ವರದಿ: ವಿವೇಕ್ ಸಿ
ಸಿಂಗಾಪುರದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ‘ದಿ ಐಕಾನ್ಆಫ್ ಹೆಲ್ತ್ ಕೇರ್ ಅವಾರ್ಡ್’ ಸಮಾರಂಭದಲ್ಲಿ ಬೆಂಗಳೂರು ಮೂಲದನಂದನ ಹೆಲ್ತ್ ಕೇರ್ ಸರ್ವಿಸ್(ಕಾಡಿ ಆಸ್ಪತ್ರೆಯ ಘಟಕ) ಗೆ ಪ್ರತಿಷ್ಠಿತ ‘ಬೆಸ್ಟ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ’ ಎಂಬ ಪ್ರಶಸ್ತಿ ಪಡೆದಿದೆ.
ಫ್ಲಾಗ್ಶಿಪ್ ಸೆಂಟರ್ ಆಫ್ ಎಕ್ಸೆಲೆನ್ಸ್ ಆಫ್ ನಂದನ ಹೆಲ್ತ್ ಕೇರ್ ಸರ್ವಿಸ್ (ಇಂಡಿಯಾ) ಪ್ರೈ. ಲಿಮಿಟೆಡ್ ಸಂಸ್ಥೆಯು ಟೆರ್ಟೆರಿಕೇರ್ ಮಲ್ಟಿ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿದ್ದು, ಬೆಂಗಳೂರಿನ ಮಂಜುನಾಥ್ ನಗರದ ವೆಸ್ಟ್ ಚೋರ್ಡ್ ರಸ್ತೆಯ ಬಳಿ ಇದೆ. ಈ ಪ್ರಶಸ್ತಿ ಪ್ರಧಾನ ಸಮಾರಂಭವು ಸಿಂಗಾಪುರದ ಪ್ರತಿಷ್ಠಿತ ಬಿಸಿನೆಸ್ ಎಕ್ಸೆಲೆನ್ಸ್ಅಂಡ್ರಿಸರ್ಚ್ ಗ್ರೂಪ್ ಪ್ರೈ.ಲಿಮಿಟೆಡ್ (ಬಿಇಆರ್ಜಿ) ಸಂಸ್ಥೆಯ ಪರಿಕಲ್ಪನೆ.
ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯುತ್ತಮಾಗಿ ಸೇವೆ ಸಲ್ಲಿಸುತ್ತಾ, ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಸಂಸ್ಥೆಗಳನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಬಿಇಆರ್ಜಿ ಸಂಸ್ಥೆಯು ಮಾಡುತ್ತಿದ್ದು, ಈ ಮೂಲಕ ಆಸ್ಪತ್ರೆಗಳನ್ನು ವಿಶ್ವಮಟ್ಟದಲ್ಲಿ ಗುರುತಿಸುವ ಕಾರ್ಯಕ್ಕೆ ಮುಂದಾಗಿದೆ.
‘ದಿ ಐಕಾನ್ಆಫ್ ಹೆಲ್ತ್ ಕೇರ್ ಅವಾರ್ಡ್’ ಮುಖ್ಯವಾಗಿ ಮಧ್ಯ ಪೂರ್ವರಾಷ್ಟ್ರ, ಇಂಡಿಯಾ, ಶೀಲಂಕಾ, ಫಿಲಿಪೈನ್ಸ್, ಥೈಲಾಂಡ್, ಇಂಡೋನೇಶಿಯ ಮತ್ತು ವಿಯಟ್ನಾಂ ರಾಷ್ಟ್ರಗಳಲ್ಲಿನ ವೈದ್ಯಕೀಯ ಬೆಳವಣೆಗೆಗೆ ಉತ್ತೇಜಿಸಿದೆ. ಬೆಂಗಳೂರು ಮೂಲದನಂದನ ಹೆಲ್ತ್ ಕೇರ್ ಸರ್ವಿಸ್(ಕಾಡಿ ಆಸ್ಪತ್ರೆಯ ಘಟಕ) ಆರಂಭಗೊಂಡು ಕೇವಲ 4 ವರುಷಗಳು ಸಂದಿದ್ದು, ವಿಶ್ವಮಟ್ಟದಲ್ಲಿ ತನ್ನ ಛಾಪನ್ನು ಮೂಡಿಸಿದೆ.108 ಬೆಡ್ ಮಲ್ಪಿ ಸ್ಪೆಷಾಲಿಟಿ ಸೌಲಭ್ಯವನ್ನು ಹೊಂದಿರುವ ಈ ಸಂಸ್ಥೆಯು, ವಿಶ್ವದ ಅತ್ಯಂತ ಮುಂದುವರಿದ ತಂತ್ರಜ್ಞಾನವನ್ನು ಒಂದೇ ಸೂರಿನಡಿಯಲ್ಲಿ ಪಡೆಯುವ ಸೌಲಭ್ಯವನ್ನು ಒದಗಿಸಿದೆ.
ಪ್ರಖ್ಯಾತ ಲ್ಯಾಪರೊಸ್ಕೋಪಿಕ್ ಮತ್ತು ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸಕ ಡಾ.ಅನಿಲ್ ಎಸ್ ಮೆಹ್ತಾ ಹೆಗ್ಗಳಿಕೆಯ ‘ಎಕ್ಸೆಲೆನ್ಸ್ಇನ್ ಸರ್ಜರಿ’ ಪ್ರಶಸ್ತಿಯನ್ನು ಪಡೆದಿದ್ದಾರೆ. ಸಾವಿರಾರು ಶಸ್ತ್ರಚಿಕಿತ್ಸಕರನ್ನು ಹಿಂದಿಕ್ಕಿ ಡಾ.ಅನಿಲ್ ಎಸ್ ಮೆಹ್ತಾ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನನ್ನನ್ನು ಗುರುತಿಸಿ ಗೌರವಿಸಿದ ಸಂಸ್ಥೆಗೆ ನಾನುಖುಣಿಯಾಗಿದ್ದೇನೆ. ನಾನು ಗಮನಿಸಿದಂತೆ ನಮ್ಮ ದೇಶದಲ್ಲಿ ಅತ್ಯುತ್ತಮ ಆಸ್ಪತ್ರೆಗಳಿವೆ, ಆದರೆ, ಅವುಗಳಲ್ಲಿ ಸೇವಾ ಮನೋಭಾವ ಕಂಡುಬರುತ್ತಿಲ್ಲ. ನಂದನ ಹೆಲ್ತ್ ಕೇರ್ ಸರ್ವಿಸ್ ಸಂಸ್ಥೆಗೆ ಗುಣಮಟ್ಟದ ಸೇವೆ, ಗುಣಮಟ್ಟದ ಚಿಕಿತ್ಸೆ ಮತ್ತು ಪಾರದರ್ಶಕತೆ ನೀಡುವ ಸ್ಪಷ್ಟ ಉದ್ದೇಶ ಹೊಂದಿದೆ. ಇದು ನಮ್ಮ ಸಂಸ್ಥೆಯ ಶಕ್ತಿ. ಪ್ರತಿಯೊಬ್ಬ ರೋಗಿಯನ್ನು ಪ್ರತಿನಿತ್ಯ ಇದೇ ಉದ್ದೇಶದಿಂದ ನೋಡುತ್ತೇವೆ. ರೋಗಿಗಳು ನಮ್ಮ ಸಂಸ್ಥೆ ಮತ್ತು ಉಳಿದ ಸಂಸ್ಥೆಗಳಿಗೆ ಇರುವ ವ್ಯತ್ಯಾಸವನ್ನು ಅರಿತಿದ್ದಾರೆ. ಅವರ ನಿಜವಾದ ಬೆಂಬಲದಿಂದ ನಾವು ಈ ಮಟ್ಟಿನ ಯಶಸ್ಸು ಗಳಿಸಲು ಸಾಧ್ಯವಾಯಿತು. ರಾಷ್ಟ್ರದಲ್ಲಿಯೇ ಅತ್ಯುತ್ತಮ ಸಾಧನ ಮತ್ತು ಮೂಕಸೌಕರ್ಯವನ್ನು ಹೊಂದಿರುವ ಹೆಗ್ಗಳಿಕೆಯನ್ನು ಹೊಂದಿದ್ದು, ಇಲ್ಲಿರುವ ಬಹುತೇಕಅತ್ಯುತ್ತಮ ಉಪಕರಣಗಳನ್ನು ಜರ್ಮನಿಗಳಂತಹ ದೇಶಗಳಿಂದ ಆಮದು ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.