ಅತಿಥಿ ಉಪನ್ಯಾಸಕರ ನೇರಸಂದರ್ಶನ

0
343

 
ಮ0ಗಳೂರು ಪ್ರತಿನಿಧಿ ವರದಿ
ಮಂಗಳೂರು ಹಾಗೂ ಮಡಿಕೇರಿಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳಲ್ಲಿ ಹಾಗೂ ವಿಶ್ವವಿದ್ಯಾನಿಲಯ ಪ್ರಥಮ ದರ್ಜೆ ಕಾಲೇಜು, ಮಂಗಳಗಂಗೋತ್ರಿ, ಇಲ್ಲಿ 2016-17ನೇ ಸಾಲಿಗೆ ಅತಿಥಿ ಉಪನ್ಯಾಸಕರ ಅವಶ್ಯಕತೆ ಇದೆ.
 
 
 
ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಹೊಂದಿರುವ ಅರ್ಹ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ವರ್ಗ, ಅನುಭವ, ದೂರವಾಣಿ ಸಂಖ್ಯೆ ಇತ್ಯಾದಿ ಸ್ವವಿವರವುಳ್ಳ ಅರ್ಜಿ ಮತ್ತು ದಾಖಲೆಗಳ ಜೆರಾಕ್ಸ್ ಪ್ರತಿ ಹಾಗೂ ಮೂಲದಾಖಲೆಗಳೊಂದಿಗೆ ಜುಲೈ 4 ರಂದು ಮತ್ತು ಜುಲೈ 8 ರಂದು ಕುಲಸಚಿವರ ಕಛೇರಿ, ಆಡಳಿತ ಸೌಧ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ-574199 ಇಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬಹುದು.
 
 
 
ಯು.ಜಿ.ಸಿ. ಎನ್.ಇ.ಟಿ./ಎಸ್.ಎಲ್.ಇ.ಟಿ. ಉತ್ತೀರ್ಣತೆ/ಪಿ.ಹೆಚ್.ಡಿ./ಎಂ.ಫಿಲ್ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ವೆಬ್ ಸೈಟ್ www.mangaloreuniversity.ac.in ಮೂಲಕ ಪಡೆಯುವಂತೆ ಕುಲಸಚಿವರ ಕಚೇರಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here