ್ ಮಾತನಾಡುತ್ತಾ ಇನ್ನು ಸಹಿಸಲು ಸಾಧ್ಯವಿಲ್ಲ. ನಮಗೆ ಸವಲತ್ತುಗಳು ಪಡೆಯುವ ತನಕ ಹೋರಾಟ ಮುಂದುವರಿಸಬೇಕಾಗಿದೆ. ಬರೀ ಭರವಸೆ ಬೇಕಾಗಿಲ್ಲ. ಕೆಲಸ ಆಗಬೇಕಾಗಿದೆ. ಸಮಸ್ಯೆ ಪರಿಹಾರವಾಗದಿದ್ದರೆ ಹೋರಾಟ ತೀವೃಗೊಳ್ಳುತ್ತದೆ ಎಂದರು.
ಧರಣಿ ಸತ್ಯಾಗ್ರಹವನ್ನು ಬೆಂಬಲಿಸಿ ಶಿವಕುಮಾರ್, ಸದಾಶಿವದಾಸ್, ಯು. ಜಯಂತ ನಾಕ್, ಭಾರತಿ ಬೋಳಾರ, ಸುನೀಲ್ ಕುಮಾರ್ ಬಜಾಲ್, ರವಿಚಂದ್ರ ಕೊಂಚಾಡಿ, ದಯಾನಂದ ಶೆಟ್ಟಿ, ಹಂಝ ಮುಂತಾದವರು ಭಾಷಣ ಮಾಡಿದರು.
 
 
ಇಂದಿನ ಧರಣಿ ಸತ್ಯಾಗ್ರಹದ ನೇತೃತ್ವವನ್ನು ಯೋಗೀಶ್ ಜಪ್ಪಿನಮೊಗರು, ಸಂತೋಷ್, ರವಿಚಂದ್ರ ಕೊಂಚಾಡಿ, ಅಶೋಕ್ ಶ್ರೀಯಾನ್, ಪ್ರೇಮನಾಥ, ದಿನೇಶ್ ಶೆಟ್ಟಿ, ಶಿವರಾಮ ಗೌಡ, ಬಿಜು ಆಗಸ್ತೀನ್, ಲೋಕೇಶ್, ಕೆ.ಪಿ. ಜೋನಿ ಮುಂತಾದವರು ನೇತೃತ್ವವನ್ನು ವಹಿಸಿದ್ದರು.
ಧರಣಿ ಸತ್ಯಾಗ್ರಹ 28-06-2016ನೇ ದಿನಕ್ಕೆ ಮುಂದುವರಿದಿದೆ. ಯೋಗೀಶ್ ಜಪ್ಪಿನಮೊಗರು ಸ್ವಾಗತಿಸಿದರು. ಸಂತೋಷ್ ಶಕ್ತಿನಗರ ಧನ್ಯವಾದ ನೀಡಿದರು.

LEAVE A REPLY

Please enter your comment!
Please enter your name here