ಅನಾನಸ್ ಪಲ್ಯ

0
323

ಸುಮತಿ ಕೆ.ಸಿ.ಭಟ್ ಆದೂರು
ಬೇಕಾಗುವ ಸಾಮಾಗ್ರಿ:
ಬಲಿತ ಅನಾನಸ್ 1/2, ಉಪ್ಪು, ಒಣಮೆಣಸು 3, ಬೆಲ್ಲ ನೆಲ್ಲಿಕಾಯಿ ಗಾತ್ರ, ಬೆಳ್ಳುಳ್ಳಿ 4 ಎಸಳು, ಚಿಟಿಕೆ ಅರಸಿನಪುಡಿ, ತೆಂಗಿನ ತುರಿ 1/2 ಕಪ್ಪು, ವಗ್ಗರಣೆ ವಸ್ತು.
 
ತಯಾರಿಸುವ ವಿಧಾನ:
ಸಿಪ್ಪೆ ತೆಗೆದ ಅನಾನಸನ್ನು ಸಣ್ಣಗೆ ಹೆಚ್ಚಿ. ಬಾಣಲೆಯಲ್ಲಿ ಉದ್ದಿನ ಬೇಳೆ ಸಹಿತ ವಗ್ಗರಣೆಗಿಡಿ. ಸಾಸಿವೆ ಸಿಡಿದೊಡನೆ ಕರಿಬೇವು ಹಾಕಿ, ಹೆಚ್ಚಿಟ್ಟ ಹೋಳನ್ನು ಹಾಕಿ ಅದಕ್ಕೆ ಉಪ್ಪು, ಬೆಲ್ಲ, ಅರಸಿನ ಪುಡಿ ಹಾಕಿ ತುಸುವೇ ನೀರು ಹಾಕಿ ಮುಚ್ಚಿಡಿ. ಬೆಳ್ಳುಳ್ಳಿಯನ್ನು ಹುರಿದು ತೆಂಗಿನ ತುರಿ ಹಾಗೂ ಮೆಣಸಿನೊಂದಿಗೆ ನೀರು ಹಾಕದೆ ತರತರಿಯಾಗಿ ರುಬ್ಬಿ ಒಲೆ ಮೇಲಿಟ್ಟ ಹೋಳಿಗೆ ಹಾಕಿ ಒಂದೆರಡು ಸಲ ಮಗುಚಿ. ನೀರಾರಿದ ನಂತರ ಕೆಳಗಿಳಿಸಿ, ಗಂಜಿಯೊಂದಿಗೆ ಉಣ್ಣಲು ರುಚಿಯಾಗಿರುತ್ತದೆ.

LEAVE A REPLY

Please enter your comment!
Please enter your name here