ಅನಾನಸು ಕೇಸರಿ ಬಾತ್

0
271

ನವರಾತ್ರಿ ಸೆಷ್ಪಲ್
ಬೇಕಾಗುವ ಸಾಮಗ್ರಿಗಳು
ಅನಾಸಿನ ಪ್ಯೂರಿ 1 ಕಪ್, ಬೆಣ್ಣೆ- 1 ಚಮಚ, ಸಕ್ಕರೆ- 1 ಚಮಚ, ಕೊಬ್ಬು ಕಡಿಮೆಯಿರುವ ಹಾಲು-1 ಕಪ್, ರವೆ-1 ಕಪ್ ಸಕ್ಕರೆ ಪರ್ಯಾಯ-3 ಚಮಚ ಏಲಕ್ಕಿ ಹುಡಿ-½ ಚಮಚ ಕೇಸರಿ-ಕೆಲವು ಎಸಲು.
 
 
ತಯಾರಿಸುವ ವಿಧಾನ:
ತಳ ಆಳವಿರುವ ತವಾ ತೆಗೆದುಕೊಂಡು ಅದಕ್ಕೆ ಅನಾನಸು ಪ್ಯೂರಿಯನ್ನು ಹಾಕಿಕೊಳ್ಳಿ. ಅದಕ್ಕೆ ಸಕ್ಕರೆ ಸೇರಿಸಿ. ಇನ್ನು ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು 3-4 ನಿಮಿಷ ಕಾಲ ಕುದಿಸಿ. 3. ಈಗ ಇನ್ನೊಂದು ತವಾ ತೆಗೆದುಕೊಂಡು ಅದರಲ್ಲಿ ರವೆಯನ್ನು ಬೆಣ್ಣೆಯೊಂದಿಗೆ ಬಿಸಿ ಮಾಡಿ. ರವೆ ಗುಲಾಬಿ ಬಣ್ಣಕ್ಕೆ ಬರಲಿ. ಇದಕ್ಕೆ ಸಮಯ ಬೇಕಾಗುತ್ತದೆ. ತಾಳ್ಮೆಯಿರಲಿ. ಈಗ ರವೆಗೆ ಕಡಿಮೆ ಕೊಬ್ಬು ಇರುವ ಹಾಲನ್ನು ಹಾಕಿ. ತಕ್ಷಣ ಇದಕ್ಕೆ ಸ್ವಲ್ಪ ನೀರನ್ನು ಹಾಕಿಕೊಂಡು ಸರಿಯಾಗಿ ಕಲಸಿ. ಇಲ್ಲವಾದರೆ ರವೆ ಗಟ್ಟಿಯಾಗುತ್ತದೆ. 5.ಕೆಲವು ನಿಮಿಷ ತಿರುಗಿಸುತ್ತಾ ಇರಬೇಕಾಗುತ್ತದೆ. ಇದು ದಪ್ಪಗೆ ಆದಾಗ ಸಕ್ಕರೆ ಬದಲಿಯನ್ನು ಹಾಕಿ. ಇದು ಸರಿಯಾಗಿ ಮಿಶ್ರಣವಾಗುವ ತನಕ ತಿರುಗಿಸಿ. ಈಗ ಇದಕ್ಕೆ ಅನಾನಸು ಪ್ಯೂರಿಯನ್ನು ಹಾಕಿಕೊಳ್ಳಿ. ಮಧ್ಯಮ ಬೆಂಕಿಯೊಂದಿಗೆ ಇದನ್ನು ಕುದಿಸಿ. ಈಗ ಕೇಸರಿ ಹಾಕಿದ ಹಾಲನ್ನು ಇದಕ್ಕೆ ಸೇರಿಸಿ. ಏಲಕ್ಕಿ ಹುಡಿಯನ್ನು ಮಿಶ್ರಣಕ್ಕೆ ಹಾಕಿ. ಸರಿಯಾಗಿ ಮಿಶ್ರಣವಾದ ಬಳಿಕ 1-2 ನಿಮಿಷ ಬೇಯಲು ಬಿಡಿ.ಈಗ ಅನಾನಸು ಕೇಸರಿಬಾತ್ ತಯಾರಾಗಿದೆ. ಇದನ್ನು ಗಾಜಿನ ಪಿಂಗಾಣಿಗೆ ಹಾಕಿಡಿ. ಅದನ್ನು ಪ್ಲೇಟ್‌ನಿಂದ ಮುಚ್ಚಿಡಿ ಮತ್ತು ಪಿಂಗಾಣಿಯನ್ನು ತಿರುಗಿಸಿ. ಈಗ ನಿಧಾನವಾಗಿ ಪಿಂಗಾಣಿಯನ್ನು ತೆಗೆಯಿರಿ. ಫಮಫಮಿಸುವ ಕೇಸರಿಬಾತ್ ರೆಡಿ! ಇನ್ನು ಬಾದಾಮಿ, ಗೋಡಂಬಿ ಮತ್ತು ದ್ರಾಕ್ಷಿಯನ್ನು ಹಾಕಿ ಇದನ್ನು ಅಲಂಕರಿಸಬಹುದು.

LEAVE A REPLY

Please enter your comment!
Please enter your name here