ಅನಾನಸ್ ಸಾಸಿವೆ

0
183

ಸುಮತಿ ಕೆ.ಸಿ.ಭಟ್. ಆದೂರು
ಬೇಕಾಗುವ ಸಾಮಾಗ್ರಿ:
ಅನಾನಸ್ ಹಣ್ಣು 1/2, ತೆಂಗಿನತುರಿ ಒಂದೂವರೆ ಕಪ್, ಸಾಸಿವೆ 1 ಚಮಚ, ಒಣಮೆಣಸು 2, ಬೆಲ್ಲ ನೆಲ್ಲಿಕಾಯಿ ಗಾತ್ರ, ಉಪ್ಪು.
 
 
ತಯಾರಿಸುವ ವಿಧಾನ:
ಸಿಪ್ಪೆ ತೆಗೆದ ಅನಾನಸನ್ನು ಹೆಚ್ಚಿಟ್ಟುಕೊಳ್ಳಿ. ತೆಂಗಿನತುರಿಗೆ ಮೆಣಸು ಹಾಕಿ ರುಬ್ಬಿ. ಸಣ್ಣಗಾಗುತ್ತ ಬರುತ್ತಿದ್ದಂತೆ ಹೆಚ್ಚಿಟ್ಟ ಹೋಳು ಹಾಗೂ ಸಾಸಿವೆಯನ್ನು ಹಾಕಿ ನುಣ್ಣಗೆ ರುಬ್ಬಿ. ಉಪ್ಪು ಹಾಕಿ. ತುಸುವೇ ನೀರು ಹಾಕಿ. ಇದು ತುಪ್ಪದ ಅನ್ನದೊಂದಿಗೆ ರುಚಿಯಾಗಿರುತ್ತದೆ.

LEAVE A REPLY

Please enter your comment!
Please enter your name here