ಅಧಿಕಾರ ಸ್ವೀಕಾರ

0
317

ಮಂಗಳೂರು ಪ್ರತಿನಿಧಿ ವರದಿ
ಕರ್ನಾಟಕ ಸರ್ಕಾರದ ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನಾ ಇಲಾಖೆಯ ಪ್ರಧಾನ ನಿರ್ದೇಶಕರಾಗಿ ಕೆ. ನಂದಕುಮಾರ್ ಬುಧವಾರ ಬೆಂಗಳೂರಿನಲ್ಲಿ ಅಧಿಕಾರ ಸ್ವೀಕರಿಸಿದರು.
ಇತ್ತೀಚೆಗೆ ಸೈಯದ್ ಅಬ್ದುಲ್ ರಝ್ವಿ ಅವರ ನಿವೃತ್ತಿಯಿಂದ ತೆರವಾಗಿದ್ದ ಸ್ಥಾನಕ್ಕೆ ಹಣಕಾಸು ಇಲಾಖೆಯ ಉಪ ಕಾರ್ಯದರ್ಶಿಯಾಗಿದ್ದ ಕೆ. ನಂದಕುಮಾರ್ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇವರು ಮೂಲತ: ದಕ್ಷಿಣ ಕನ್ನಡ ಜಿಲ್ಲೆಯವರು.
 
 
 
ಕೆಡಿಪಿ ಸಮಿತಿಗೆ ನಾಲ್ವರ ನಾಮನಿದೇ೯ಶನ
ಕನಾ೯ಟಕ ಅಭಿವೃದ್ಧಿ ಕಾಯ೯ಕ್ರಮಗಳ(ಕೆಡಿಪಿ) ದ.ಕ.ಜಿಲ್ಲಾ ಮಟ್ಟದ ತ್ರೈಮಾಸಿಕ ಪರಿಶೀಲನಾ ಸಮಿತಿಗೆ ನಾಲ್ವರು ಸದಸ್ಯರನ್ನು ನಾಮನಿರ್ದೇಶನ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಪದ್ಮನಾಭ ನರಿಂಗಾಣ, ಹಾಜಿ ಜೆ.ಮುಹಮ್ಮದ್ ಜೋಕಟ್ಟೆ, ಶ್ರೀನಿವಾಸ ಕಿಣಿ ಬೆಳ್ತಂಗಡಿ ಹಾಗೂ ಜಯಂತಿ ಪೂಜಾರಿ ಅನಂತಾಡಿ ಇವರನ್ನು ಕೆಡಿಪಿಗೆ ನಾಮನಿದೇ೯ಶನ ಮಾಡಲಾಗಿದೆ

LEAVE A REPLY

Please enter your comment!
Please enter your name here