"ಅನಾರೋಗ್ಯದಿಂದ ಬಳಲುತ್ತಿರುವ ಆಟೋ ಚಾಲಕ"

0
681

 
ಲೇಖನ: ರಂಜಿತ್ ಮಡಂತ್ಯಾರ
ಆತ ಆಟೋ ರಿಕ್ಷಾ ಚಾಲಕನಾಗಿ ಪುಂಜಾಲಕಟ್ಟೆ ಪೇಟೆಯಲ್ಲಿ ದುಡಿಯುತ್ತ, ತನ್ನ ಚಿಕ್ಕ ಕುಟುಂಬವನ್ನು ಇದೇ ಆಟೋ ರಿಕ್ಷಾದಲ್ಲಿ ದುಡಿದು ಸಾಗಿಸುತ್ತಿದ್ದ. ತಾನೂ ದುಡಿದು ತನ್ನ ಇಬ್ಬರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕು. ಸಮಾಜದಲ್ಲಿ ನನ್ನ ಮಕ್ಕಳು ಉತ್ತಮ ವ್ಯಕ್ತಿಗಳಾಗಿ ಬೆಳೆಯಬೇಕು ಎಂದೆಲ್ಲಾ ಕನಸು ಕಂಡಿದ್ದ, ಆದರೆ ಇದೀಗ ಆತ ಕುಟುಂಬ ಸಾಗಿಸುವುದೇ ಕಷ್ಟಕರವಾಗಿದೆ. ಆತನ ಆ ಚಿಕ್ಕ ಕುಟುಂಬದ ಈಗೀನ ಸ್ಥಿತಿ ಗತಿ ನೋಡಿದರೆ ಮನಕಲಕುವಂತಿದೆ.
 
 
 
ಆತ ಉದ್ಯೋಗದಲ್ಲಿ ಆಟೋ ರಿಕ್ಷಾ ಚಾಲಕ, ತನ್ನ ರಿಕ್ಷಾ ಚಾಲಕ ವೃತ್ತಿಯಲ್ಲಿಯೇ ತನ್ನ ಚಿಕ್ಕ ಕುಟುಂಬವನ್ನು ಸಾಗಿಸುತ್ತಿದ್ದ. ಹೆಂಡತಿ ತನ್ನ ಮನೆಯ ಕೆಲಸ ಕಾರ್ಯಗಳನ್ನು ಮಾಡುತ್ತ ಇಬ್ಬರು ಚಿಕ್ಕ ಮಕ್ಕಳೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಮಾಲಾಡಿ ಗ್ರಾಮದ ಪುರಿಯ ಎಂಬಲ್ಲಿ ವಾಸಿಸುತ್ತಿದ್ದಾರೆ. ತನ್ನ ಇಬ್ಬರು ಮಕ್ಕಳ ಬಗ್ಗೆಯು ಪೋಷಕರು ಅನೇಕ ಕನಸುಗಳು ಕಂಡಿದ್ದರು.
 
 
 
ಇದೇ ಸಮಯದಲ್ಲಿ ಇವರ ಈ ಚಿಕ್ಕ ಕುಟುಂಬದ ಯಾಜಮಾನನಾಗಿದ್ದ ಆಟೋ ಚಾಲಕ ಪ್ರಶಾಂತ್ ಗೆ ನಿಮೋನಿಯ ಕಾಯಿಲೆಯೊಂದು ತನ್ನ ದೇಹವನ್ನು ಪೀಡಿಸತೊಡಗಿತ್ತು, ಅಂದಿನಿಂದ ಇಂದಿನವರೆಗೂ ಈ ಕಾಯಿಲೆಯಿಂದಾಗಿ ಪ್ರಶಾಂತ್ನಿಗೆ ಮುಕ್ತಿಯೇ ಇಲ್ಲ, ದುಡಿಯಾಲಾಗದೇ ಜೀವನ ಸಾಗಿಸುವುದೇ ಬಹಳ ಕಷ್ಟವಾಗಿದೆ. ಇಬ್ಬರೂ ಸಣ್ಣ ಮಕ್ಕಳು, ಆ ಬಡಕುಟುಂಬದ ಆ ಮನೆಗೆ ಹೋದರೆ ಏನು ತಿಳಿಯಾದ ಆ ಮಕ್ಕಳು ಹಾಸಿಗೆ ಹಿಡಿದ ತಂದೆಯ ಜೊತೆಗಿನ ಮಕ್ಕಳ ಒಡನಾಟ ನೋಡಿದಾಗ ಕಣ್ಣು ತುಂಬಾ ನೀರು ಬರತೋಡಗುತ್ತದೆ.
 
 
 
ಈ ಬಡ ಕುಟುಂಬದ ಸ್ಥಿತಿ ಗತಿಯ ಬಗ್ಗೆ ಮಕ್ಕಳ ಬಗ್ಗೆ ತಿಳಿದ ಒಂದಿಷ್ಟು ರಿಕ್ಷಾ ಚಾಲಕರು ಊರಿನ ಗ್ರಾಮಸ್ಥರು ದಿನನಿತ್ಯದ ಜೀವನಕ್ಕೆ ಬೇಕಾಗುವ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾಗುವ ವಸ್ತುಗಳನ್ನು ಹಾಗೂ ಧನಸಹಾಯವನ್ನು ಮಾಡುತ್ತಿದ್ದಾರೆ. ತನ್ನ ಕೆಲಸ ಆಯಿತ್ತು, ತನ್ನ ಮನೆಯಾಯಿತ್ತು, ಎಂದು ತನ್ನ ಚಿಕ್ಕ ಕುಟುಂಬವನ್ನು ಬಹಳ ಶ್ರಮಪಟ್ಟು ದುಡಿದು ತಂದು ಜೀವನ ಸಾಗಿಸುತ್ತಿದ್ದ ಪ್ರಶಾಂತ್ ಹಾಸಿಗೆ ಹಿಡಿದಿದ್ದಾರೆ.
 
 
ಇನ್ನು ಇವರ ಮನೆಯವರ ಸ್ಥಿತಿ ಏನು..? ಎನ್ನುವುದು ಗ್ರಾಮಸ್ಥರ ಪ್ರಶ್ನೆಯಾಗಿದೇ ಇದೀಗ ಪ್ರಶಾಂತ್ನಿಗೆ ವೈದ್ಯರು ಹೆಚ್ಚಿನ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಬೇಕು ಎಂದು ಹೇಳಿದ ಹಿನ್ನಲೆಯಲ್ಲಿ ಇದೀಗ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಹಣದ ಸಮಸ್ಯೆ ಎದುರಾಗಿದೆ. ಇನ್ನಾದರೂ ಸ್ಥಳೀಯ ಜನಪ್ರತಿನಿಧಿಗಳಾಗಲಿ, ಸಂಘಟನೆಗಳಾಗಲಿ ಮುಂದೆ ಬಂದು ಈ ಬಡಕುಟುಂಬದ ನೆರವಿಗೆ ಬರಬೇಕಾಗಿದೆ, ಎಂಬುದು ಸಾರ್ವಜನಿಕರ ಆಶಯ.
 
 
ಖಾತೆ ಸಂಖ್ಯೆ : 31294219731
ಖಾತೆದಾರರ ಹೆಸರು : ಸುವಾಶಿನಿ (ಪ್ರಶಾಂತ್ ಹೆಂಡತಿ)
ಐ.ಎಫ್.ಎಸ್.ಸಿ. : ಎಸ್.ಬಿ.ಐ.ಎನ್.0003356
ಬ್ಯಾಂಕ್ ಹೆಸರು : ಭಾರತೀಯ ಸ್ಟೇಟ್ ಬ್ಯಾಂಕ್.
ಶಾಖೆಯ ಹೆಸರು : ಬೆಳ್ತಂಗಡಿ.

LEAVE A REPLY

Please enter your comment!
Please enter your name here