ಅನಾಹುತ ಆದಮೇಲೇ ಆಗಮನವೇ…?

0
1298
 ಮೂಡುಬಿದಿರೆ: ಮೆಸ್ಕಾಂ ಅಧಿಕಾರಿಗಳೇ ನೀವೆಲ್ಲಿದ್ದರೂ ಇಲ್ಲಿಗೊಮ್ಮೆ ಬನ್ನಿ…ಇದು ಪಡುಮಾರ್ನಾಡು ಗ್ರಾಮಸ್ಥರ ಒಕ್ಕೊರಲ ಆಗ್ರಹ. ಕಾರಣವಿಷ್ಟೇ     ಪಡುಮಾರ್ನಾಡು ಗ್ರಾಮದ 3ನೇ ವಾರ್ಡಿನ ಬನ್ನಡ್ಕ ದೇವಸ್ಥಾನದ ಹಿಂದುಗಡೆ ರಸ್ತೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯೆಯೋರ್ವರಿಗೆ ಸಂಬಂಧಪಟ್ಟ ಜಾಗದಲ್ಲಿ ಬಹುಗಾತ್ರದ ಒಂದು ಮರ ಒಣಗಿಹೋಗಿ ಒಂದು ವರ್ಷ ಕಳೆದರೂ ಗ್ರಾಮ ಪಂಚಾಯತ್ ಗಮನಕ್ಕೆ ಬರಲಿಲ್ಲ. ಈ ರಸ್ತೆಯನ್ನು ರಿಪೇರಿ ಮಾಡಲು ದೂರು ಕೊಟ್ಟು 10ವರ್ಷ ಕಳೆದರೂ ಅದೂ ಗಮನಕ್ಕೆ ಬಂದಿಲ್ಲ.  8 ವರ್ಷದ ಹಿಂದೆ ಇಲ್ಲಿನ ಸ್ಥಳೀಯರು ಸೇರಿ ಮಣ್ಣು  ಹಾಕಿಸಿ ರಿಪೇರಿ ಮಾಡಿದ್ದು ಬಿಟ್ಟರೆ ಪಂಚಾಯತ್ ಕಡೆಯಿಂದ ಯಾವುದೇ ಕೆಲಸ ಆಗಿಲ್ಲ. ರಸ್ತೆ ಬದಿಯಲ್ಲಿರುವ ಹುಲ್ಲುಗಳನ್ನೂ ಕೆತ್ತಿಸದೆ ಬೇಜವಬ್ದಾರಿತನದಿಂದ ಮೆರೆದಿದ್ದಾರೆ.
ನೂರಾರು ಜನ ಓಡಾಡುವ ಈ ರಸ್ತೆಯಲ್ಲಿ ಜೂನ್‌ ೧೫ರ  ಮಧ್ಯಾಹ್ನ 3.15ರ ವೇಳೆಗೆ ಮರಬಿದ್ದು 3ಲೈಟ್ ಕಂಬಗಳು ನೆಲಕ್ಕೆ ಉರುಳಿದ್ದು, 2ಲೈಟ್ ಕಂಬಗಳು ನೇತಾಡುತ್ತಿವೆ. ಇಷ್ಟಾದರೂ ಕೆ.ಇ.ಬಿ.ಯವರು ಸರಿಮಾಡಲು 3ದಿನಗಳ ಕಾಲ ಅವಕಾಶವಿದೆ ಎಂದು ಹೇಳುತ್ತಾರೆ ಎಂದು ಊರವರು ದೂರಿದ್ದಾರೆ .  3ದಿನಗಳಲ್ಲಿ ನೇತಾಡುವ ಕಂಬ ಯಾರ ಮೇಲೆ ಬೀಳಲಿದೆಯೋ ಎಂಬ ಆತಂಕದಲ್ಲೆ ಕಾಲಕಳೆಯುವ ಪರಿಸ್ಥಿತಿ ಬಂದಿದೆ.

LEAVE A REPLY

Please enter your comment!
Please enter your name here