ಅತಿಥಿ ಉಪನ್ಯಾಸಕರ ನೇಮಕ

0
366

 
ಮ0ಗಳೂರು ಪ್ರತಿನಿಧಿ ವರದಿ
ಮಂಗಳೂರು ವಿಶ್ವವಿದ್ಯಾನಿಲಯ (ಮಂಗಳಗಂಗೋತ್ರಿ/ಚಿಕ್ಕ ಅಳುವಾರ/ಮಂಗಳೂರು/ಮಡಿಕೇರಿಯಲ್ಲಿ) ಸ್ನಾತಕೋತ್ತರ ಕೋರ್ಸುಗಳಿಗೆ 2016-17ನೇ ಸಾಲಿಗೆ ವಿವಿಧ ವಿಷಯಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಲಾಗುತ್ತಿದೆ.
 
 
ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಹೊಂದಿರುವ (ಕನಿಷ್ಠ 55% ಅಂಕದೊಂದಿಗೆ) ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ವಿಶ್ವವಿದ್ಯಾನಿಲಯದ ವೆಬ್ ಸೈಟ್ www.mangaloreuniversity.ac.in ನಿಂದ ಪಡೆದು, ಭರ್ತಿ ಮಾಡಿ ಆಗಸ್ಟ್ 8 ರೊಳಗೆ [email protected] ಗೆ ಇ-ಮೇಲ್ ಕಳುಹಿಸಬಹುದು.
 
 
ಯು.ಜಿ.ಸಿ ಎನ್.ಇ.ಟಿ./ಎಸ್.ಎಲ್.ಇ.ಟಿ. ಉತ್ತೀರ್ಣತೆ/ಪಿ.ಹೆಚ್.ಡಿ/ಎಂ.ಫಿಲ್ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು. ಅರ್ಹತೆ ಹಾಗೂ ಅವಶ್ಯಕತೆಗಳಿಗನುಸಾರವಾಗಿ ಆಯ್ದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನದ ದಿನವನ್ನು ಆಯ್ದ ಅಭ್ಯಥಿಗಳಿಗೆ ಇ-ಮೇಲ್/ಎಸ್.ಎಂ.ಎಸ್. ಮೂಲಕ ತಿಳಿಸಲಾಗುವುದು ಎಂದು ವಿವಿ ಕುಲಸಚಿವರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here