ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದ ಶ್ರೀನಿವಾಸ್

0
399

ಬೆಂಗಳೂರು ಪ್ರತಿನಿಧಿ ವರದಿ
ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಶ್ರೀನಿವಾಸ್ ಪ್ರಸಾದ್ ಅವರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬೆಂಗಳೂರಿನ ಬಿಜೆಪಿ ಪಕ್ಷದ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಸಮ್ಮುಖದಲ್ಲಿ ಶ್ರೀನಿವಾಸ್ ಪ್ರದಾಸ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
 
 
ನನ್ನನ್ನು ಸಚಿವನಾಗಿ ಮಾಡಿ ಎಂದು ಸಿಎಂ ಬಳಿ ಕೇಳಿರಲಿಲ್ಲ. ಸಿಎಂ ಭಯದಿಂದ ನನ್ನ ಮನೆ ಬಾಗಿಲಿಗೆ ಬಂದಿದ್ದರು. ನಮ್ಮ ಜಾತಿಗೆ ಬ್ರಾಂಡ್ ಆಗಿಬಿಡುವ ಭಯದಿಂದ ಬಂದಿದ್ದರು. ಅಹಿಂದ ಗುಂಪಿಗೆ ನನ್ನನ್ನು ಸೇರಿಸಿಕೊಳ್ಳಲು ಬೇಡಿಕೊಂಡಿದ್ದರು. ನನಗೆ ರಾಜಕಾರಣ ಸಾಕಪ್ಪ ಎಂದು ನಾನೇ ಹೇಳಿಕೊಂಡಿದ್ದೆ. ಇನ್ನೆರಡು ವರ್ಷ ಮಾತ್ರ ರಾಜಕೀಯದಲ್ಲಿ ಇರುವೆ ಎಂದಿದ್ದೆ. ಆದರೂ ಸಿಎಂ ಸಿದ್ದರಾಮಯ್ಯ ನನ್ನನ್ನಯ ಸಚಿವ ಸ್ಥಾನದಿಂದ ತೆಗೆದಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಅಸೂಯೆಬುದ್ಧಿ ಎಂದು ಮಾಜಿ ಸಚಿವ ಶ್ರೀನಿವಾಸಪ್ರಸಾದ್ ಬಿಜೆಪಿಗೆ ಸೇರ್ಪಡೆಯಾದ ಬಳಿಕ ಹೇಳಿದ್ದಾರೆ.

LEAVE A REPLY

Please enter your comment!
Please enter your name here