ಅಂಕಣಗಳುಪ್ರಮುಖ ಸುದ್ದಿವಾರ್ತೆ

ಅಥಾ ಕಬೀರೋಪನ್ಯಾಸಂ

ಮಸೂರ ಅಂಕಣ: ಆರ್ ಎಂ ಶರ್ಮ
ಕಬೀರ ದಾಸ-ಶ್ರೀರಾಮಭಕ್ತ-ಕವಿ-ಬೋಧಕ-ಚಿಂತಕ-ಗುರುಜನ-ಮಾಗ೯ದಶ೯ಕ.
ಎಲ್ಲ ಸರಿ.
ಆದರೆ ಎಡವಟ್ಟಿಲ್ಲವೇ ಎಂದರೆ ಇದ್ದೇಇದೆ.
ಇದೇ ಶ್ರೀ ರಾಮಸತ್ಯ-ನಿತ್ಯ ಖಂಡಿತವಾಗಿಯೂ.
ಅದೇ ನಮ್ಮ ಈ ಬರಹದ ಆಂತಯ೯-ಐಶ್ವಯ೯-ಆಶ್ಚಯ೯ಪಡಬೇಡಿ.
ಓದಿರಿ-ಚಚಿ೯ಸಿರಿ-ಮನಗಾಣಿರಿ.
ಅದೇಕಬೀರೋಪನ್ಯಾಸ-ಕಬೀರೋಪಾಖ್ಯಾನ ಅಷ್ಟೇ.
ಈ ಪ್ರಸ್ತುತಿಗೆ ಮೂಲಕಾರಣ ನಾವುಕೇಳಿಸಿಕೊಂಡ ಒಂದು ಮಂಗಳೂರು ಆಕಾಶವಾಣಿಯ ಹಿಂದಿ ಪಾಠದ ಕಾಯ೯ಕ್ರಮ.
ನಡೆಯಿಸಿಕೊಟ್ಟ ಸಂಪನ್ಮೂಲ ಜನ ಉನ್ನತ ವ್ಯಾಸಂಗ ಮಾಡಿ ಡಾಕ್ಟರೇಟ್ ಪದವಿ ಪಡೆದ ಜನ.
ಅವರು ಶ್ರೀಕಬೀರರ ಜೀವನದ ಹಲವು ಸತ್ಯಸಂಗತಿಗಳನ್ನು ಹೇಳುತ್ತಿರುವುದಾಗಿ ತಿಳಿಸಿದರು.
ಇದು ಈಗ್ಯೆ ಸುಮಾರು ಮೂರುತಿಂಗಳಿಗೂ ಮೀರಿ ಹಿಂದೆನಡೆದ ಘಟನೆ.
ಆಗ ನಾವುಮಾಡಿಕೋಂಡಿದ್ದ ಟಿಪ್ಪಣಿ ನಮ್ಮ ಸಂಪತ್ತು ಇಲ್ಲಿ ನಮೂದಿಸಲು ನಮಗೆ ಸಹಾಯವಾಗಿದೆ.
ಕಬೀರ-ಸಂತ,ಕವಿ,ಭಕ್ತ,ಚಿಂತಕ,ಮಾಗ೯ದಶ೯ಕ,ಅಲೆಮಾರಿಎಂತೆಲ್ಲ ಹೇಳಿದರು.
ಕಬೀರದೃಷ್ಟಿಯಲ್ಲಿ-ಅಥವಾ ಕಬೀರ ಸಿದ್ಧಾಂತ-
ಜಾತಿ,ಗುರು,ದೇವರು,ಮೂತಿ೯ಪೂಜೆ,ನಾರಿ ಹೀಗೆ ಹಲವು ಆಯಾಮಗಳಲ್ಲಿ ತಮ್ಮ ಪಾಠವನ್ನು ಮಂಡಿಸಿದರು.
ಕಬೀರ ಜೀವನದಲ್ಲಿ ತಾಕಲಾಟವೇ,ಅಥವಾ ಸಂಪನ್ಮೂಲ ಜನದ ವಿಮಶೆ೯ ರಡ್ಡಾಯಿತೇ-ಒಟ್ಟಿನಲ್ಲಿ-
ರೋಚಕ-ಬೋಧಕ ಇವೆಲ್ಲಕ್ಕಿಂತ ದ್ವಂದ್ವವೇ ಮೌಲಿಕವಾಗಿ ನಮಗೆ ಕಾಣಿಸಿದ್ದರಿಂದ ನಮ್ಮ ಬರಹದ ಒತ್ತು ಅದರಸುತ್ತಾ ಮತ್ತು ಪಕ್ಕಾ.
ಜಾತಿಗೆ ಬರೋಣ-
ಕಬೀರ ಬದುಕ್ಕಿದ್ದಾಗಲೇ-ಅವರನ್ನು ಮುಸಲ್ಮಾನ ಜನ ಎಂತ ಆ ಪಂಗಡದವರು-ಅರಾಧಿಸಿದರು-ಓಲೈಸಿದರೂ-ಅನುಮೋದಿಸಿದರು.
ಇದಕ್ಕೆ ಮೂಲಕಾರಣ-ಮುಸಲ್ಮಾನ ದಂಪತಿಗಳು ತಮಗೆ ದೈವಾತ್ ಸಿಕ್ಕ ಮಗುವನ್ನು ಸಾಕಿ,ಸಲುಹಿ ದೊಡ್ಡವನನ್ನಾಗಿಮಾಡಿದರು,ಕಬೀರ ಎಂತ ನಾಮಕರಣ ಮಾಡಿದರು.
ಆದುದರಿಂದ ಕಬೀರ ಮುಸಲ್ಮಾನ ಎಂತಲೇ ಶೈಶವದಿಂದಲೂ ಪರಿಗಣಿಸಲ್ಪಟ್ಟದ್ದರಲ್ಲಿ ಸತ್ಯವಿದೆ,ನಿಶ್ಟೆ ಇದೆ, ಶಿಷ್ಟವಿದೆ.
ಶ್ರೀರಾಮಭಕ್ತ ಆದುದರಿಂದ ಕಬೀರ ಹಿಂದೂ ಜನ ಎಂತ ಹಿಂದೂಪಂಗಡದವರು-ಮೆಚ್ಚಿಕೊಂಡರು,ಮುತ್ತಿಕೊಂಡರು,ಹಾಡಿದರು,ಹೊಗಳಿದರು.
ಬಲ್ಲವನೇ ಬಲ್ಲ ಬೆಲ್ಲದ ಸವಿಯ ಎಂದಂತೆ-ಹಿಂದೂವೋ-ಮುಸಲ್ಮಾನರೋ-ಪರಶಿವನಿಗೇ ಬಿಟ್ಟದ್ದು-ಕಾರಣ -ಅವನದೂ ಅದೇ ಹಾಡು-ಜಾಡು-ಜಾದು.
ಏಕೆ ಎನ್ನುತ್ತೀರೋ-ನೋಡಿ-ಅಧ೯ನಾರ್‍ಈಶ್ವರ-ಒಂಧದ೯ ಪರಶಿವಮತ್ತು ಉಳಿದಧ೯ ಪಾವ೯ತಿ.
ಒಂದರಲ್ಲಿ ಎರಡು-ಎರಡಿದ್ದರೂ ಒಂದೇ.
ಇದೇ ಅಲ್ಲವೇ-“ಆಶ್ಚಯ೯ವತ್ ಪಶ್ಯತಿ ಕಶ್ಚಿದೇನಂ——-“. ಎಂಬ ಸೋಜಿಗ-ಸೊಗಸು?
ಗುರು/ದೇವರು-ಗುರುವೂ ದೇವರೂ ಇಬ್ಬರೂ ಒಮ್ಮೆಲೆ ಎದುರಾದರೆ ತಾನು ಗುರುವನ್ನು ಆರಿಸಿಕೊಂಡು ದೇವರನ್ನು ಹಿಂದಕ್ಕೆ ಮಾಡುವುದಾಗಿ ಕಬೀರ್ ಹೇಳುತ್ತಿದ್ದರು ಎಂತ ಪಾಠಮಾಡಿದವರು ಹೇಳಿದುದು.
ಕಬೀರ ಗುರುವನ್ನು ಅರಸುತ್ತಾ ಹೊರಟದ್ದು-ಗುರು ಸಿಕ್ಕಿದ್ದು-ಗುರುಹೇಳಿದಂತೆ ದೈವದಬಗೆಗೆ ತೊಡಗಿಸಿಕೊಂಡದು-ಇದು ಮೌಲಿಕ ವಿಚಾರ.
ಮೊದಲು ಗುರು ಸಾಕೆಂದ ಕಬೀರನಿಗೆ ನಂತರದ ದೈವಕ್ಕೆ ಪ್ರಾಧಾನ್ಯತೆಯ ವಿಚಾರ ಹೇಗೆ ಮತ್ತು ಏಕ ಮೇರು ಸಂಗತಿಯಾಯಿತು ಎಂತ ಹೇಳಲಿಲ್ಲ ಪಾಠದಜನ.
ನಾವು ಕೇಳಲಿಲ್ಲ ಕಾರಣ ಆಕಾಶವಾಣಿಗೆ ತತ್ಕ್ಷಣ ಪ್ರಶ್ನೆಕೇಳಲು ಅವಕಾಶವೆಲ್ಲಿದೆ?
ಪ್ರಶ್ನೆ ಶೇಷ ಉತ್ತರಮಾತ್ರ ವಿಶೇಷ-ಇದೂ ಆಶ್ಚಯ೯ವೇ ಅಲ್ಲವೇ?
ಮೂತಿ೯ಪೂಜೆ-ಕಲ್ಲನ್ನು ದೇವರುಎಂತ ಒಪ್ಪಲು ಆಗದು ಇದು ಕಬೀರ್ ವಾದ.
ಕಲ್ಲಿನಲ್ಲಿ ಕಷ್ಟ ಕಳೆಯಲು ಪ್ರಾಥಿ೯ಸಿದರೆ ಅದು ಸಾಧ್ಯವೇ-ಸಾಧುವೇ ಇದು ಕಬೀರ್ ವಾದ.
ಕಲ್ಲಿನಲ್ಲಿ ಚಿಕ್ಕಕಲ್ಲು,ದೊಡ್ಡಕಲ್ಲು,ಗುಡ್ಡ,ಬೆಟ್ಟ,ಪವ೯ತ ಎಂತೆಲ್ಲಾ ಭೇದವಿಲ್ಲವೇ-ಚಿಕ್ಕ ದೇವರು,ದೊಡ್ಡದೇವರು ಎಂತ ದೈವಕ್ಕೆ ಮೌಲ್ಯಮಾಪನವಿದೆಯೇ ಎಂತ ಕಬೀರ್ ಪ್ರಶ್ನೆ.
ಅವರು ಕಲ್ಲನ್ನು ದೇವರು ಎನ್ನುವುದಾದರೆ-ಬೀಸುಕಲ್ಲು-ಹಿಂದಿಭಾಷೆಯಲ್ಲಿ “ಚಕ್ಕೀ”-ದೈವ ಎನ್ನಬೇಕು-ಕಾರಣ-
ಅಕ್ಕಿಯನ್ನು ಹಿಟ್ಟುಮಾಡಿ,ಹಿಟ್ಟಿನಿಂದ ರೊಟ್ಟಿಮಾಡಿ,ರೊಟ್ಟಿಯನ್ನು ಆಹಾರವಾಗಿ ಬಳಸಿ ಜೀವನ ನಿವ೯ಹಣೆ ಮಾಡಿ ಬದುಕುವುದರಿಂದ ಆ ತಕ೯ ಕಾರಣಿಕ ಎಂಬ ಕಬೀರ್ ಸತ್ಯ.
ಕಬೀರನ ಈ ವಾದದಲ್ಲಿ ಹುರುಳಿದೆಯೇ ಎಂದರೆ-ಹುಳುಕಿದೆ ಎಂಬುದೇ ಸತ್ಯ.
ಭೂಮಿಯಮೇಲಿರುವ ಎಲ್ಲಾ ದೈವಸ್ಥಾನಗಳಲ್ಲಿಯೂ ಮೂತಿಗ೯ಳಲ್ಲಿ-ಕಲ್ಲಿನದು,ಮಣ್ಣಿನದು,ಮರದ್ದು,ಸಿಮೆಂಟಿನದು ಹೀಗೆಲ್ಲಾ ದೈವಮೂತಿ೯ಗಳಿಲ್ಲವೇ.
ಅಲ್ಲೆಲ್ಲಾ ಭಕ್ತರ,ಆಧ್ಯಾತ್ಮದ,ನೆಮ್ಮದಿಯ ಸೆಲೆಗಳಿಲ್ಲವೇ?
ಅದು ಹಾಗಿರಲಿ ಕಬೀರ ತನ್ನ ರಾಮಾರಾಧನೆಗೆ ದೈವರಾಮನನ್ನು ಏನಲ್ಲಿ ಹೇಗೆ ಸಾಕ್ಷೀಕರಿಸಿಕೊಂಡ?
ಕಬೀರ್ ತಕ೯-ವಿತಕ೯ವಾಯಿತು ಅಷ್ಟೇ-ಅದೇ ಕಬೀರ್ ಮಹಿಮೆ.
ಇನ್ನುಮುಂದೆಹೋಗೋಣ-ಮಹಾಕವಿ ಕಾಳಿದಾಸನ ಮಹೋದ್ಗಾರ-“ಹಿಮಾಲಯೋ ನಾಮ ನಗಾಧಿರಾಜಃ”-
ಹಿಮಾಲಯಕ್ಕೆ ಭಾರತದ ಪರಂಪರೆಯಲ್ಲಿ ಚ್ಯುತಿ ಇಲ್ಲದ-ಮಿತಿ ಇಲ್ಲದ ಮೇರುತನ-ಪವ೯ತರಾಜ.
ಪವ೯ತವಾಗಿಯೂ ಹಿರಿತನ,ರಾಜನಾಗಿಯೂ ಪ್ರಭುತನ-ಕಲ್ಲು-ಟೊಳ್ಳೆ?
ಟೊಳ್ಳಾಗಲಿಲ್ಲವೇ ಕಬೀರ ವಾದ ಅಲ್ಲಿಗೇ?
ನಾರಿ-ಇದರ ಬಗೆಗೆ ಹೆಚ್ಚು ಹೇಳಲಿಲ್ಲ ಸಂಪನ್ಮೂಲ ಜನ-ಕಾರಣ ಅವರಲ್ಲಿ ಹೇಳಲು ಸಂಪತ್ತಿರಲ್ಲಿಲ್ಲವೋ-ಅಥವಾ ಕಬೀರ ವಾದದಲ್ಲಿ ಸಂಪತ್ತಿಲ್ಲವೋ-ಆ ಶ್ರೀರಾಮನಿಗೇ ಗೊತ್ತು.
ಆದರೆ,ಕಬಿರ್ ವಿವಾಹವಾದ್ದದ್ದು ಮಾತ್ರ ಪರಮ ಸತ್ಯ.
ನಾರಿ ಬಗೆಗೆ ಅವರ ಸಿದ್ಧಾತಕ್ಕೆ ಏನಿದರ ಕೊಡುಗೇ?
ಇನ್ನು ನಾಕ-ನರಕ ಕಬೀರ ವಾದ-ಪಾಪ ಪುಣ್ಯವೇ ನಾಕ ನರಕ.
ಸ್ಥಳ,ಮಹಾತ್ಮೆ,ಪುರಾಣ,ಪುಣ್ಯಕ್ಷೇತ್ರ-ಕಾಶಿ,ಮಕ್ಕ ಎಲ್ಲ ಮುಕ್ಕು-ಮುರುಕು.
ಬದುಕಿರುವಾಗ ಭೂಮಿ,ಮರಣಾನಂತರ-ನರಕ ಸ್ವಗ೯-ಭೂಮಿಯಿಂದ ಹೊರಗೆ ಇದು ಸನಾತನಸತ್ಯ ಭಾರತದ ಸಂಸ್ಕೃತಿಗೆ.
ಇಲ್ಲಿ ಕಬೀರ ಚ್ಯುತಿ.
ಎನೀ ಪರಿಸ್ಥಿತಿ?
ರಾಮ-ಕಬೀರನ ದೃಷ್ಟಿಯಲ್ಲಿ-
ದಶರಥನ ಮಗನಲ್ಲ!
ರಾಮ ದೈವ.
ಹಾಗಾದರೆ-ದಾಶರಥಿ-ವ್ಯಥೆಯೆ,ವ್ಯಾಧಿಯೇ?
ಕಬಿರನ ವಾದ ಹಿಡಿದ ಹಾದಿ-ರಾಡಿ-ರಡ್ಡು-
ಮೊದಲು ಗುರು ಸಾಕು ದೇವರು ಬೆಡಾ ಎಂಬ ಎತ್ತರಿಸಿದ ಕೂಗು,
ಪಶ್ಚಾತ್,ರಾಮ-ಶ್ರೀರಾಮಭಕ್ತ-ಅದೇ ಆದಶ೯,ಆಪ್ಯಾಯಮಾನ.
ಕಬೀರ ವಾದ-ವೇದ ವಾಗಲಿಲ್ಲ,ವಧೆಮಾಡಿತು,ಮಾಡಿಸಿತು.
ಶ್ರೀರಾಮ ಅವತಾರ ಪುರುಷ-ಮನುಷ್ಯನಾಗಿ ನಂತರ ಪರದೈವವಾದುದು ಪುರಾಣದ ಹೂರಣ.
ಇಲ್ಲಿದೆ ಒಪ್ಪ ಓರಣ.
ಪುರಂದರದಾಸರು ರಾಮನನ್ನು ಕೊಂಡಾಡಿದರು,
ಶ್ರೀ ತ್ಯಾಗರಾಜರು ಶ್ರೀರಾಮನಿಗೇ ತಮ್ಮ ಜೀವನವನ್ನು ಒಪ್ಪಿಸಿದರು,
ಮುತ್ತುಸ್ವಾಮಿ ದೀಕ್ಷಿತರು ತಮ್ಮ ರಚನೆಗಳಲ್ಲಿ ರಾಮಗುಣಗಾನಮಾಡಿರುವುದೇ ಆ ದೈವದ ಮಹಿಮೆಗೆ ಹಿಡಿದ ಕನ್ನಡಿ.
ಕಬೀರ ತಕ೯-ಕುತಕ೯-ವಿತಕ೯ ಎಲ್ಲಾ ಮಾಡಿ ರಾಮನನ್ನು ಕೊಂಡಾಡಿ-ಕಂಡಾದಿದಂತೆ ಕಣ್ಮರೆಯಾದುದು-
ಆಖ್ಯಾನಕ್ಕೆ ಉಪಸಂಹಾರ.
ಹೇಗದರೂ ಇರಲಿ ತಪ್ಪಿದರೂ-ಒಪ್ಪುವಂತೆ-ಜನಮಾನಸದಲ್ಲಿ ನೆರೆನಿಂತ ಕಬೀರ-ಶ್ರೀರಾಮಭಕ್ತ-
“ರಾಮಾನ್ನಾಸ್ತಿ ಪರಂ ಪರತರಂ”-ಎಂಬ ಸತ್ಯವನ್ನು ಒಪ್ಪಿಕೊಂಡ-ತನ್ನ ದೇಹವನ್ನು ಒಪ್ಪಿಸಿಕೊಂಡ.
ನಾವು ಮಂಗಳ ಹಾಡುತ್ತಾ-“ರಾಮಸ್ಯ ದಾಸೋಸ್ಮ್ಯಹಂ”-ಎಂತ ನಿಲ್ಲಿಸುತ್ತೇವೆ.
ಆರ್.ಎಂ.ಶಮ೯

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here