ಅನಾನಸಿನ ಮೆಣಸ್ ಕಾಯಿ

0
409

ಸುಮತಿ ಕೆ.ಸಿ.ಭಟ್. ಆದೂರು
ಬೇಕಾಗುವ ಸಾಮಾಗ್ರಿ:
ಚೆನ್ನಾಗಿ ಬಲಿತ ಅನಾನಸ್ 1. ತೆಂಗಿನತುರಿ ಒಂದೂವರೆ ಕಪ್, ಎಳ್ಳು 4 ಚಮಚ, ಉದ್ದಿನ ಬೇಳೆ 3 ಚಮಚ, ಒಣಮೆಣಸು 10, ಬೆಲ್ಲ ಲಿಂಬೇಗಾತ್ರ, ಉಪ್ಪು, ವಗ್ಗರಣೆ ವಸ್ತು, ಚಿಟಿಕೆ ಅರಸಿನ ಪುಡಿ.
 
ತಯಾರಿಸುವ ವಿಧಾನ:
ಅನಾನಸನ್ನು ಸಿಪ್ಪೆ ತೆಗೆದು, ಸಣ್ಣ ಹೋಳಾಗಿ ಹೆಚ್ಚಿರಿ. ಉಪ್ಪು, ಬೆಲ್ಲ, ಅರಸಿನ ಪುಡಿ, ಸ್ವಲ್ಪ ನೀರು ಹಾಕಿ ಬೇಯಲಿಕ್ಕೆ ಇಡಿ. ತೆಂಗಿನ ತುರಿಯನ್ನು ಹಳದಿಬಣ್ಣ ಬರುವವರೆಗೆ ಹುರಿಯಿರಿ. ಮೆಣಸು, ಉದ್ದಿನಬೇಳೆ, ಎಳ್ಳನ್ನು ಒಟ್ಟಿಗೇ ಹುರಿಯಿರಿ. ಹುರಿದಿಟ್ಟ ಸಾಮಾಗ್ರಿಗಳನ್ನು ನುಣ್ಣಗೆ ರುಬ್ಬಿ ಬೆಂದ ಹೋಳಿಗೆ ಹಾಕಿ. ಸ್ವಲ್ಪವೇ ನೀರು ಹಾಕಿ ಚೆನ್ನಾಗಿ ಕುದಿಸಿ. ವಗ್ಗರಣೆ ಕೊಡಿ. ಈ ಮೆಣಸ್ಕಾಯಿ ಇಡ್ಲಿ, ದೋಸೆಯೊಂದಿಗೆ ನೆಂಚಿಕೊಳ್ಳಲು ಸೊಗಸಾಗಿರುತ್ತದೆ.

LEAVE A REPLY

Please enter your comment!
Please enter your name here