ಅನಾರೋಗ್ಯದಿಂದ ಬಳಲುತ್ತಿರುವ ಶ್ರೀ

0
422

 
ನಮ್ಮ ಪ್ರತಿನಿಧಿ ವರದಿ
ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಗೆ ಅನಾರೋಗ್ಯ ಕಾಣಿಸಿಕೊಂಡಿದೆ. ತುಮಕೂರು ಸಿದ್ದಗಂಗಾ ಮಠದ ಶ್ರೀಗಳು ಆಯಾಸದಿಂದ ಬಳಲುತ್ತಿದ್ದಾರೆ. ಶಿವಕುಮಾರ ಶ್ರೀಗಳಿಗೆ 109 ವರ್ಷ ವಯೋಮಾನದಲ್ಲಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಶಿವಕುಮಾರ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
 
 
 
ಶ್ರೀಗಳು ಜ್ವರದಿಂದ ಬಳಲುತ್ತಿದ್ದು, ಸಿದ್ದಗಂಗಾ ಮಠದ ವಿಶೇಷ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಯಾವುದೇ ಗಂಭೀರ ಸಮಸ್ಯೆಯಿಲ್ಲ. ಇಂದು ಸಂಜೆ ಅಥವಾ ನಾಳೆಯೊಳಗೆ ಗುಣಮುಖರಾಗಿತ್ತಾರೆ ಎಂದು ಶ್ರೀಗಳನ್ನು ನೋಡಿ ಬಂದ ಬಿಜಿಸಿ ಗ್ಲೋಬಲ್ ಆಸ್ಪತ್ರೆ ಉಪಾಧ್ಯಕ್ಷ ಡಾ ಎನ್ ಕೆ ವೆಂಕಟರಮಣ ಅವರು ಸ್ಪಷ್ಟಪಡಿಸಿದ್ದಾರೆ.
 
ಶ್ರೀಗಳಿಗೆ ಶೀತ-ಜ್ವರವಿದ್ದ ಕಾರಣ ಕಫ ಹೆಚ್ಚಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ಕರೆತರಲಾಗಿದೆ.

LEAVE A REPLY

Please enter your comment!
Please enter your name here