ಅಥ್ಲೀಟ್ ಗೆ ಝಿಕಾ ಶಂಕೆ

0
164

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಅಥ್ಲೀಟ್ ಸುಧಾಸಿಂಗ್ ಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಧಾಗೆ ಬೆಂಗಳೂರಿನ ನಾಗರಬಾವಿಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
 
 
ಉತ್ತರಪ್ರದೇಶ ಮೂಲದ ಸುಧಾ ಅವರಿಗೆ ರಿಯೋ ಒಲಿಂಪಿಕ್ಸ್ ವೇಳೆ ಆರೋಗ್ಯ ಕೈಕೊಟ್ಟಿತ್ತು. ಸೊಳ್ಳೆ ಕಡಿತದಿಂದ ಝಿಕಾ ವೈರಸ್ ತಗುಲಿರುವ ಬಗ್ಗೆ ಶಂಕೆಯಿದೆ. ನಿನ್ನೆ ಪುಣೆಗೆ ಸುಧಾಸಿಂಗ್ ರಕ್ಷಪರೀಕ್ಷೆಯ ವರದಿ ರವಾನೆಯಾಗಿದೆ. ಇಂದು ದೆಹಲಿ ತಜ್ಞ ವೈದ್ಯರ ತಂಡ ಆಸ್ಪತ್ರೆಗೆ ಬರಲಿದೆ.

LEAVE A REPLY

Please enter your comment!
Please enter your name here