ಮೈಸೂರು ಪ್ರತಿನಿಧಿ ವರದಿ
ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ಯಶಸ್ವಿಯಾಗಿ ನಿನ್ನೆ ನಡೆದಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2016 ನ್ನು ಜನರು ಕಣ್ತುಂಬಿಕೊಂಡಿದ್ದಾರೆ. ಯಾವುದೇ ಅಡೆತಡೆ ಇಲ್ಲದೇ ಸುಸೂತ್ರವಾಗಿ ಮೈಸೂರು ದಸರಾ ಉತ್ಸವ ನಡೆದಿದೆ.
ತುಂತುರು ಮಳೆ ನಡುವೆಯೂ ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆ ಅದ್ದೂರಿಯಾಗಿ ನಡೆದಿದೆ. ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಂಬೂ ಸವಾರಿ ಮೆರವಣಿಗೆಗೆ ಅಧಿಕೃತ ಚಾಲನೆ ನೀಡಿದರು.
ಸತತ ಐದನೇ ಬಾರಿಗೆ ಅರ್ಜುನ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು ರಾಜ ಗಾಂಭೀರ್ಯದಿಂದ ಸಾಗುವುದನ್ನು ಸಾರ್ವಜನಿಕರು ನೋಡಿ ಕಣ್ತುಂಬಿಕೊಂಡಿದ್ದಾರೆ. ಅರಮನೆಯ ಬಲರಾಮ ದ್ವಾರದಿಂದ, ಚಾಮರಾಜೇಂದ್ರ ಸರ್ಕಲ್, ಕೆ.ಆರ್. ಸರ್ಕಲ್, ಸಯ್ಯಜಿರಾವ್ ರಸ್ತೆ, ಆಯಯರ್ವೇದ ಸರ್ಕಲ್, ಆರ್ ಎಂ ಸಿ ವೃತ್ತದ ಮೂಲಕ ಇನ್ನು ಕೆಲವೇ ನಿಮಿಷಗಳಲ್ಲಿ ಬನ್ನಿಮಂಟಪಕ್ಕೆ ಅಂಬಾರಿ ಸಾಗಿದೆ. ಅರ್ಜುನನ ಕುಮ್ಕಿ ಆನೆಗಳಾದ ಕಾವೇರಿ ಮತ್ತು ವಿಜಯ ಆನೆಗಳು ಸಾಥ್ ನೀಡುತ್ತಿವೆ.
ಇನ್ನೂ ಜಂಬೂಸವಾರಿ ಮೆರವಣಿಗೆಯಲ್ಲಿ ವೀರಗಾಸೆ, ಧ್ವಜಕುಣಿತ, ಪಟಕುಣಿತ, ಹಾಲಕ್ಕಿ ಕುಣಿತ, ನವಿಲು ನೃತ್ಯ ಸೇರಿದಂತೆ 60ಕ್ಕೂ ಹೆಚ್ಚು ವಿವಿಧ ಕಲಾ ಪ್ರಕಾರಗಳು ಹಾಗೂ 30 ಜಿಲ್ಲೆಗಳು, 8 ಇಲಾಖೆಗಳು, 4 ಬ್ಯಾಂಕ್ ಗಳ ವಿವಿಧ ಪ್ರಕರಾದ 42 ಸ್ತಬ್ಧಚಿತ್ರಗಳು ಭಾಗವಹಿಸಿ ಸಾರ್ವಜನಿಕರ ಮನಸೂರೆಗೊಂಡವು.