"ಅದ್ಭುತ ಪ್ರತಿಭೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಧೃತಿ ಮುಡೋಂಡಿ"

0
469

 
ಮನಸ್ಸಿದ್ದರೆ ಮಾರ್ಗ ಎಂಬಂತೆ ಸಾಧಿಸುವ ಹಂಬಲದ ಜೋತೆ ಹೆತ್ತವರ ಪ್ರೋತ್ಸಾಹ ಇವೆಲ್ಲವನ್ನು ಮೈಗೊಡಿಸಿಕೊಂಡು ನಾನಾ ಕ್ಷೇತ್ರದಲ್ಲಿ ಮಿಂಚುತ್ತಿರು ಬಾಲ ವಿಜ್ಞಾನಿ ಧೃತಿ.
 
 
ಸುಳ್ಯ ತಾಲೂಕು ನಾಲ್ಕೂರು ಗ್ರಾಮದ ಕೃಷಿಕ ಮಣಿ ಮುಂಡೋಡಿ ಹಾಗೂ ಪೂರ್ಣಿಮ ಮುಂಡೋಡಿ ದಂಪತಿಗಳ ಪುತ್ರಿ ಧೃತಿ ಮುಂಡೋಡಿ ಎಳವೆಯಿಂದಲೇ ಸ್ನೇಹಮಯಿ ಸ್ವಭಾವ ಮತ್ತು ಪ್ರಬುದ್ದ ಮನೋಭಾವದವಳು.
 
 
ಧೃತಿಯನ್ನು ಈಕೆಯ ಹೆತ್ತವರು ಮೂರುವರೆ ವರ್ಷ ಪ್ರಾಯವಾದಂತೆ ಗುತ್ತಿಗಾರಿನ ಬ್ಲೆಸ್ಡ್ ಕುರಿಯಕೋಸ್ ಆಂಗ್ಲಮಾದ್ಯಮ ಶಾಲೆಗೆ ಕರೆ ತಂದು ಎಲ್.ಕೆ.ಜಿ.ಗೆ ಸೇರಿದ್ದಾರತ್ತೆ. ಅಲ್ಲಿ ಕೈಯಲಿಷ್ಟು ಚಾಕ್ ಲೇಟ್ ಕೊಟ್ಟಿದೆ ತಡ ಉಳಿದ ಮಕ್ಕಳನ್ನು ಅನಸರಿಸುತ್ತಾ ಕ್ಲಾಸ್ ನ ಕಡೆ ನಡೆಯುತ್ತಾ ತಂದೆಯಾ ಕಡೆಗೆ ನೋಡಿ ಟಾಟಾ ಮಾಡಿದಳತ್ತೆ.ಮಧ್ಯಾಹ್ನ ಕ್ಲಾಸ್ ಮುಗಿಸಿ ಮನೆಗೆ ಬಂದವಳೇ ಎನು ಡ್ಯಾಡಿ ಆ ಮಕ್ಕಳೊ ಬರೀ ಕೂಗೊದೇ ಕೆಲಸ ನನ್ನಲ್ಲಿದ ಚಾಕ್ ಲೇಟ್ ಎಲ್ಲಾ ಅವರಿಗೆ ಕೊಟ್ಟು ಸಮಾಧಾನಿಸುವಲ್ಲಿ ನಾನೇ ಸುಸ್ತಾದೆ ಎಂದು ಭಾರಿದೊಡ್ಡ ಜವಾಬ್ದಾರಿ ನಿಭಾಯಿಸಿ ಬಂದವಳಂತೆ ನಿಟ್ಟಿಸುರು ಬಿಟ್ಟಾಗ ಅವಳ ತಂದೆ ತಾಯಿ ಗೆ ಆಶ್ಚರ್ಯ, ಮತ್ತೆಂದು ತಿರುಗಿ ನೋಡಿದವಳಲ್ಲ.
 
 
 
ಧೃತಿ ತನ್ನ 5ನೇ ವರ್ಷ ಪ್ರಾಯ ದಲ್ಲಿ ಯು.ಕೆ.ಜಿ ಯಲ್ಲಿದ್ದಾಗ ಎಲ್ಲರನ್ನು ನಿಬ್ಬೆರಗು ಗೊಳಿಸುವಂತೆ ವಿಜ್ಞಾನ ಪ್ರತಿಭಾ ಸ್ವರ್ಧೆಯಲ್ಲಿ ರಾಷ್ಟ್ರ ಪ್ರಶಸ್ತಿ ಯನ್ನು ತನ್ನ ಶಾಲೆ ಹಾಗೂ ಊರಿಗೆ ಅತಿ ಕಿರಿಯ ವಯಸ್ಸಿನಲ್ಲಿ ತಂದು ಕೊಟ್ಟ ಹಿರಿಮೆ ಹಾಗೂ ಹೆಗ್ಗಳಿಕೆ ಧೃತಿ ಮುಂಡೋಡಿಯದ್ದು.ಅದಾಗಲೇ ಕ್ಲಾಸಿನ ದಿನಚರಿಯನ್ನು ಚಾಚೂ ತಪ್ಪದೆ ಶಿಸ್ತಿನೀಂದ ಯಾರ ಸಹಾಯ ಅಪೇಕ್ಷಿಸದೆ ಆಕೆಯೇ ನಿಭಾಯಿಸುತ್ತಿದಳತ್ತೆ. ಕ್ಲಾಸ್ ಲ್ಲಿ ಆಗ್ರ ಸ್ಥಾನವನ್ನು ಕಾಪಡುತ್ತಾ ಗುರುಗಳ ಸ್ನೇಹಿಯಾಗಿ ತುಂಬಾ ಚುರುಕು ಚಟುವಟಿಕೆಯಿಂದ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಂಡು ಎಲ್ಲರಿಗೂ ಆತ್ಮೀಯಳಾದಳು.
 
 
 
ಈಕೆ ಎಲ್.ಕೆ.ಜಿ ಇಂದ 4 ನೇ ತರಗತಿಯವರೆಗೆ ಗತ್ತಿಗಾರಿನಲ್ಲಿ ನಡೆಯುವ ಕೃಷ್ಣ ವೇಷ ಸ್ವರ್ಧೆಯಲ್ಲಿ ನಿರಂತರ 6 ವರ್ಷ ಪ್ರಥಮ ಸ್ಥಾನಿಯಾಗುತ್ತಾ ಮುಂದೆ ಯಾವುದೆ ವಿಷಯದ ಸ್ವರ್ಧೆಯಲ್ಲಿ ಭಾಗವಹಿಸಿದರೆ ಜಯ ತನ್ನದಾಗಿಸಿಕೊಳ್ಳುವುದನ್ನು ಕರಗತ ಮಾಡಿಕೊಂಡಿದ್ದಾಳೆ.
 
 
ಪ್ರಶಸ್ತಿಗಳ ವಿವರ:
* 2005 ರ ಸಾಲಿನ ವಿಜ್ಞಾನ ಪ್ರತಿಭಾ ಸ್ವರ್ಧೆಯಲ್ಲಿ ರಾಷ್ಟ್ರ ಪ್ರಶಸ್ತಿ
2008 ಮತ್ತು 2010 ರಲ್ಲಿ ಕರಾಟೆಯಲ್ಲಿ ಕೂಡ 2 ಬಾರೀ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದಿರುತ್ತಾಳೆ.
*2015 ನ.14 ರಂದು ಮಕ್ಕಳದಿನಾಚರಣೆ ಯಂದು ರಾಜ್ಯ ಸರಕಾರದಿಂದ ಬೆಂಗಳೂರಿನಲ್ಲಿ ರಾಜ್ಯ ಪಾಲ ವಾಜೂಬಾಯಿ ವಾಲಾ ಅವರಿಂದ ರಾಜ್ಯ ಮಟ್ಟದ ಅಸಾಧಾರಣ ಪ್ರತಿಭಾ ಪುರಸ್ಕಾರ.
*2016 ರ ಎಪ್ರಿಲ್ ನಲ್ಲಿ ಭಾರತ ದೇಶ ದಿಂದ ಆಯ್ಕೆಗೊಂಡು ಜಪಾನ್ ದೇಶದ ಟೋಕಿಯೋದಲ್ಲಿ ನಡೆದ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳದಲ್ಲಿ ಬಾಗವಹಿಸಿದ ಈಕೆ ಜಪಾನ್ ನ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಟೋಕಿಯೋದ ಸದಸ್ಯತ್ವವನ್ನು ಪಡೆದಿರುವುದು ಹೆಮ್ಮೆಯ ವಿಚಾರ.
*2016 ನ.14 ರಂದು ದೆಹಲಿ ಯಲ್ಲಿ ರಾಷ್ಟ್ರ ಪತಿ ಭವನ ದಲ್ಲಿ ನಡೆದ ಮಕ್ಕಳ ದಿನಾಚರಣೆಯಂದು ರಾಷ್ಟ್ರ ಪತಿ ಪ್ರಣಬ್ ಮುಖರ್ಜಿಯವರಿಂದ ರಜತ ಪದಕ ,ಪ್ರಶಸ್ತಿ ಹಾಗೂ ನಗದನ್ನು ಸ್ವಿಕರಿಸಿದ್ದು ಗಮಾನಾರ್ಹ ಸಾಧನೆ.
ಇನ್ನು ಬಹುಮುಖ ಪ್ರತಿಭೆ ಯಾಗಿದ್ದು ನೂರಾರು ಪ್ರಶಸ್ತಿ ಗಳನ್ನು ತನ್ನು ಮುಡಿಗೇರಿಸಿಕೊಂಡಿದ್ದಾಳೆ. ಈಕೆ ಈಗ ಮಂಗಳೂರಿನ ಸೈಂಟ್ ಆಗ್ನೇಸ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ ವ್ಯಾಸಂಗ ಮಾಡುತ್ತಿದ್ದಾಳೆ.
ಈಕೆಯ ಈ ಎಲ್ಲಾ ಸಾಧನೆ ಈಕೆಯ ಜೀವನಕ್ಕೆ ದಾರಿದೀಪವಾಗಿ ನಮ್ಮ ಕರಾವಳಿಗೆ ಇನ್ನು ಹೆಸರು ತಂದುಕೊಡಲಿ ಎನ್ನುವದು ನಮ್ಮಲ್ಲರ ಹಾರೈಕೆ..
-ಸುದೇಶ್ ಜೈನ್ ಮಕ್ಕಿಮನೆ

LEAVE A REPLY

Please enter your comment!
Please enter your name here